ಡಾಲಿ ಧನಂಜಯ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದಿದೆ. ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ ಸಾಲು ಸಾಲು ಸಿನಿಮಾಗಳಲ್ಲಿ ಡಾಲಿ ಧನಂಜಯ್ ನಟಿಸಲಿದ್ದಾರೆ. ಸದ್ಯದಲ್ಲೇ ಇದೇ ಸಂಸ್ಥೆ ನಿರ್ಮಿಸಿರೋ ‘ರತ್ನನ ಪ್ರಪಂಚ’ ಕೂಡ ತೆರೆಗೆ ಬರಲಿದೆ.
ಹೌದು, ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಧನಂಜಯ್ ಸುದೀರ್ಘ ಒಪ್ಪಂದಕ್ಕೆ ಸಹಿ ಹಾಕಿದೆ. ಡಾಲಿ ಧನಂಜಯ್ ಹಾಗೂ KRGಸ್ಟುಡಿಯೋಸ್ ಜೊತೆಗೂಡಿ ಹಲವಾರು ಚಿತ್ರಗಳನ್ನು ಸಾಲು ಸಾಲಾಗಿ ನಿರ್ಮಿಸಲಿದ್ದಾರೆಂದು ಬಲ್ಲ ಮೂಲಗಳು ಮಾಹಿತಿ ಬಂದಿದೆ. ಹೀಗಾಗಿ ಧನಂಜಯ್ ಅಭಿಮಾನಿಗಳಿಗೆ ಕೆ.ಆರ್.ಜಿ ಸ್ಟುಡಿಯೋ ಭರ್ಜರಿ ರಸದೌತಣವನ್ನೇ ನೀಡಿದೆ.
ನೂತನ ಚಿತ್ರಗಳ ಶೀರ್ಷಿಕೆ ಹಾಗೂ ತಾಂತ್ರಿಕ ವರ್ಗದ ಮಾಹಿತಿ ಅತೀಶೀಘ್ರದಲ್ಲೇ ಹೊರಬರುವ ಸಾಧ್ಯತೆಯಿದೆ. ಇದ್ರೊಂದಿಗೆ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿರೋ, ಡಾಲಿ ಧನಂಜಯ್ ನಾಯಕನಾಗಿ ಅಭಿನಯಿಸಿರುವ ‘ರತ್ನನ ಪ್ರಪಂಚ’ ಸಿನಿಮಾ ಕೂಡ ಇದೇ ಸಂಸ್ಥೆ ತೆರೆಗೆ ತರುತ್ತಿದೆ.
ರತ್ನನ್ ಪರಪಂಚ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅಜನೀಶ್ ಲೋಕನಾಥ್ ‘ರತ್ನನ ಪ್ರಪಂಚ’ಕ್ಕೆ ಅದ್ಭುತ ಹಾಡುಗಳನ್ನು ನೀಡಿದ್ದು, ಶ್ರೀಶ ಕ್ಯಾಮರಾಮ್ಯಾನ್. ಇನ್ನು ಡಾಲಿಗೆ ನಾಯಕಿಯಾಗಿ ರೆಬಾ ಜಾನ್ ನಟಿಸಿದ್ರೆ, ಪೋಷಕ ಪಾತ್ರಗಳಲ್ಲಿ ಉಮಾಶ್ರೀ, ಅನು ಪ್ರಭಾಕರ್ ಮುಂತಾದವರಿದ್ದಾರೆ.