ಬಾಕ್ಸಾಫೀಸ್ನಲ್ಲಿ ‘ರಾಬರ್ಟ್’ ದರ್ಶನ್ ಆರ್ಭಟ ಮುಂದುವರೆದಿದೆ. ಮೊದಲ ದಿನ 20.36 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದ ‘ರಾಬರ್ಟ್’ ಎರಡನೇ ದಿನ 12.78 ಕೋಟಿ ಗಳಿಕೆ ಮಾಡಿ ಎಲ್ಲರ ಹುಬ್ಬೇರಿಸಿದ್ದಾನೆ. ಒಟ್ಟಾರೆ ಎರಡು ದಿನದ ರಾಬರ್ಟ್ ಒಟ್ಟು ಕಲೆಕ್ಷನ್ 33.14 ಕೋಟಿ ದಾಟಿದೆ. ಶಿವರಾತ್ರಿ ಸಂಭ್ರಮದಲ್ಲಿ ಗುರುವಾರ ತೆರೆಕಂಡ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ದೊಡ್ಡ ತಾರಾಗಣ, ಅದ್ಧೂರಿ ಮೇಕಿಂಗ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ್ಫಾರ್ಮೆನ್ಸ್ ಚಿತ್ರವನ್ನ ಗೆಲ್ಲಿಸಿದೆ. ಕಥೆಯಲ್ಲಿ ಹೊಸತನ ಇಲ್ಲದೇ ಇದ್ರು, ಕಥೆಯನ್ನ ಹೊಸ ರೀತಿ ಪ್ರಸೆಂಟ್ ಮಾಡಿ ಗೆದ್ದಿದ್ದಾರೆ ನಿರ್ದೇಶಕರು. ಎರಡನೇ ದಿನ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನುವ ಡಿಟೈಲ್ಸ್ ಇಲ್ಲಿದೆ.
Roberrt Day 2 Collection: ಕರ್ನಾಟಕ ಏರಿಯಾ
ಬೆಂಗಳೂರು, ಕೋಲಾರ ತುಮಕೂರು+ಮಂಗಳೂರು ₹5 ಕೋಟಿ
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ₹2 ಕೋಟಿ
ಚಿತ್ರದುರ್ಗ+ ದಾವಣಗೆರೆ ₹1.5 ಕೋಟಿ
ಶಿವಮೊಗ್ಗ ₹78 ಲಕ್ಷ
ಹೈದರಾಬಾದ್ ಕರ್ನಾಟಕ ₹ 2 ಕೋಟಿ
ಬಾಂಬೆ ಕರ್ನಾಟಕ ₹ 1.5 ಕೋಟಿ
Total 12.78cr
ಎರಡನೇ ದಿನವೂ ‘ರಾಬರ್ಟ್’ ಸಿನಿಮಾ ಎಲ್ಲಾಕಡೆ ಹೌಸ್ಫುಲ್ ಪ್ರದರ್ಶನ ಕಂಡಿದೆ. ಅದಕ್ಕೆ ತಕ್ಕಂತೆ ಕಲೆಕ್ಷನ್ ಕೂಡ ಜೋರಾಗಿದೆ. ಪೈರಸಿ ಹಾವಳಿ ನಡುವೆಯೂ ಸಿನಿಮಾ ಪ್ರೇಕ್ಷಕರನ್ನ ದೊಡ್ಡಮಟ್ಟದಲ್ಲಿ ಥಿಯೇಟರ್ಗೆ ಸೆಳೀತಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಮುಗಿಬಿದ್ದಿದ್ದು, ಇವತ್ತು ನಾಳೆ ಕೂಡ ಭಾರೀ ಕಲೆಕ್ಷನ್ ನಿರೀಕ್ಷೆ ಮಾಡಲಾಗ್ತಿದೆ. ಫಸ್ಟ್ ವೀಕೆಂಡ್ನಲ್ಲೇ ರಾಬರ್ಟ್ ಕಲೆಕ್ಷನ್ 100 ಕೋಟಿ ಗಡಿ ದಾಟಿದ್ರು, ಅಚ್ಚರಿಪಡ್ಬೇಕಿಲ್ಲ.
ಟೈಟಲ್ ಅನೌನ್ಸ್ ಆದ ದಿನದಿಂದಲೂ ‘ರಾಬರ್ಟ್’ ಸಿನಿಮಾ ದೊಡ್ಡಮಟ್ಟದಲ್ಲಿ ಸೌಂಡ್ ಮಾಡ್ತಾ ಬಂದಿತ್ತು. ರಿಲೀಸ್ ಡೇಟ್ ಹತ್ತಿರವಾದಂತೆಲ್ಲಾ ಸಿನಿಮಾ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿತ್ತು. ಇದೀಗ ಸಿನಿಮಾ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಒಳ್ಳೆ ಸಿನಿಮಾ ಮಾಡಿ ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡುವ ಮೂಲಕ ಪ್ರೇಕ್ಷಕರಿಗೆ ಚಿತ್ರವನ್ನ ತಲುಪಿಸಿದ್ರೆ, ಕಲೆಕ್ಷನ್ ಕೂಡ ಜೋರಾಗಿರುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ‘ರಾಬರ್ಟ್’ ಆರ್ಭಟ ಹೀಗೆ ಮುಂದುವರೆಯೋದ್ರಲ್ಲಿ ಸಂದೇಹವಿಲ್ಲ.