ರೆಬಲ್ ಸ್ಟಾರ್ ಅಂಬರೀಶ್ ನಮ್ಮೊಂದಿಗಿಲ್ಲ ಅಂದ್ರೆ, ಅಭಿಮಾನಿಗಳು ಒಪ್ಪೋದೇ ಇಲ್ಲ. ಅಂಬಿಯ ನೇರ ನುಡಿ, ಬದುಕಿದ ರೀತಿ, ಹಾಸ್ಯ ಪ್ರವೃತ್ತಿ, ಬದುಕುವ ರೀತಿ ಇವೆಲ್ಲವೂ ಅದೆಷ್ಟೋ ಮಂದಿಗೆ ಇಂದಿಗೂ ಪ್ರೇರಣೆ. ಸಿನಿಮಾ, ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಅಂಬರೀಶ್ ಯಶಸ್ಸು ಕಂಡವರು. ಇನ್ನು ಚಿತ್ರರಂಗದ ಪಾಲಿಗಂತೂ ಕಲಿಯುಗದ ಕರ್ಣ. ಸಹಾಯ ಕೇಳಿ ಬಂದವ್ರಿಗೆ ಇಲ್ಲ ಅನ್ನದೆ ವಾಪಾಸ್ ಕಳಿಸಿಲ್ಲ. ಸ್ಯಾಂಡಲ್ವುಡ್ ಪಾಲಿಗಂತೂ ಅಂಬಿ ರೆಬಲ್ಸ್ಟಾರ್ ಅಷ್ಟೇ ಅಲ್ಲ. ಅವ್ರೊಬ್ಬ ಮೋಜುಗಾರ.. ಇಂತಹ ವಿಶಿಷ್ಟ ವ್ಯಕ್ತಿತ್ವ ಇತೀ ಹತ್ತಿರವಿದ್ದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್.
ಹಾಗ್ನೋಡೋಕೆ ಹೋದ್ರೆ, ರೆಬಲ್ ಸ್ಟಾರ್ ಅಂಬರೀಶ್ಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಇಬ್ಬರ ಲೈಫ್ ಸ್ಟೈಲ್ ಒಂದೆನೇ. ಇಬ್ಬರ ಆಸಕ್ತಿ ಒಂದೆನೇ.. ಅಂಬಿಗೂ ಕಾರುಗಳಂದ್ರೆ ಇಷ್ಟ. ದರ್ಶನ್ಗೂ ಕಾರುಗಳಂದ್ರೆ ಪಂಚ ಪ್ರಾಣ. ಮಾತಾಡೋ ರೀತಿ, ಬದುಕೋ ವಿಧಾನ, ಕಷ್ಟ ಎಂದವ್ರಿಗೆ ಸ್ಪಂದಿಸೋ ರೀತಿ ಎಲ್ಲವೂ ಹೆಚ್ಚು-ಕಡಿಮೆ ಒಂದೇ ರೀತಿ ಇದೆ.
‘‘ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು’’ ಎಂದು ಅಂಬರೀಶ್ ಹುಟ್ಟುಹಬ್ಬದಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
ಅಂಬರೀಶ್ ಇದ್ದಿದ್ರೆ, ಇಂದು ಮನೆ ಮುಂದೆ ಜನಸಾಗರವೇ ಸೇರ್ತಿತ್ತು. ಲಾಕ್ಡೌನ್ ಕೊರೊನಾ ಇದ್ರಿಂದ ತಾವಿದ್ದಲ್ಲೇ ಸಂಭ್ರಮಿಸ್ತಿದ್ರು. ಈಗಲೂ ಕೂಡ ಅಭಿಮಾನಿಗಳು ಅದೇ ಕೆಲಸ ಮಾಡ್ತಿದ್ದಾರೆ. ಕನ್ನಡ ಚಿತ್ರರಂಗವನ್ನು ರಂಜಿಸಿದ ಅಂಬರೀಶ್ ಅಭಿಮಾನಿಗಳ ಮನದಲ್ಲಿ ಎಂದಿಗೂ ಅಜರಾಮರರಾಗಿ ಇರುತ್ತಾರೆ.