ಕಳೆದೊಂದು ವಾರದಿಂದ ನಟ ದರ್ಶನ್ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಮಧ್ಯೆ ಮಾತಿನ ಯುದ್ಧ ನಡೆಯುತ್ತಲೇ ಇತ್ತು. ಇಬ್ಬರೂ ಆರೋಪ-ಪ್ರತ್ಯಾರೋಪ ಮಾಡುತ್ತಲೇ ಇದ್ದರು. ಅದ್ರಲ್ಲೂ ಇಂದ್ರಜಿತ್ ಲಂಕೇಶ್ ನಟ ದರ್ಶನ್ ವಿರುದ್ಧ ಆರೋಪ ಮಾಡುತ್ತಲೇ ಇದ್ದರು. ಇದ್ರಿಂದ ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಇಂದ್ರಜಿತ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇಂದ್ರಜಿತ್ ಲಂಕೇಶ್, ನಟ ದರ್ಶನ್ ಅವ್ರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದು, ಸತ್ಯಕ್ಕೆ ದೂರವಾಗಿರೋ ಆರೋಪಗಳನ್ನು ಮಾಡುತ್ತಿದ್ದಾರೆ. ಹೀಗೆಂದು ದೊಡ್ಡಬಳ್ಳಾಪುರದ ಪೊಲೀಸ್ ಠಾಣೆಯಲ್ಲಿ ‘ಕರುನಾಡ ಕಲಾಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ’ ದೂರಿನಲ್ಲಿ ದಾಖಲಿಸಿದೆ.
ದೂರಿನಲ್ಲಿದೆ ಎರಡು ಪ್ರಮುಖ ವಿಚಾರವಿದ್ದು, ದರ್ಶನ್ ಹಲ್ಲೆ ಮಾಡಿದ್ದಾಗಿ ಯಾರೂ ದೂರು ನೀಡಿದ್ರೂ ಇಂದ್ರಜಿತ್ ಲಂಕೇಶ್ ಒಬ್ಬರೇ ಆರೋಪ ಮಾಡ್ತಿದ್ದಾರೆ. ಹೋಟೆಲ್ ಸಿಬ್ಬಂದಿ ದಲಿತ ಎನ್ನುವ ಮೂಲಕ ಕೋಮು ದ್ವೇಷ ಹರಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಕೂಡ ಸಿಟ್ಟಿಗೆದ್ದಿದ್ದರು. ದಲಿತ ಎನ್ನುವ ಮೂಲಕ ಸಮುದಾಯವನ್ನು ಎತ್ತು ಕಟ್ಟುವ ಪ್ರಯತ್ನ ಮಾಡ್ತಿದ್ದಾರೆಂದು ಟಿ.ಜೆ ಅಬ್ರಹಾಂ ಗೃಹಸಚಿವ ಬಸವರಾಜ ಬೊಮ್ಮಾಯಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.