ದರ್ಶನ್ ರಾಬರ್ಟ್ ಸಿನಿಮಾ ಸೂಪರ್ ಸಕ್ಸಸ್ ಆಗಿದೆ. ಕೊರೊನಾ ಕಾಲದಲ್ಲೂ ಜನರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ರಾಬರ್ಟ್ ₹100 ಕೋಟಿ ಕ್ಲಬ್ ಸೇರುತ್ತಿದ್ದಂತೆ ದರ್ಶನ್ ಸಿನಿಮಾಗಳ ಆಯ್ಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಸದ್ಯ ಹರಿದಾಡ್ತಿರೋ ಸುದ್ದಿ ಪ್ರಕಾರ, ರಾಬರ್ಟ್ ಬಳಿಕ ಸೆಟ್ಟೇರಬೇಕಿದ್ದ ಗೋಲ್ಡ್ ರಿಂಗ್ ಗೂ ದರ್ಶನ್ ಬ್ರೇಕ್ ಹಾಕೋಕೆ ನಿರ್ಧರಿಸಿದ್ದಾರೆ ಅನ್ನುವ ಗುಸುಗುಸು ಶುರುವಾಗಿದೆ.
ರಾಬರ್ಟ್ ಬಳಿಕ ದರ್ಶನ್ ರಾಜ ವೀರಮದಕರಿ ನಾಯಕ ಸಿನಿಮಾ ಸೆಟ್ಟೇರಬೇಕಿತ್ತು. ಆದ್ರೆ, ಕೊರೊನಾದಿಂದಾಗಿ ಮದಕರಿನಾಯಕ ಚಿತ್ರವನ್ನ ಕೆಲ ಕಾಲ ಮುಂದೂಡಲಾಗಿದೆ. ಹೀಗಾಗಿ ಗೋಲ್ಡ್ ರಿಂಗ್ ಶುರುವಾಗುತ್ತೆ ಅಂತಿತ್ತು. ಆದ್ರೀಗ ಗೋಲ್ಡ್ ರಿಂಗ್ ಕೂಡ ಬೇಡ ಅಂದಿದ್ದಾರೆ ಅನ್ನೋದು ದರ್ಶನ್ ಆಪ್ತವಲಯದಲ್ಲಿ ಕೇಳಿಬರ್ತಿದೆ.
ದರ್ಶನ್ ಒಂದು ಸಿನಿಮಾಗಾಗಿ ಇಷ್ಟೊಂದು ಲೆಕ್ಕ ಹಾಕೋಕೆ ಕಾರಣ ರಾಬರ್ಟ್ ಸಕ್ಸಸ್. ₹100 ಕೋಟಿ ಸಿನಿಮಾದ ಯಶಸ್ಸನ್ನ ಹಾಗೇ ಮುಂದುವರೆಸಿಕೊಂಡು ಹೋಗ್ಬೇಕು. ಅಲ್ಲದೆ ಗೋಲ್ಡ್ ರಿಂಗ್ ಸಿನಿಮಾಗೆ ಇನ್ನೂ ನಿರ್ದೇಶಕರು ಬೇರೆ ನಿಗದಿಯಾಗಿಲ್ಲ. ಹೀಗಾಗಿ ಪ್ರಾಜೆಕ್ಟ್ ಬಗ್ಗೆ ಕ್ಲಾರಿಟಿ ಸಿಗೋವರೆಗೂ ಗೋಲ್ಡ್ ರಿಂಗ್ ಬೇಡ ಅಂತಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.
ರಾಬರ್ಟ್ ಬಳಿಕ ದರ್ಶನ್ ಯಾವ ಸಿನಿಮಾ ಒಪ್ಪಿಕೊಳ್ತಾರೆ? ಮೊದಲು ಶುರುವಾಗೋ ಸಿನಿಮಾ ಯಾವುದು? ಅನ್ನೋದು ಸದ್ಯಕ್ಕೆ ಕುತೂಹಲದ ಪ್ರಶ್ನೆಯಾಗಿದೆ. ಆದ್ರೆ, ಗೋಲ್ಡ್ ರಿಂಗ್ ಮಾತ್ರ ಸೆಟ್ಟೇರಲ್ಲ ಅನ್ನೋ ಮಾತು ಕೇಳಿಬರ್ತಿದೆ. ಆದ್ರೆ, ಅಧಿಕೃತವಾಗಿ ದರ್ಶನ್ ಅಥವಾ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಪುತ್ರ ಯತೀಂದ್ರ ಮಾಹಿತಿ ನೀಡಿಲ್ಲ.