ಕಳೆದರೆಡು ದಿನಗಳಿಂದ ದರ್ಶನ್ ಹೆಸರಿನಲ್ಲಿ ₹25 ಕೋಟಿ ಸಾಲದ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಜುಲೈ 12 ರಂದು ಬೆಳಗ್ಗೆ ಸ್ವತ: ದರ್ಶನ್ ಪತ್ರಿಕಾಗೋಷ್ಠಿ ನಡೆಸಿ, ಅರುಣಾಕುಮಾರಿ ಯಾರು? ನಿರ್ಮಾಪಕ ಉಮಾಪತಿ ಹಾಗೂ ಅರುಣಾಕುಮಾರಿ ಪರಿಚಯ ಹೇಗಾಯ್ತು? ದರ್ಶನ್ ಹೆಸರಿನಲ್ಲಿ ₹25 ಕೋಟಿ ಸಾಲದ ಅರ್ಜಿ ಹುನ್ನಾರ ಮಾಡಿದ್ಯಾರು? ಇವೆಲ್ಲವುಗಳ ಬಗ್ಗೆ ಇಂಚಿಂಚಾಗಿ ಮಾಹಿತಿ ನೀಡಿದ್ರು.
₹25 ಕೋಟಿ ಸಾಲದ ಪ್ರಕರಣ ಶುರುವಾಗಿದ್ದು ಹೇಗೆ?
ಸಿನಿಮಾ ಶೂಟಿಂಗ್ ಇಲ್ಲದೆ ಇದ್ದಾಗ, ದರ್ಶನ್ ಮೈಸೂರು ಇಲ್ಲವೆ ತೋಟದ ಮನೆಯಲ್ಲಿ ಇದ್ದು ಬಿಡ್ತಾರೆ. ಹೀಗಾಗಿ ಕಳೆದೆರಡು ತಿಂಗಳಿನಿಂದ ಹೆಚ್ಚು ಸಮಯ ಮೈಸೂರಿನಲ್ಲೇ ಇದ್ದರು. ಈ ವೇಳೆ ಜೂನ್ 6 ರಂದು ಉಮಾಪತಿ, ದರ್ಶನ್ಗೆ ಕರೆ ಮಾಡಿದ್ದರು. ನೀವು ಯಾರಿಗಾದ್ರೂ, ಶ್ಯೂರಿಟಿ ಹಾಕಿದ್ದೀರಾ? ಅಂತ ದರ್ಶನ್, ಉಮಾಪತಿ ಕೇಳಿದ್ರು. ದರ್ಶನ್ ಎಷ್ಟಕ್ಕೆ? ಎಂದು ಕೇಳಿದ್ದಾರೆ. ಆಗ ಉಮಾಪತಿ ₹25 ಕೋಟಿ ರೂಪಾಯಿಗೆ ಎಂದು ಹೇಳಿದ್ದರು. ಇದನ್ನು ಕೇಳಿ ಇದೆಲ್ಲೋ ಫೇಕ್ ಇರ್ಬೇಕು ಅಂತ ಉಮಾಪತಿಗೆ ಹೇಳಿದ್ದರು. ಆಗ, ಉಮಾಪತಿ ಇದೇ ಅರುಣಾ ಕುಮಾರಿಗೆ ಫೋನ್ ಕಾನ್ಫರೆನ್ಸ್ ಹಾಕಿದ್ದರು. ಆಗಲೇ ದರ್ಶನ್ ಶಾಕ್ ಆಗಿತ್ತು.
ದರ್ಶನ್ ಸ್ನೇಹಿತರ ಹೆಸರು ಹೇಳಿದ್ದ ಅರುಣಾಕುಮಾರಿ
ಕಾನ್ಫರೆನ್ಸ್ ಕಾಲ್ನಲ್ಲಿ ದರ್ಶನ್ ಸ್ನೇಹಿತರಾದ ಹರ್ಷ ಮೆಲಂಟಾ, ರಾಕೇಶ್ ಪಾಪಣ್ಣ ಮತ್ತು ರಾಕೇಶ್ ಶರ್ಮಾ ಹೆಸರನ್ನು ಪ್ರಸ್ತಾಪ ಮಾಡಲಾಗಿತ್ತು. ಈ ಮೂವರು ನಿಮ್ಮ ಹೆಸರಿನಲ್ಲಿ ನಿಮಗೆ ಗೊತ್ತಿಲ್ಲದಂತೆ ಲೋನ್ಗೆ ಅರ್ಜಿ ಹಾಕಿದ್ದಾರೆಂದು ಅರುಣಾಕುಮಾರಿ ಹೇಳಿದ್ದರು. ಆಗಲೇ ಮ್ಯಾಟರ್ ಸ್ವಲ್ಪ ಸೀರಿಯಸ್ ಆಗಿದ್ದು.
ಅರುಣಾಕುಮಾರಿ-ದರ್ಶನ್ ಭೇಟಿ
ಅರುಣಾಕುಮಾರಿ ಇಷ್ಟೆಲ್ಲಾ ಹೇಳಿದ್ಮೇಲೆ ದರ್ಶನ್ ಮೈಸೂರಿನಿಂದ ಬೆಂಗಳೂರಿಗೆ ಬಂದರು. ಆಗ ಸ್ವತ: ಉಮಾಪತಿಯವರೇ ಅರುಣಾಕುಮಾರಿಯನ್ನು ಕರೆದುಕೊಂಡು ಬಂದಿದ್ದರು. ಆಗ ದರ್ಶನ್ ಸ್ನೇಹಿತರ ಹೆಸರನ್ನು ಪ್ರಸ್ತಾಪ ಮಾಡಿದ್ರು. ಈ ವೇಳೆ ಆಕೆ ತಂದಿದ್ದ ಅರ್ಜಿಯಲ್ಲಿ ದರ್ಶನ್ ಪ್ಯಾನ್ ನಂಬರ್ ಹಾಗೂ ಊರಿನ ಹೆಸರಿತ್ತು. ಬಳಿಕ ದರ್ಶನ್ ತನ್ನ ಸ್ನೇಹಿತರ ಬಳಿ ನಾಗು ಎಂಬುವವರಿಂದ ವಿಚಾರಿಸಿದ್ದಾರೆ. ಅವರು ಇದು ಸಾಧ್ಯವೇ ಇಲ್ಲವೆಂದಿದ್ದಾರೆ.
ದರ್ಶನ್ ತೋಟ ನೋಡ್ಬೇಕು ಎಂದ ಅರುಣಾಕುಮಾರಿ
ದರ್ಶನ್ ಬಳಿ ಅರುಣಾಕುಮಾರಿ ಅವರ ತೋಟ ನೋಡ್ಬೇಕು ಎಂದಿದ್ದರು. ಅದು ತನ್ನ ಪತ್ನಿ ಹೆಸರಿನಲ್ಲಿದೆ ಎಂದು ಹೇಳಿದ್ರೂ, ನೋಡ್ಬೇಕು ಎಂದಿದ್ದರು. ನಂದೀಶ್ ಮತ್ತು ಮಧುಕೇಶ್ ಎಂಬುವವರ ಜೊತೆ ಬಂದು ತೋಟ ನೋಡಿದ್ದರು. ಆಗ ದರ್ಶನ್ ಸ್ನೇಹಿತರಾದ ಹರ್ಷ ಹಾಗೂ ರಾಕೇಶ್ ಎಂಬುವವರನ್ನು ಕರೆಸಿದ್ದರು. ಅವರನ್ನು ನೋಡಿದ ಕೂಡಲೇ ಶಾಕ್ ಆದ ಅರುಣಾಕುಮಾರಿ ಯಾರಿಗೋ ಫೋನ್ ಮಾಡಿ ಮಾತಾಡಿದ್ದರು. ಆಗ ದರ್ಶನ್ಗೆ ಇದು ಫೇಕ್ ಕೇಸ್ ಅನ್ನೋದು ಕ್ಲಿಯರ್ ಆಗಿತ್ತು.
ಅರುಣಾಕುಮಾರಿ ಬ್ಯಾಕ್ಗ್ರೌಂಡ್ ವಿಚಾರಣೆ ಶುರು
ದರ್ಶನ್ ಕೂಡಲೇ ಅರುಣಾಕುಮಾರಿ ಹಿನ್ನೆಲೆ ಕಲೆಹಾಕಿದ್ದರು. ಈ ವೇಳೆ ಅರುಣಾಕುಮಾರಿ ಸೆಕೆಂಡ್ ಪಿಯುಸಿನೂ ಕಂಪ್ಲೀಟ್ ಮಾಡಿಲ್ಲ ಅನ್ನೋದು ಗೊತ್ತಾಗುತ್ತೆ. ಆಕೆಯ ಮಾಜಿ ಪತಿ ಕುಮಾರ್ ಬ್ಯಾಂಕ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. 8 ವರ್ಷದಿಂದ ಇವರು ಜೊತೆಯಲ್ಲಿಲ್ಲವೆಂಬು ಗೊತ್ತಾಗಿತ್ತು. ಹೀಗಾಗಿ ಅರುಣಾಕುಮಾರಿ ವಿರುದ್ಧ ಮೈಸೂರಿನಲ್ಲಿ ದರ್ಶನ್ ದೂರು ದಾಖಲಿಸಿದ್ದಾರೆ.
ಉಮಾಪತಿ ವಿರುದ್ಧವೇ ಅರುಣಾ ಕುಮಾರಿ ಆರೋಪ
ಇಷ್ಟೆಲ್ಲಾ ನಡೆಯೋಕೂ ಮುನ್ನವೇ ಉಮಾಪತಿ ಬೆಂಗಳೂರಿನ ಜಯನಗರದಲ್ಲಿ ದೂರು ದಾಖಲಿಸಿದ್ದರು. ಇದು ದರ್ಶನ್ಗೂ ಗೊತ್ತಿತ್ತು. ಈ ಮಧ್ಯೆ ಅರುಣಾಕುಮಾರಿ ಮತ್ತೊಮ್ಮೆ ದರ್ಶನ್ ಮನೆಗೆ ಬಂದಿದ್ದರು. ಆಗ ಅರುಣಾಕುಮಾರಿಗೆ ಉಮಾಪತಿ ನಿನ್ನ ವಿರುದ್ಧ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಆಗ ಮತ್ತೆ ಶಾಕ್ ಆದ ಮಹಿಳೆ ಇದೆಲ್ಲಾ ಮಾಡೋಕೆ ಹೇಳಿದ್ದೇ ಉಮಾಪತಿ ಎಂದು ಆರೋಪ ಮಾಡಿದ್ದಾಳೆ. ಹೀಗಾಗಿ ಉಮಾಪತಿ ವಿರುದ್ಧ ಎಲ್ಲರೂ ಬೊಟ್ಟು ಮಾಡಿ ತೋರಿಸುತ್ತಿವೆ ಎನ್ನುತ್ತಾರೆ ದರ್ಶನ್
ನಿರ್ಮಾಪಕ ಉಮಾಪತಿ ಹೇಳೋದೇನು?
ಉಮಾಪತಿ ವರಸೆನೇ ಬೇರೆಯಿದೆ. ಮೈಸೂರಿನಲ್ಲಿ ದೂರು ನೀಡುವ ಮುನ್ನ ನಾನೇ ಬೆಂಗಳೂರಿನಲ್ಲಿ ಕಂಪ್ಲೇಂಟ್ ಮಾಡಿದ್ದೇನೆ. ತನಿಖೆ ನಡೆಯುತ್ತಿದೆ. ಅದು ಮುಗಿದ ಕೂಡಲೇ ಸತ್ಯ ಹೊರಬರುತ್ತದೆ. ಆ ಬಳಿಕ ಎಲ್ಲವೂ ಹೊರಬರುತ್ತೆ ಎಂದು ಹೇಳಿದ್ದಾರೆ.
ಈ ಮಧ್ಯೆ ಅರುಣಾಕುಮಾರಿ ಜೊತೆ ಉಮಾಪತಿ ಮಾಡಿದ ವಾಟ್ಸಾಪ್ ಚಾಟ್ ಹಾಗೂ ವಾಯ್ಸ್ ಮೆಸೇಜ್ ಕೂಡ ಸಿಕ್ಕಿದೆ. ಸದ್ಯ ಉಮಾಪತಿ ಹೆಸರು ತಳುಕು ಹಾಕೊಂಡಿದೆ. ಆದ್ರೆ, ಇದೆಲ್ಲವೂ ತನಿಖೆಯಿಂದ ಹೊರಬರುತ್ತೆ ಎಂಬ ವಿಶ್ವಾಸದಲ್ಲಿ ಉಮಾಪತಿ ಇದ್ದಾರೆ.