ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಫುಲ್ ಖುಷಿಯಾಗಿದ್ದಾರೆ. ದರ್ಶನ್ ರಾಬರ್ಟ್ ನೂರು ಕೋಟಿ ಕೊಳ್ಳೆ ಹೊಡೆದಿದ್ದಷ್ಟೇ ಅಲ್ಲದೆ 25 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೇ ಖುಷಿಯಲ್ಲಿ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಶೂಟಿಂಗ್ ಅನ್ನ ಆರಂಭಿಸಿದ್ದಾರೆ.
ಶ್ರೀ ಮುರಳಿಯ ಮದಗಜ ನಾಲ್ಕುನೇ ಹಂತ ಚಿತ್ರೀಕರಣ ಇತ್ತೀಚೆಗಷ್ಟೇ ಕಂಠೀರವ ಸ್ಟುಡಿಯೋದಲ್ಲಿ ಆರಂಭ ಆಗಿದೆ. ಜಬರ್ದಸ್ತ್ ಆ್ಯಕ್ಷನ್ ದೃಶ್ಯಗಳನ್ನ ಸೆರೆಹಿಡಿಯಲಾಗುತ್ತಿದೆ. ನೈಟ್ ಎಫೆಕ್ಟ್ನಲ್ಲಿ ಸಿನಿಮಾ ಶೂಟ್ ಮಾಡುತ್ತಿದ್ದು, ಭರ್ಕರಿ ಸೆಟ್ ಹಾಕಲಾಗಿದೆ. ಇದೇ ವೇಳೆ ಮದಗಜ ಸಿನಿಮಾ ಸೆಟ್ನಲ್ಲಿ ರಾಬರ್ಟ್ 25 ದಿನವನ್ನ ಕೇಕ್ ಕಟ್ ಮಾಡಿ ಸಂಭ್ರಮಿಸಲಾಗಿದೆ.
ಅಂದ್ಹಾಗೆ ರಾಬರ್ಟ್ ಸಿನಿಮಾವನ್ನ ನಿರ್ಮಿಸಿರೋ ಉಮಾಪತಿನೇ ಮದಗಜ ಚಿತ್ರಕ್ಕೂ ಹಣ ಹೂಡಿದ್ದಾರೆ. ಹೀಗಾಗಿ ಮದಗಜ ಸೆಟ್ಟಲ್ಲಿ ಉಗ್ರಂ ಶ್ರೀಮುರಳಿ ಜೊತೆ ರಾಬರ್ಟ್ ಸಕ್ಸಸ್ ಅನ್ನ ಸಂಭ್ರಮಿಸಲಾಗಿದೆ. ಈ ವೇಳೆ ಮದಗಜ ಚಿತ್ರತಂಡ ಕುಣಿದು ಕುಪ್ಪಳಿಸಿ ಸಂಭ್ರಮಿಸಿದೆ.
ಮದಗಜಗೆ ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ರಾಬರ್ಟ್ ಪ್ರಚಾರದ ಉಸ್ತುವಾರಿಯನ್ನ ಮಹೇಶ್ ಕುಮಾರ್ ನೋಡಿಕೊಂಡಿದ್ದರು. ಸದ್ಯ ರಾಬರ್ಟ್ 50 ದಿನಗಳತ್ತ ಮುನ್ನುಗ್ಗುತ್ತಿದ್ದು, ಈಗಾಗ್ಲೇ 100 ಕೋಟಿ ಕ್ಲಬ್ ಸೇರಿದೆ.