ವಾರ ಮುಗಿಯೋದ್ರೊಳಗೆ ರಾಬರ್ಟ್ ₹50 ಕೋಟಿ ಕ್ಲಬ್ ಸೇರಿದೆ. ಮಾರ್ಚ್ 11ರಂದು ರಿಲೀಸ್ ಆಗಿದ್ದ ಸಿನಿಮಾ ಮೊದಲನೇ ದಿನದಿಂದ್ಲೂ ಬಾಕ್ಸಾಫೀಸ್ನಲ್ಲಿ ಭರ್ಜರಿ ಬ್ಯುಸಿನೆಸ್ ಮಾಡ್ತಾನೇ ಇದೆ. ಗುರುವಾರದಿಂದ ಭಾನುವಾರದವರೆಗೆ ರಾಬರ್ಟ್ ಗಳಿಕೆಯಲ್ಲಿ ದಾಖಲೆ ಸೃಷ್ಟಿಸುತ್ತಿದೆ. ಶನಿವಾರದ ವರೆಗೆ ರಾಬರ್ಟ್ ಕಲೆಕ್ಷನ್ ನೋಡಿ ಈ ಭಾನುವಾರ ಕೂಡ ಭರ್ಜರಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
Roberrt Boxoffice Collection (3 Days)
1 ಡೇ ₹17.24 ಕೋಟಿ
2 ಡೇ ₹12.78 ಕೋಟಿ
3 ಡೇ ₹14.10 ಕೋಟಿ
Total ₹44.12 ಕೋಟಿ
ರಾಬರ್ಟ್ ಮೊದಲ ದಿನ ₹17.24 ಕೋಟಿ ಆಗಿದ್ರೆ, ಎರಡನೇ ದಿನ ₹12.78 ಕೋಟಿಗೆ ಇಳಿದಿತ್ತು. ಅಂದು ಇಂಡಿಯಾ, ಇಂಗ್ಲೆಂಡ್ ಮ್ಯಾಚ್ ಇದ್ದಿದ್ದರಿಂದ ಗಳಿಕೆಯಲ್ಲಿ ಕೊಂಚ ಹಿನ್ನೆಡೆ ಅನುಭವಿಸಿತ್ತು. ಆದ್ರೆ, ಮೂರನೇ ದಿನ ಮತ್ತೆ ಪಿಕಪ್ ಆಗಿದ್ದು, 14.10 ಕೋಟಿ ಗಳಿಸಿತ್ತು. ನಾಲ್ಕನೇ ದಿನ ಭಾನುವಾರ ಕೂಡ ಭರ್ಜರಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ಭಾನುವಾರ ರಾಬರ್ಟ್ ಕಮ್ಮಿ ಅಂದ್ರೂ ₹10 ಕೋಟಿಗೇನು ಮೋಸವಿಲ್ಲ. ಹೀಗಾಗಿ ಸೋಮವಾರ ಬೆಳಗ್ಗೆ ₹50 ಕೋಟಿ ಕ್ಲಬ್ ಸೇರುತ್ತೆ ಎನ್ನಲಾಗುತ್ತೆ. ಹಾಗೇನಾದ್ರೂ ಆದ್ರೆ, ರಾಬರ್ಟ್ ₹50 ಕೋಟಿ ದಾಟಿದ ದರ್ಶನ್ 3ನೇ ಸಿನಿಮಾ ಆಗಲಿದೆ. ಯಜಮಾನ, ಕುರುಕ್ಷೇತ್ರ ಬಳಿಕ ರಾಬರ್ಟ್ ₹50 ಕೋಟಿ ದಾಟಿದಂತಾಗುತ್ತೆ.