ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಅಭಿಮಾನಿಗಳ ಸಂಬಂಧನೇ ಬೇರೆ. ದರ್ಶನ್ ಯಾವುದೇ ವಿಷ್ಯಕ್ಕೆ ಕರೆ ಕೊಟ್ಟರೂ ಕಣ್ಮುಚ್ಚಿಕೊಂಡು ಜೈ ಅಂದ್ಬಿಡ್ತಾರೆ. ಇತ್ತೀಚೆಗೆ ಮೃಗಾಲಯದಲ್ಲಿರೋ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು. ಅದ್ರಂತೆ ಫ್ಯಾನ್ಸ್ ಮುಗಿಬಿದ್ದು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.
ದರ್ಶನ್ ಕರೆ ನೀಡಿದ ನಾಲ್ಕು ದಿನಗಳ ಅಂತರದಲ್ಲೇ ಕರ್ನಾಟಕದಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಜ್ಯದ ಒಟ್ಟು 9 ಮೃಗಾಲಯಗಳಿಂದ ಸುಮಾರು ₹70.33 ಲಕ್ಷ ಸಂಗ್ರಹವಾಗಿದೆ. ಈ ಅಂಕಿ ಅಂಶವನ್ನು ಝೂ ಆಫ್ ಕರ್ನಾಟಕ ಹೊರಹಾಕಿದೆ. ಇದೇ ಖುಷಿಯಲ್ಲಿ ದರ್ಶನ್ ಇದ್ದಾರೆ.
ಇದೇ ಸಂದರ್ಭದಲ್ಲಿ ದರ್ಶನ್ ಫ್ಯಾನ್ ಪೇಜ್ ಡಿ ಕಂಪನಿ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಂಭ್ರಮದಲ್ಲಿರೋ ಅಭಿಮಾನಿಗಳಿಗೆ ದರ್ಶನ್ ಧನ್ಯವಾದಗಳನ್ನು ಹೇಳಿದ್ದಾರೆ. ‘‘ ಡಿ ಕಂಪನಿಗೆ ಅಭಿನಂದನೆಗಳು.. ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಧನ್ಯವಾಗಳು’’ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
ಲಾಕ್ಡೌನ್ ಹಾಗೂ ಕೊರೊನಾದಿಂದ ಇಡೀ ಚಿತ್ರರಂಗ ಸೈಲೆಂಟ್ ಆಗಿದೆ. ಈ ಮಧ್ಯೆ ದರ್ಶನ್ ಮುಂದಿನ ಯಾವುದು ಅನ್ನೋ ಕುತೂಹಲ ಕೂಡ ಇದೆ. ಇನ್ನೇನು ಅನ್ಲಾಕ್ ಆಗುವ ಸಂದರ್ಭದಲ್ಲಿ ದರ್ಶನ್ ಹೊಸ ಸಿನಿಮಾ ಘೋಷಣೆ ಮಾಡ್ತಾರಾ? ಅನ್ನೋದನ್ನು ಅಭಿಮಾನಿಗಳು ಕುತೂಹಲದಿಂದ ಎದುರು ನೋಡ್ತಿದ್ದಾರೆ.