ಶಿವರಾತ್ರಿಯ ದಿನದಂದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಡಿ ಬಾಸ್ ಸಿನಿಮಾ ಅಂದ್ಮೇಲೆ ಸಕ್ಸಸ್ ಗ್ಯಾರಂಟಿ ಅನ್ನೋದು ಮೊದಲೇ ಗೊತ್ತಿತ್ತಾದರೂ ರಾಬರ್ಟ್ ಮೊದಲ ದಿನವೇ ಆ ಸಕ್ಸಸ್ ಗೆ ಹೊಸಾ ಡೆಫಿನಿಶನ್ ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ದರ್ಶನ್ ಶಿವರಾತ್ರಿಯ ಈ ಸಂದರ್ಭದಲ್ಲಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿಕೊಟ್ಟು ಶಿವನ ದರ್ಶನ ಪಡೆದರು.


ರಾಬರ್ಟ್ ನಿರ್ಮಾಪಕ ಉಮಾಪತಿ ಮತ್ತು ನಾಯಕ ದರ್ಶನ್ ಜೊತೆಯಾಗಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು ದೇವರ ದರ್ಶನ ಪಡೆದರು. ಇಂದು ಹಬ್ಬದ ಪ್ರಯುಕ್ತ ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಭಕ್ತರ ಸಾಲು ದೊಡ್ಡದಿತ್ತು. ಶಿವರಾತ್ರಿಯ ದಿನವೇ ಬಿಡುಗಡೆಯಾದ ಚಿತ್ರ ಯಶಸ್ವಿಯಾಗಿ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿರೋದ್ರಿಂದ ದೇವರ ದರ್ಶನ ಪಡೆಯೋಕೆ ರಾಬರ್ಟ್ ಟೀಂ ಬಂದಿತ್ತು.
ತರುಣ್ ಸುಧೀರ್ ನಿರ್ದೇಶಿಸಿರುವ ರಾಬರ್ಟ್ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರು ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಹಿರಿಯ ನಟ ಅಶೋಕ್, ಜಗಪತಿಬಾಬು, ರವಿಶಂಕರ್ ಮುಂತಾದವರ ದೊಡ್ಡ ತಾರಾಗಣವೇ ಈ ಚಿತ್ರಕ್ಕಿದೆ.