ಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಎಲ್ಲರ ಕಣ್ಣಿತ್ತು. ಚಿತ್ರತಂಡವೇ ಮಾರ್ಚ್ 12 ರ ಬೆಳಗ್ಗೆ ಫಸ್ಟ್ ಡೇ ಬಾಕ್ಸಾಫೀಸ್ ರಿಪೋರ್ಟ್ ರಿವೀಲ್ ಮಾಡ್ತಿವಿ ಅಂತನೂ ಹೇಳಿತ್ತು. ಅದಕ್ಕೆ ತಕ್ಕಂತೆ ಈಗ ರಾಬರ್ಟ್ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ ಅನ್ನ ಚಿತ್ರತಂಡವೇ ಹೊರ ಹಾಕಿದೆ.
ಕರ್ನಾಟಕ, ಆಂಧ್ರ, ತೆಲಂಗಾಣ ಮೂರು ರಾಜ್ಯಗಳಲ್ಲಿ ರಾಬರ್ಟ್ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸುಮಾರು 1500ಕ್ಕೂ ಅಧಿಕ ಸ್ಕ್ರೀನ್ ಗಳು ಬಿಡುಗಡೆಯಾಗಿ ದಾಖಲೆ ಬರೆದಿತ್ತು.. 3800 ಶೋಎಲ್ಲಾ ಕಡೆ ಹೌಸ್ ಫುಲ್ ಆಗಿತ್ತು. ಇದು ರಾಬರ್ಟ್ ಫಸ್ಟ್ ಡೇ ರೆಕಾರ್ಡ್. ಇನ್ನೂ ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ವಿಚಾರಕ್ಕೆ ಬಂದ್ರ ದರ್ಶನ್ ರಾಬರ್ಟ್ ಹೊಸ ದಾಖಲೆಯನ್ನೇ ಬರೆದಿದೆ.
Robert First Day Collection
ಕರ್ನಾಟಕ ₹17.24 ಕೋಟಿ
ಆಂಧ್ರ, ತೆಲಂಗಾಣ ₹3.12 ಕೋಟಿ
Total ₹20.36 ಕೋಟಿ
ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ ಹಾಗೆನೇ ಬಾಕ್ಸಾಫೀಸ್ ಕಲೆಕ್ಷನ್ ಜೋರಾಗೇ ಇದೆ. 16ರಿಂದ 20 ಕೋಟಿ ಗಳಿಸ್ಬಹುದು ಎಂದಿದ್ದರು. ಅದರಂತೆ ಈಗ ₹20.36 ಕೋಟಿ ಗಳಿಸಿ, ಆಲ್ ಟೈಮ್ ಇಂಡಸ್ಟ್ರಿ ರೆಕಾರ್ಡ್ ಮಾಡಿದೆ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆಯೇ.
ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ದೊಡ್ಡ ಮಟ್ಟದಲ್ಲಿ ಆಗಿತ್ತು. ಕನ್ನಡ ಸಿನಿಮಾ ಫಸ್ಟ್ ಡೇ ₹17 ಕೋಟಿ ಕಲೆಕ್ಷನ್ ಮಾಡೋದು ಅಂದ್ರೆ, ತಮಾಷೆ ಅಲ್ವೇ ಅಲ್ಲ. ಇದು ಮೊದಲ ದಿನ ಕಲೆಕ್ಷನ್ ಆದ್ರೆ, ಇನ್ನುಳಿದ ಮೂರು ದಿನಗಳಲ್ಲಿ ರಾಬರ್ಟ್ ಎಷ್ಟು ಕೋಟಿ ಮಾಡುತ್ತೆ? ಈ ವಾರಾಂತ್ಯದಲ್ಲಿ 50 ಕೋಟಿ ದಾಟುತ್ತಾ? ಅನ್ನೋ ಕುತೂಹಲ ಸಿನಿಮಾ ಮಂದಿಯಲ್ಲಿದೆ.