ರಾಬರ್ಟ್ ಬಾಕ್ಸಾಫೀಸ್ನಲ್ಲಿ ₹100 ಕೋಟಿ ದೋಚಿದ ಸಿನಿಮಾ. ಇಷ್ಟ ದಿನ ಥಿಯೇಟರ್ನಲ್ಲಿ ಸದ್ದು ಮಾಡಿದ ಚಿತ್ರವೀಗ ಒಟಿಟಿಗೆ ಲಗ್ಗೆ ಇಟ್ಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಏಪ್ರಿಲ್ 25ರಂದು ಅಮೆಜಾನ್ನಲ್ಲಿ ರಿಲೀಸ್ ಆಗಿದ್ದು ಡಿಬಾಸ್ ಅಭಿಮಾನಿಗಳಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ.
ರಾಬರ್ಟ್ ಅಮೆಜಾನ್ನಲ್ಲಿ ಬಿಡುಗಡೆಯಾಗ್ತಿರೋ ದಾಸನ ಮತ್ತೊಂದು ದುಬಾರಿ ಸಿನಿಮಾ. ಈ ಹಿಂದೆ ಯಜಮಾನ ಕೂಡ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಈಗ ತರುಣ್ ಹಾಗೂ ದರ್ಶನ್ ಕಾಂಬಿನೇಷನ್ನ ಮೊದಲ ಸಿನಿಮಾ ರಾಬರ್ಟ್ ಒಟಿಟಿಯಲ್ಲಿ ಸದ್ದು ಮಾಡೋಕೆ ಶುರುವಿಟ್ಕೊಂಡಿದೆ.
ಲಾಕ್ಡೌನ್ ಬಳಿಕ ದರ್ಶನ್ ಸಿನಿಮಾ ರಾಬರ್ಟ್ ಗ್ರ್ಯಾಂಡ್ ರಿಲೀಸ್ ಆಗಿತ್ತು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ಸುಮಾರು 1300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಮೊದಲ ನಾಲ್ಕು ದಿನಗಳಲ್ಲೇ ₹50 ಕೋಟಿ ಕ್ಲಬ್ ಸೇರಿದ್ದ ಸಿನಿಮಾ ₹100 ಕೋಟಿ ಗಳಿಸಿ ದಾಖಲೆ ಬರೆದಿತ್ತು.
ರಾಬರ್ಟ್ ಸಿನಿಮಾ 50 ದಿನದ ಸನಿಹದಲ್ಲಿರುವಾಗ್ಲೇ ನೈಟ್ ಕರ್ಫ್ಯೂ, ಶೇ. 50ರಷ್ಟು ಸೀಟು ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಯುವರತ್ನ ಸಿನಿಮಾದ ಹಿಂದೆನೇ ರಾಬರ್ಟ್ ಕೂಡ ಅಮೆಜಾನ್ ನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.