ತೆರೆಮೇಲೆ “ರಾಬರ್ಟ್” ದರ್ಶನ್ ಆರ್ಭಟ ಜೋರಾಗಿದೆ. ಬಾಕ್ಸಾಫೀಸ್ ನಲ್ಲೂ ಡಿ ಬಾಸ್ ಹವಾ ನೆಕ್ಸ್ಟ್ ಲೆವೆಲ್ ನಲ್ಲೇ ಇದೆ. ಅಭಿಮಾನಿಗಳಿಗೆ ಮಾತ್ರವಲ್ಲ, ಕಾಮನ್ ಆಡಿಯನ್ಸ್ ಗೂ ರಾಬರ್ಟ್ ಸಿನಿಮಾ ಇಷ್ಟವಾಗಿದೆ. ರಾಮನಾಗಿಯೂ ರಾಘವನಾಗಿಯೂ ದರ್ಶನ್ ಸಕ್ಸಸ್ ಕಂಡಿದ್ದಾರೆ. ಎಲ್ಲಾ ಕಡೆ ಪಾಸಿಟಿವ್ ರಿವ್ಯೂಸ್ ಬರ್ತಿದ್ದು, ಇನ್ನೊಂದು ವಾರ ರಾಬರ್ಟ್ ಜಾತ್ರೆ ಮುಂದುವರೆಯೋದು ಪಕ್ಕಾ ಆಗೋಗಿದೆ. ದೊಡ್ಡ ಸಿನಿಮಾ ನೋಡಿ ವರ್ಷವೇ ಆಗೋಗಿತ್ತು. ಆ ಬರವನ್ನ ರಾಬರ್ಟ್ ಈಡೇರಿಸಿದ್ದಾನೆ. ಅದೇ ಕಾರಣಕ್ಕೋ ಏನೋ ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ರಾಬರ್ಟ್ ಹಬ್ಬ ಕೂಡ ಕಳೆಕಟ್ಟಿದೆ. ಮೊದಲ ದಿನವೇ ಸಿನಿಮಾ 20 ಕೋಟಿ ಕಲೆಕ್ಷನ್ ಮಾಡಿರುವ ಸುಳಿವು ಸಿಕ್ತಿದೆ. ಅದನ್ನೆಲ್ಲಾ ಪಕ್ಕಕ್ಕಿಡೋಣ. ಸೀದಾ ಮ್ಯಾಟರ್ ಗೆ ಬರೋಣ.
ರಾಬರ್ಟ್ ಚಿತ್ರದ ಹೀರೋ ದರ್ಶನ್. ಡೈರೆಕ್ಟರ್ ತರುಣ್ ಸುಧೀರ್. ಆದ್ರೆ ದರ್ಶನ್ ಎದುರು ಅಕ್ಷರಶಃ ತರುಣ್ ಸುಧೀರ್ ಸೋತುಬಿಟ್ಟಿದ್ದಾರೆ. ಅವರು ಗೆದ್ದಿದ್ರೆ, ರಾಬರ್ಟ್ ದರ್ಬಾರ್ ಇನ್ನೂ ಜೋರಾಗಿ ಇರ್ತಿತ್ತು. ‘ಚೌಕ’ ಅನ್ನೋ ವಿಭಿನ್ನ ಸಿನಿಮಾ ಕೊಟ್ಟ ತರುಣ್ ಈ ಬಾರಿ ಮತ್ತೊಂದು ಮ್ಯಾಜಿಕ್ ಮಾಡ್ತಾರೆ ಅಂತ್ಲೇ ಎಲ್ಲಾ ಅಂದುಕೊಂಡಿದ್ರು. ಆದ್ರೆ ದರ್ಶನ್ ಪರ್ಫಾರ್ಮೆನ್ಸ್ ಮುಂದೆ ತರುಣ್ ನಿಜಕ್ಕೂ ಮಂಕಾಗಿದ್ದಾರೆ.
ದರ್ಶನ್ ಕಮರ್ಷಿಯಲ್ ಸಿನಿಮಾ ಅಂದ್ರೆ, ನಾಲ್ಕು ಫೈಟ್ಸ್, ನಾಲ್ಕು ಸಾಂಗ್ಸ್ ಅಷ್ಟೇ ಅನ್ನೋ ಮಾತಿತ್ತು. ಆದ್ರೆ ರಾಬರ್ಟ್ ಚಿತ್ರದಲ್ಲಿ ಬೇರೇನೆ ಟ್ರೈ ಮಾಡಿದ್ದೀನಿ ಅಂತ ಮೊದಲಿನಿಂದ ಹೇಳ್ತಾ ಬರ್ತಿದ್ರು. ಎಸ್ ಅಫ್ ಕೋರ್ಸ್ ದರ್ಶನ್ ಹೇಳಿದ ರೀತಿಯಲ್ಲೇ ಅವರ ಪಾತ್ರ, ಅವರ ಅಭಿನಯ, ಡ್ಯಾನ್ಸ್ ಎಲ್ಲದರಲ್ಲೂ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದು ಖುದ್ದು ದರ್ಶನ್ ಅಭಿಮಾನಿಗಳಿಗೂ ಸರ್ ಪ್ರೈಸ್. ತಾವು ಎಕ್ಸ್ ಪೆಕ್ಟ್ ಮಾಡಿದ್ದಕ್ಕಿಂತ ಬಾಸ್ ಜಾಸ್ತಿ ಕೊಟ್ಟಿದ್ದಾರೆ. ರಾಬರ್ಟ್, ರಾಘವ ಹೀಗೆ ಎರಡು ಶೇಡ್ ರೋಲ್ ನಲ್ಲಿ ಮೆಸ್ಮರೈಸ್ ಮಾಡಿದ್ದಾರೆ. ಅವರ ಸ್ಟ್ರಾಂಗ್ ಸ್ಕ್ರೀನ್ ಪ್ರಸೆನ್ಸ್ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್. ಒಮ್ಮೆ ಸ್ಟೈಲಿಶ್ ಲುಕ್ನಲ್ಲಿ ಮತ್ತೊಮ್ಮೆ ಶರ್ಟ್, ಪಂಚೆಯಲ್ಲಿ ಮಗದೊಮ್ಮೆ ಹನುಮನ ವೇಷಧಾರಿಯಾಗಿ ಕಮಾಲ್ ಮಾಡಿದ್ದಾರೆ. ಯಾವುದೇ ಕೌಂಟರ್ ಡೈಲಾಗ್ಸ್ ಇಲ್ಲ. ಫೈಟ್ಸ್ ಕೂಡ ಅವರ ರೆಗ್ಯುಲರ್ ಸಿನಿಮಾದಲ್ಲಿ ಇಲ್ಲ. ಬಹಳ ಸ್ಟೈಲಿಶ್ ಆಗಿ ಕಂಪೋಸ್ ಮಾಡಿದ್ದಾರೆ. ಪಾತ್ರಕ್ಕಾಗಿ ಕೊಂಚ ಮ್ಯಾನರಿಸಂ, ಬಾಡಿ ಲಾಂಗ್ವೇಜ್ ಚೇಂಜ್ ಮಾಡ್ಕೊಂಡಿದ್ದಾರೆ. ಬಿಕ್ಕಳಿಸುತ್ತಾ ಮಾತನಾಡುವ ರಾಘವನಾಗಿಯೂ ಪಾತ್ರದಲ್ಲಿ ಒಗ್ಗಿಕೊಂಡಿದ್ದಾರೆ. ಸ್ವತಃ ದರ್ಶನ್ ಅವರೇ ಹೇಳಿದಂತೆ ಹಿಂದಿನ ತಮ್ಮ ಯಾವುದೇ ಕರ್ಮಷಿಯಲ್ ಸಿನಿಮಾದಲ್ಲಿ ಆ್ಯಕ್ಟ್ ಮಾಡದವರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ. ನಿಜಕ್ಕೂ ಸಿನಿಮಾದಲ್ಲಿ ಅಭಿಮಾನಿಗಳಿಗೆ ಹೊಸ ದರ್ಶನ್ ಸಿಕ್ಕಿದ್ದಾರೆ. ಇದನ್ನ ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. ಆ ಲೆಕ್ಕ ಹಾಕಿದ್ರೆ, ದರ್ಶನ್ ಅವರ ಕರಿಯರ್ ನಲ್ಲೇ ರಾಬರ್ಟ್ ಬಹಳ ವಿಶೇಷವಾದ ಸಿನಿಮಾ. ರಾಬರ್ಟ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ರದ್ದು ಒನ್ ಮ್ಯಾನ್ ಶೋ.
ದರ್ಶನದ ಅವರಿಂದ ಇಂತಹದೊಂದು ಚಮತ್ಕಾರ ಮಾಡಿಸಿದ ತರುಣ್ ಸುಧೀರ್ ಕಥೆ ಕಟ್ಟಿಕೊಡುವಲ್ಲಿ ಎಡವಿದ್ದಾರೆ. ಇಷ್ಟೆಲ್ಲ ಮಾಡಿದವರು ಕಥೆ ಬಗ್ಗೆ ಗಮನ ಹರಿಸಿದ್ರೆ. ರಿಸಲ್ಟ್ ಇನ್ನು ದೊಡ್ಡದಾಗಿ ಇರ್ತಿತ್ತು. ಕನ್ನಡ ಸೇರಿದಂತೆ ಒಂದಷ್ಟು ಬೇರೆ ಭಾಷೆಯ ಕಮರ್ಷಿಯಲ್ ಚಿತ್ರಗಳ ಛಾಯೆ ರಾಬರ್ಟ್ ಚಿತ್ರದಲ್ಲಿ ಎದ್ದು ಕಾಣುತ್ತೆ. ಚಿತ್ರದಲ್ಲಿರೋ ಮೇಜರ್ ಟ್ವಿಸ್ಟ್ ಗಳಲ್ಲಿ ಮತ್ತಷ್ಟು ಧಮ್ ಬೇಕಿತ್ತು. ರೊಟೀನ್ ಸ್ಟೋರಿ ಮಾಡಿ ದರ್ಶನ್ ಪರ್ಫಾರ್ಮೆನ್ಸ್ ಮುಂದೆ ತರುಣ್ ಸೋತಿದ್ದಾರೆ. ಕುಷ್ಕಾ ಚೆನ್ನಾಗಿದೆ, ಪೀಸ್ ಚೆನ್ನಾಗಿಲ್ಲ ಅನ್ನೋತರ ಆಗೋಗಿದೆ. ಮೇಕಿಂಗ್, ಸ್ಟಾರ್ ಕಾಸ್ಟ್, ರಾಬರ್ಟ್ ಕ್ಯಾರೆಕ್ಟರ್ ಡಿಸೈನ್ ಮಾಡೋಕೆ ತೋರಿಸಿದ ಶ್ರದ್ಧೆಯನ್ನ ಕಥೆ ಕಟ್ಟುವಲ್ಲೂ ತೋರಿಸಿದ್ದರೆ ತರುಣ್ ಸುಧೀರ್ ಗೆ ಮತ್ತಷ್ಟು ಸ್ಕೋರ್ ಮಾಡಬಹುದಿತ್ತು. ದರ್ಶನ್ ಕಾಲ್ ಶೀಟ್ ಸಿಗೋದು, ಉಮಾಪತಿ ಶ್ರೀನಿವಾಸ್ ರಂತಹ ನೀರಿನಂತೆ ದುಡ್ಡು ಚೆಲ್ಲುವ ನಿರ್ಮಾಪಕರು ಎಲ್ಲಾ ಟೈಮಲ್ಲೂ ಸಿಗಲ್ಲ. ಸಿಕ್ಕಾಗ ಪ್ರೂವ್ ಮಾಡಿಕೊಳ್ಳದೇ ಇದ್ರೆ, ಕಷ್ಟ. ಎಲ್ಲೋ ನಿರ್ದೇಶಕರಿಂದ ನಾವೇ ಹೆಚ್ಚು ನಿರೀಕ್ಷೆ ಮಾಡಿಬಿಟ್ವಾ ಅನ್ನಿಸ್ತಿದೆ. ಎನಿವೇ ನಿಮ್ಮ ಮುಂದಿನ ಚಿತ್ರಕ್ಕೆ ಆಲ್ ದಿ ಬೆಸ್ಟ್ ನಿರ್ದೇಶಕರೇ.