ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಾಬರ್ಟ್ ಸ್ಯಾಂಡಲ್ವುಡ್ ಬಾಕ್ಸಾಫೀಸ್ನಲ್ಲಿ ಮೆಗಾ ಹಿಟ್ ಆಗಿದೆ. ಕೇವಲ 20 ದಿನಗಳಲ್ಲೇ ₹100 ಕೋಟಿ ಕ್ಲಬ್ ಸೇರಿ ಭಾರಿ ಸುದ್ದಿಯಾಗಿತ್ತು. ಆದ್ರೀಗ ರಾಬರ್ಟ್ ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ಸುದ್ದಿ ಸಿಕ್ಕಿದೆ. ಅದೇನಂದ್ರೆ, ರಾಬರ್ಟ್ ಅತೀ ಶೀಘ್ರದಲ್ಲೇ ರಾಬರ್ಟ್ 25 ದಿನಗಳನ್ನ ಪೂರೈಸಲಿದೆ.
ದರ್ಶನ್ ಹಾಗೂ ತರುಣ್ ಸುಧೀರ್ ಮೊದಲ ಕಾಂಬಿನೇಷನ್ ಸೂಪರ್ ಹಿಟ್ ಆಗಿದೆ. ಕೇವಲ ನಾಲ್ಕು ದಿನಗಳಲ್ಲೇ ₹50 ಕೋಟಿ ಕೊಳ್ಳೆ ಹೊಡೆದಿದ್ದ ರಾಬರ್ಟ್ 20ನೇ ದಿನಕ್ಕೆ ₹102.43 ಕೋಟಿ ಲೂಟಿ ಮಾಡಿತ್ತು. ಇದೇ ಖುಷಿಯಲ್ಲಿ ದರ್ಶನ್ ತಮ್ಮ ತಂಡಕ್ಕೆ ಭರ್ಜರಿ ಪಾರ್ಟಿಯನ್ನ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ತರುಣ್ ಸುಧೀರ್, ದೇವರಾಜ್, ವಿನೋದ್ ಪ್ರಭಾಕರ್ ಸೇರಿದಂತೆ ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರಮುಖರೆಲ್ಲರೂ ಸೇರಿದ್ದರು.
ಸದ್ಯ ರಾಬರ್ಟ್ ಏಪ್ರಿಲ್ 02ಕ್ಕೆ 23 ದಿನಗಳನ್ನು ಪೂರೈಸಲಿದೆ. ಇನ್ನೆರಡು ದಿನ ಕಳೆದ 25 ದಿನಗಳ ಸಂಭ್ರಮಾಚರಣೆ ಮಾಡಲಿದೆ. ಏಪ್ರಿಲ್ 04 ಭಾನುವಾರಕ್ಕೆ 25 ದಿನ ಪೂರೈಸಲಿದ್ದು, ದರ್ಶನ್ ತಮ್ಮ ಅಭಿಮಾನಿಗಳಿಗೆ ಇನ್ಯಾವ ಸರ್ಪ್ರೈಸ್ ಕೊಡ್ತಾರೋ ಅಂತ ಐರಾವತನ ಫ್ಯಾನ್ಸ್ ಕಾಯ್ತಿದ್ದಾರೆ.
ರಾಬರ್ಟ್ ಕಲೆಕ್ಷನ್ ಇನ್ನೂ ಡೌನ್ ಆಗಿಲ್ಲ. ದಿನದಿಂದ ದಿನಕ್ಕೆ ಮತ್ತಷ್ಟು ಸ್ಟ್ರಾಂಗ್ ಆಗ್ತಾನೇ ಇದೆ. ಹೀಗಾಗಿ 25 ದಿನಗಳ ಹೊಸ್ತಿಲಲ್ಲಿರೋ ರಾಬರ್ಟ್ 50 ದಿನಗಳನ್ನ ಪೂರೈಸಬಹುದು ಅನ್ನೋ ಲೆಕ್ಕಾಚಾರ ಸ್ಯಾಂಡಲ್ವುಡ್ನಲ್ಲಿ ಶುರುವಾಗಿದೆ. 50ನೇ ದಿನಕ್ಕೆ ಬಾಕ್ಸಾಫೀಸ್ನಲ್ಲಿ ₹150 ಕೋಟಿ ಗಳಿಸಿ ಹೊಸ ಇತಿಹಾಸ ಸೃಷ್ಟಿಸುತ್ತಾ? ಅನ್ನೋ ಕುತೂಹಲ ಹೆಚ್ಚಾಗಿದೆ.