ರಾಬರ್ಟ್ ಸಿನಿಮಾ ಬಳಿಕ ದರ್ಶನ್ ಸಿನಿಮಾ ಯಾವುದು ಅನ್ನೋ ಗೊಂದಲಕ್ಕೆ ಡಿಬಾಸ್ ಕೆಲವು ದಿನಗಳ ಹಿಂದೆಯೇ ತೆರೆ ಎಳೆದಿದ್ದರು. ಮ್ಯೂಸಿಕ್ ಡೈರೆಕ್ಟರ್ ವಿ.ಹರಿಕೃಷ್ಣ ಈ ಸಿನಿಮಾ ದರ್ಶನ್ 55ನೇ ಸಿನಿಮಾ ನಿರ್ದೇಶನ ಮಾಡೋದೂ ಕನ್ಫರ್ಮ್ ಆಗಿತ್ತು. ಆದರೂ ಸಿನಿಮಾ ಮಾತ್ರ ಸೆಟ್ಟೇರಿರಲಿಲ್ಲ. ರಾಬರ್ಟ್ ಯಶಸ್ಸಿನ ಬಳಿಕವೂ ಹೊಸ ಸಿನಿಮಾ ಘೋಷಣೆ ಆಗಿರಲಿಲ್ಲ. ಹೀಗಾಗಿ ದರ್ಶನ್ ಅಭಿಮಾನಿಗಳು ಕೊಂಚ ಆತಂಕಕ್ಕೆ ಒಳಗಾಗಿದ್ದರು. ಆದ್ರೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ಡಿ ಬಾಸ್.
ದರ್ಶನ್ ಹಾಗೂ ವಿ.ಹರಿಕೃಷ್ಣ ಕಾಂಬಿನೇಷನ್ ಸಿನಿಮಾದ ಟೈಟಲ್ ಅನೌನ್ಸ್ ಮಾಡೋಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಗಣೇಶ ಚತುರ್ಥಿಗೆ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ. ಈ ವಿಷಯವನ್ನು ಸ್ವತ: ದರ್ಶನ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಅನೌನ್ಸ್ ಮಾಡಿದ್ದಾರೆ.
ದರ್ಶನ್ 55ನೇ ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ.ಸುರೇಶ್ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಇವ್ರಿಬ್ಬರೂ ಯಜಮಾನ ಸಿನಿಮಾವನ್ನು ನಿರ್ಮಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ₹60 ಕೋಟಿಗೂ ಅಧಿಕ ಹಣ ಕಲೆ ಹಾಕಿತ್ತು. ಈಗ ಮತ್ತದೇ ತಂಡ ಒಂದಾಗಿದ್ದು, ಸಿನಿಮಾ ಟೈಟಲ್ ಬಗ್ಗೆ ಕುತೂಹಲ ಹೆಚ್ಚಾಗಿದೆ.