ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದ್ರೆ ಕನ್ನಡ ಚಿತ್ರರಂಗ ಮಾತ್ರ ಹಬ್ಬಕ್ಕೆ ಒಂದೇ ಒಂದು ಸಿನಿಮಾ ಬಿಡುಗಡೆ ಮಾಡುತ್ತಿಲ್ಲ. ನೈಟ್ ಕರ್ಪ್ಯೂ, ಶೇ.50ರಷ್ಟು ಸೀಟು ನಿರ್ಬಂಧದಿಂದ ಕಂಗಾಲಾಗಿರೋ ಚಿತ್ರರಂಗ ಅಕ್ಷರಶ: ಸೈಲೆಂಟ್ ಆಗಿದೆ. ಆದ್ರೆ, ಹಬ್ಬಕ್ಕೆ ದರ್ಶನ್ ಮುಂದಿನ ಸಿನಿಮಾ ಅನೌನ್ಸ್ ಆಗುತ್ತಾ? ಫಸ್ಟ್ ಲುಕ್ ರಿಲೀಸ್ ಮಾಡ್ಬಹುದಾ? ಅಂತ ದರ್ಶನ್ ಅಭಿಮಾನಿಗಳು ಎದುರು ನೋಡ್ತಿದ್ದಾರೆ.
ದರ್ಶನ್ ರಾಬರ್ಟ್ ಗೆದ್ದಿದೆ. 30 ದಿನಗಳನ್ನ ಯಶಸ್ವಿಯಾಗಿ ಪೂರೈಸಿದ್ದು, ₹100 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಹೀಗಾಗಿ ದರ್ಶನ್ ಮುಂದಿನ ಸಿನಿಮಾ ಯಾವುದು? ಅಂತ ಕಾತುರದಿಂದ ಎದುರು ನೋಡ್ತಿದ್ದಾರೆ ಅಭಿಮಾನಿಗಳು. ಹಬ್ಬಕ್ಕಾದ್ರೂ ಹೊಸ ಸಿನಿಮಾದ ಘೋಷಣೆ ಮಾಡಲಿ ಅಂತ ಫ್ಯಾನ್ಸ್ ಕೆಲ ದಿನಗಳ ಹಿಂದೆ ಒತ್ತಾಯಿಸಿದ್ದರು.
ದರ್ಶನ್ ಅಭಿಮಾನಿಗಳ ಈ ಮಹಾ ಆಸೆಗೆ ದೊಡ್ಡ ಕಾರಣವೇ ಇದೆ. ರಾಬರ್ಟ್ ಬಳಿಕ ಸೆಟ್ಟೇರಬೇಕಿದ್ದ ಮದಕರಿ ಸಿನಿಮಾ ಪೋಸ್ಟ್ ಪೋನ್ ಆಗಿದೆ. ಇನ್ನೊಂದ್ಕಡೆ ಅದೇ ನಿರ್ಮಾಪಕರಿಂದ ದರ್ಶನ್ ಇನ್ನೊಂದು ಸಿನಿಮಾ ಗೋಲ್ಡ್ ರಿಂಗ್ ಘೋಷಣೆಯಾಗಿದೆ. ಅಂದ್ಮೇಲೆ ಎರಡರಲ್ಲಿ ಯಾವ ಸಿನಿಮಾ ರಿಲೀಸ್ ಆಗುತ್ತೆ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಯುಗಾದಿ ಹಬ್ಬವಿರೋದ್ರಿಂದ ದರ್ಶನ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳ್ಬಹುದು ಅನ್ನೋ ನಿರೀಕ್ಷೆಯಿದೆ.
ಸ್ಯಾಂಡಲ್ವುಡ್ ಮೂಲಗಳ ಪ್ರಕಾರ, ಮದಕರಿ ನಾಯಕ ಸದ್ಯಕ್ಕೆ ಸೆಟ್ಟೇರುವುದಿಲ್ಲ. ಈ ಸಿನಿಮಾಗಿಂತ ಮೊದಲು ರಾಕ್ಲೈನ್ ನಿರ್ಮಾಣದಲ್ಲೇ ಗೋಲ್ಡ್ ರಿಂಗ್ ಶುರುವಾಗುತ್ತಿದ್ದು, ಸದ್ಯ ಸಿನಿಮಾದ ತಾಂತ್ರಿಕ ವರ್ಗವನ್ನ ಆಯ್ಕೆ ಮಾಡುತ್ತಿದೆ. ಬಳಿಕ ಸಿನಿಮಾ ಯಾಱರು ನಟಿಸಲಿದ್ದಾರೆ ಅನ್ನೋದನ್ನ ಅನೌನ್ಸ್ ಮಾಡಲಿದೆ.