ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮತ್ತೊಂದು ಮೈಲಿಘಲ್ಲು ತಲುಪಿದೆ. ರಾಬರ್ಟ್ ಕಳೆದ ತಿಂಗಳು ಮಾರ್ಚ್ 11ರಂದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಒಂದು ಒಂದು ದಾಖಲೆಗಳನ್ನ ಸೃಷ್ಟಿಸುತ್ತಲೇ ಬಂದಿದೆ. ಈಗ 25 ದಿನಗಳನ್ನ ಪೂರೈಸಿದ ಸಂಭ್ರಮದಲ್ಲಿ ರಾಬರ್ಟ್
ರಾಬರ್ಟ್ ಕೆಲವು ದಿನಗಳ ಹಿಂದಷ್ಟೇ ಬಾಲಿವುಡ್ನಲ್ಲಿ ₹100 ಕೋಟಿ ಗಳಿಕೆ ಮಾಡಿತ್ತು. ಈ ಖುಷಿಯಲ್ಲಿ ಇಡೀ ಚಿತ್ರತಂಡ ಖುಷಿ ಖುಷಿಯಾಗಿ ಸಂಭ್ರಮಿಸಿದ್ದರು. ದರ್ಶನ್ ಕೂಡ ಇಡೀ ಚಿತ್ರತಂಡಕ್ಕೆ ಅದ್ಧೂರಿ ಪಾರ್ಟಿ ನೀಡಿದ್ದರು. ಈಗ 25 ದಿನಗಳನ್ನ ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿ ಇಡೀ ತಂಡವಿದೆ. ಆದ್ರೆ, ಕೊರೊನಾ ಎರಡನೇ ಅಲೆಯ ಹಿನ್ನೆಲೆ ಸಂಭ್ರಮಕ್ಕೆ ಬ್ರೇಕ್ ಹಾಕಿದೆ.
ಕೊರೊನಾ ಕಂಟ್ರೋಲ್ನಲ್ಲಿ ಇದ್ದಿದ್ರೆ, ಇಷ್ಟರೊಳಗೆ ರಾಬರ್ಟ್ ಕರ್ನಾಟಕ ರಾಜ್ಯಾದ್ಯಂತ ವಿಜಯಯಾತ್ರೆ ಮಾಡುತ್ತಿತ್ತು. ಆದ್ರೆ, ಅಭಿಮಾನಿಗಳ ಆರೋಗ್ಯ ದೃಷ್ಟಿಯಿಂದ ದರ್ಶನ್ ವಿಜಯಯಾತ್ರೆಗೆ ಬ್ರೇಕ್ ಹಾಕಿದ್ದಾರೆ. ಆದ್ರೆ, ಸಿನಿಮಾ 50 ದಿನ ಪೂರೈಸಿದ ದಿನ ವಿಜಯಯಾತ್ರೆಯನ್ನೂ ಅದ್ದೂರಿಯಾಗಿ ನಡೆಸಲು ಚಿತ್ರತಂಡ ಮುಂದಾಗಿದೆ.
ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್ನ ಮೊದಲ ಸಿನಿಮಾ. ಈ ಹಿಂದೆ ಚೌಕ ಚಿತ್ರದಲ್ಲಿ ನಟಿಸಿದ್ರೂ, ಅತಿಥಿ ಪಾತ್ರದಲ್ಲಿ ಮಿಂಚಿ ಮರೆಯಾಗಿದ್ದರು. ಮೊದಲ ಕಾಂಬಿನೇಷನ್ನಲ್ಲೇ ಸೆಂಚುರಿ ಬಾರಿಸಿರೋ ತಂಡ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದೆ.