ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಯುವರತ್ನ ಇತ್ತೀಚೆಗೆ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆಗಿತ್ತು. ಅಮೆಜಾನ್ ಪ್ರೈಮ್ ದೊಡ್ಡ ಮೊತ್ತಕ್ಕೆ ಯುವರತ್ನ ಸಿನಿಮಾವನ್ನ ಖರೀದಿ ಮಾಡುತ್ತಿತ್ತು. ಅಪ್ಪು ಸಿನಿಮಾ ಹಿಂದೆನೇ ಈಗ ಮತ್ತೊಂದು ಬ್ಲಾಕ್ಬಸ್ಟರ್ ಸಿನಿಮಾ ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿದೆ. ಆ ಸಿನಿಮಾ ಮತ್ಯಾವುದೂ ಅಲ್ಲ ಚಾಲೆಂಜಿಂಗ್ ದರ್ಶನ್ ಅಭಿನಯದ ರಾಬರ್ಟ್.
ರಾಬರ್ಟ್ ಸಿನಿಮಾ ಇತ್ತೀಚೆಗಷ್ಟೇ ಬಾಕ್ಸಾಫೀಸ್ನಲ್ಲಿ ₹100 ಕೋಟಿ ಗಳಿಸಿತ್ತು. ಅಲ್ಲದೆ ಇನ್ನೇನು 50 ದಿನ ದ ಸಂಭ್ರಮ ಆಚರಿಸ್ಬೇಕು ಅನ್ನುವಷ್ಟರಲ್ಲೇ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಬರ್ ಇದೇ ಏಪ್ರಿಲ್ 25ರಂದು ಅಮೆಜಾನ್ ಪ್ರೈಮ್ ಬಿಡುಗಡೆಯಾಗಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಈ ಚಿತ್ರದಲ್ಲಿ ಜಗಪತಿ ಬಾಬು, ರವಿ ಕಿಶನ್, ವಿನೋದ್ ಪ್ರಭಾಕರ್ ಮತ್ತು ಆಶಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಏಪ್ರಿಲ್ 25 ಕ್ಕೆ ದರ್ಶನ್ ರಾಬರ್ಟ್ ಮನೆಮನೆಗೆ ಬರಲಿದ್ದು, ವಿಶ್ವದ 240 ದೇಶಗಳ ಜನರು ಅಮೆಜಾನ್ ಪ್ರೈಮ್ ಮೂಲಕ ರಾಬರ್ಟ್ ವೀಕ್ಷಿಸಬಹುದು.
‘‘ಸ್ಯಾಂಡಲ್ವುಡ್ನಿಂದ ಮಾತ್ರವಲ್ಲದೆ ಭಾರತದಾದ್ಯಂತ ನನಗೆ ದೊರೆಯುವ ಪ್ರೀತಿಯು ಅಗಾಧ. ಈಗ ಮನೆಯಲ್ಲೇ ಇರುವ ಪ್ರೇಕ್ಷಕರ ಹಿತದೃಷ್ಟಿಯಿಂದ, ರಾಬರ್ಟ್ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಾಬರ್ಟ್ ವಿಶ್ವದಾದ್ಯಂತ ಡಿಜಿಟಲ್ ಪ್ರದರ್ಶನ ಕಾಣುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿದೆ. ಏಪ್ರಿಲ್ 25 ರಿಂದ ಬಿಡುಗಡೆಯಾಗುವ ಈ ಸಿನಿಮಾವನ್ನು ವಿಶ್ವದಾದ್ಯಂತದ ಪ್ರೇಕ್ಷಕರು ಆನಂದಿಸಬಹುದು. ರಾಬರ್ಟ್ ಚಿತ್ರದ ಕಥಾವಸ್ತುವು ಪ್ರೇಕ್ಷಕರನ್ನು ತಲ್ಲೀನಗೊಳ್ಳುವಂತೆ ಮಾಡುತ್ತದೆ. ಚಿತ್ರದಲ್ಲಿನ ನನ್ನ ಪಾತ್ರವು ವೀಕ್ಷಿಸಲು ಆಸಕ್ತಿದಾಯಕವಾಗಿದೆ. ದರೋಡೆಕೋರ, ನಿಷ್ಠಾವಂತ ಸ್ನೇಹಿತ ಮತ್ತು ಉತ್ತಮ ತಂದೆಯಂತಹ ವಿಭಿನ್ನ ಅವತಾರಗಳಲ್ಲಿ ನನ್ನನ್ನು ನೋಡಬಹುದು.” ಎಂದಿದ್ದಾರೆ ದರ್ಶನ್.
ಇನ್ನೊಂದ್ಕಡೆ ‘‘ರಾಬರ್ಟ್ ಈ ವರ್ಷದ ಅತ್ಯಂತ ಯಶಸ್ವಿ ಕನ್ನಡ ಸಿನಿಮಾ. ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ನಂತರ ಚಲನಚಿತ್ರವನ್ನು ಪ್ರೈಮ್ ಸದಸ್ಯರ ಮುಂದೆ ತರಲು ನಮಗೆ ಸಂತೋಷವಾಗಿದೆ’’ ಎಂದು ಅಮೆಜಾನ್ ಪ್ರೈಮ್ ತಂಡ ಹೇಳಿದೆ.
‘‘ನಮ್ಮ ನಾಯಕ ರಾಘವನಿಂದ ರಾಬರ್ಟ್ಗೆ ಬದಲಾಗುವುದನ್ನು ನೋಡುವುದೇ ಒಂದು ಪರಮಾನಂದ. ಅಲ್ಲದೆ ದರ್ಶನ್ ನಾಯಕನಾಗಿ ರಾಷ್ಟ್ರವ್ಯಾಪಿ ಅಭಿಮಾನಿ ಬಳಗ ಹೊಂದಿದ್ದಾರೆ. ರಾಬರ್ಟ್ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂದು ನನಗೆ ತಿಳಿದಿತ್ತು. ಸ್ಯಾಂಡಲ್ವುಡ್ನ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಆನಂದಿಸಿದ್ರೆ, ಈ ಸಿನಿಮೀಯ ಅದ್ಭುತವನ್ನು ಮತ್ತಷ್ಟು ಪ್ರೇಕ್ಷಕರ ಬಳಿಗೆ ಕೊಂಡೊಯ್ಯಲು ನಾವು ಉತ್ಸುಕರಾಗಿದ್ದೇವೆ’’ ಎಂದಿದ್ದಾರೆ ನಿರ್ದೇಶಕ ತರುಣ್ ಸುಧೀರ್.