ಬಾಕ್ಸಾಫೀಸ್ ಸುಲ್ತಾನ ದರ್ಶನ್ ರ ರಾಬರ್ಟ್ ದಾಖಲೆಗಳನ್ನು ಧೂಳಿಪಟ ಮಾಡುತ್ತಾ ಸಾಗಿದೆ. ಚಿತ್ರ ಬಿಡುಗಡೆಯಾಗಿ ಒಂದು ವಾರದಲ್ಲೇ 78.36 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಕನ್ನಡ ಚಿತ್ರಗಳ ವಿಚಾರದಲ್ಲಿ ದೊಡ್ಡ ದಾಖಲೆ. ದಾಸ ದರ್ಶನ್ ರ ಬೆಸ್ಟ್ ಅವತಾರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಎಲ್ಲೆಡೆ ಸಖತ್ ಸೌಂಡ್ ಮಾಡ್ತಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೇನರ್ ರಾಬರ್ಟ್ ನಲ್ಲಿ ಆಕ್ಷನ್ ಮತ್ತು ಕಾಮಿಡಿ ಕೂಡಾ ಉತ್ತಮವಾಗಿದ್ದು ಜನರನ್ನು ಸೆಳೆಯುತ್ತಿದೆ. ಹೊಸಾ ಬೆಡಗಿ ಆಶಾ ಭಟ್ ರಾಬರ್ಟ್ ನಾಯಕಿಯಾಗಿ ಮಿಂಚಿದ್ದಾರೆ.
ರಾಬರ್ಟ್ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲೂ ಸಖತ್ತಾಗಿ ಮಿಂಚ್ತಾ ಇದ್ದಾನೆ. ಕೇವಲ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೇ ಒಂದು ವಾರದಲ್ಲಿ ಬರೋಬ್ಬರಿ 7.61 ಕೋಟಿ ರೂಪಾಯಿ ಚಾಚಿಕೊಂಡಿದೆ ಈ ಚಿತ್ರ. ದರ್ಶನ್ ಸ್ಟೈಲ್ ಗೆ ತೆಲುಗು ಮಂದಿಯೂ ಫಿದಾ ಆದಂತಿದೆ. ಒಟ್ನಲ್ಲಿ ದಾಖಲೆಗಳ ಯಜಮಾನ ದರ್ಶನ್ ರಾಬರ್ಟ್ ಮೂಲಕ ಹೊಸಾ ರೆಕಾರ್ಡ್ ಕ್ರಿಯೇಟ್ ಮಾಡ್ತಿದ್ದಾರೆ.