ರಾಬರ್ಟ್ 8ನೇ ದಿನ ಅಮೋಘ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳಲ್ಲಿ ಬೊಂಬಾಟ್ ಬ್ಯುಸಿನೆಸ್ ಮಾಡಿದೆ. ಮೊದಲ ವಾರ ಕರ್ನಾಟಕದಲ್ಲಿ 656 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ನಾಲ್ಕು ದಿನ ಶೇ.80ರಷ್ಟು ಚಿತ್ರಮಂದಿರಗಳು ಹೌಸ್ ಫುಲ್ ಆಗಿತ್ತು. ಅದ್ರಲ್ಲೂ ಮೊದಲ ದಿನದ ಗಳಿಕೆ 17.24 ಕೋಟಿ ಗಳಿಸಿ ಆಲ್ ಟೈಂ ಇಂಡಸ್ಟ್ರಿ ರೆಕಾರ್ಡ್ ಆಗಿದೆ.
ದರ್ಶನ್ ರಾಬರ್ಟ್ ಸಾಧನೆ ಇಲ್ಲಿಗೆ ಮುಗಿದಿಲ್ಲ. ನಾಲ್ಕೇ ದಿನಕ್ಕೆ ರಾಬರ್ಟ್ ₹50 ಕೋಟಿ ಕ್ಲಬ್ ಸೇರಿ ದಾಖಲೆಗಳನ್ನ ಸೃಷ್ಟಿಸುತ್ತಾ ಮುಂದೆ ಸಾಗುತ್ತಿದೆ. ₹100 ಕೋಟಿಯತ್ತ ಯಶಸ್ವಿಯಾಗಿ ಮುನ್ನುಗ್ತಿರೋದ್ರಿಂದ ದರ್ಶನ್ ಮಂತ್ರಾಲಯಕ್ಕೆ ಹೋಗಿದ್ದಾರೆ. ರಾಯರವಾರ ಗುರುವಾರ ಮಂತ್ರಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಘವೇಂದ್ರ ರಾಯರ ವಿಶೇಷ ದರ್ಶನ ಪಡೆದಿದ್ದಾರೆ.
ದರ್ಶನ್ ರಾಯರ ದರ್ಶನ ಪಡೆದು ವಾಪಸ್ ಬಂದಿಲ್ಲ. ರಾಯರ ಸನ್ನಿಧಿಯಲ್ಲಿ ಸಾಕಿರುವ ವಿಶಿಷ್ಟ ಹಸುಗಳ ತಳಿಗಳನ್ನ ನೋಡಿ ಖುಷಿ ಪಟ್ಟಿದ್ದಾರೆ. ಹಸು ಹಾಗೂ ಕುರುಗಳನ್ನ ನೋಡಿ ಸಂಭ್ರಮಿಸಿ, ಅವುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಾಬರ್ಟ್ ಯಶಸ್ಸಿನ ಖುಷಿಯಲ್ಲೇ ರಾಯರ ದರ್ಶನ ಮಾಡಿ ಕಣ್ತುಂಬಿಕೊಂಡಿದ್ದಾರೆ.
ರಾಬರ್ಟ್ ಸಕ್ಸಸ್ ಆಗಿದ್ದು, ದರ್ಶನ್ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಅದ್ರಲ್ಲೂ ಹೊಸ ಹೊಸ ದಾಖಲೆಗಳನ್ನ ಸೃಷ್ಟಿಸ್ತಿರೋದು ಮತ್ತಷ್ಟು ಖುಷಿಕೊಟ್ಟಿದೆ. ಸದ್ಯ ರಾಬರ್ಟ್ ಮುಗಿಸಿರೋ ಡಿ ಬಾಸ್ ಮುಂದೆ ವೀರ ಮದಕರಿ ನಾಯಕ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವೀರ ಮದಕರಿ ನಾಯಕ ಆರಂಭ ಆಗೋ ಸಾಧ್ಯತೆಯಿದೆ.