ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಎಲ್ಲಾ ಕಡೆ ಯಶಸ್ಸಿನ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ರಾಬರ್ಟ್ ಬಗ್ಗೆ ಇರೋ ಅನೇಕ ಗುಸು ಗುಸು ಸುದ್ದಿಗಳಿಗೆಲ್ಲಾ ಖುದ್ದು ನಾಯಕ ದರ್ಶನ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ರಾಬರ್ಟ್ ಸಕ್ಸಸ್ ಮೀಟ್ ನಲ್ಲಿ ಘರ್ಜಿಸಿದ್ದಾನೆ ಬಾಕ್ಸಾಫೀಸ್ ಸುಲ್ತಾನ.
ಬಾಷಾ, ಅಲ್ಲಿಂದ ಇಲ್ಲಿಂದ ತೆಗೆದು ರಾಬರ್ಟ್ ಚಿತ್ರ ಮಾಡಲಾಗಿದೆ ಅನ್ನೋ ರೂಮರ್ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ದರ್ಶನ್ ಖಡಕ್ ಟಾಂಗ್ ಕೊಟ್ಟಿದ್ದಾರೆ. ಈ ಎಲ್ಲಾ ಸಿನಿಮಾಗಳಿಂದಲೂ ಪ್ರೇರೇಪಣೆ ಪಡೆದೇ ರಾಬರ್ಟ್ ಮಾಡಿದ್ದೀವಿ. ಸಿನಿಮಾ ನೋಡಿ ಬಂದವರಿಗೆ ಇಷ್ಟವಾಯ್ತಾ? ಎಂಜಾಯ್ ಮಾಡಿದ್ರಾ? ಅಷ್ಟೇ ಬೇಕಾಗಿರೋದು. ಇಲ್ಲಿ ಯಾವುದನ್ನು ಹೇಗೆ ಪ್ರೆಸೆಂಟ್ ಮಾಡ್ತೀವಿ ಅನ್ನೋದಷ್ಟೇ ಮುಖ್ಯ.
ಇದೇ ವೇಳೆ ರಾಬರ್ಟ್ ಸಿನಿಮಾದ ಕತೆ ಬಗ್ಗೆ ಮಾತಾಡೋರಿಗೆ ಲಯನ್ ಕಿಂಗ್ ಹಾಗೂ ಸಾರಥಿ ಕಥೆ ಹೇಳಿದ್ದಾರೆ. ಸಾರಥಿ ಸೆಕೆಂಡ್ ಹಾಫ್ಗೆ ಲಯನ್ ಕಿಂಗ್ ಸಿನಿಮಾದ ಕಥೆಯನ್ನ ತಂದಿಟ್ಟಿದ್ವಿ. ಯಾಕೆ ಕೇಳಿದ್ರು? ಸಿನಿಮಾ ನೋಡಿ ಎಂಜಾಯ್ ಮಾಡಿದ್ರು ಅಷ್ಟೇ. ಸಿನಿಮಾ ಎಲ್ಲಿಂದ ತಂದ್ವಿ ಅನ್ನೋದು ಮುಖ್ಯ ಅಲ್ಲ. ಹೇಗೆ ಟ್ರಿಟ್ಮೆಂಟ್ ಕೊಟ್ಟಿದ್ದೀವಿ ಅನ್ನೋದು ಮುಖ್ಯ ಅಂತ ಡಿ ಬಾಸ್ ವಿರೋಧಿಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ಅನೇಕ ಚಿತ್ರಗಳಲ್ಲಿ ಒಂದಲ್ಲಾ ಒಂದು ಬೇರೆ ಸಿನಿಮಾದ ಕತೆಯ ಎಳೆ ಪ್ರೇರಣೆಯಾಗಿರುತ್ತದೆ. ಮುಖ್ಯವಾಗಿರುವ ವಿಚಾರ ಯಾವುದು ಎಲ್ಲಿಂದ ಬಂತು ಅನ್ನೋದಲ್ಲ, ಚಿತ್ರ ನೋಡಿದ ಪ್ರೇಕ್ಷಕರಿಗೆ ಎಷ್ಟು ಇಷ್ಟವಾಯ್ತು ಎನ್ನುವುದು ಎಂದಿದ್ದಾರೆ ಬಾಕ್ಸಾಫೀಸ್ ಸುಲ್ತಾನ. ಅಷ್ಟೇ ಅಲ್ಲ, ಅನೇಕ ಬಾರಿ ಸಿನಿಮಾ ಸೋಲೋಕೆ ವಿತರಣೆ ಪ್ಲಾನಿಂಗ್ ಯಡವಟ್ಟೇ ಕಾರಣವಾಗಿರುತ್ತದೆ, ಸರಿಯಾದ ವಿತರಣೆ ತಿಳಿಯದ ನಿರ್ಮಾಪಕರು ನನ್ನ ಬಳಿ ಬರಲೇ ಬೇಡಿ ಎಂದೂ ಎಚ್ಚರಿಕೆ ನೀಡಿದ್ದಾರೆ ದಾಸ.