ಧನಂಜಯ್ ಖಳನಾಯಕನಾಗುವಂತಹ ಮುಖವೇನಲ್ಲ. ಆದ್ರೆ, ಟಗರು ಚಿತ್ರದ ಡಾಲಿ ಅನ್ನೋ ವ್ಯಕ್ತಿತ್ವ ವಿಲನ್ ಆಗಿ ಮಾಡಿತ್ತು. ಜನರೂ ಡಾಲಿಯನ್ನು ಹೊಗಳಿಕೊಂಡಾಡಿದ್ರು. ಸಾಫ್ಟ್ ಲುಕ್ ಕೊಟ್ಟು ಲವರ್ ಆಗಿದ್ದವ ಒಂದಿಷ್ಟು ದಿನ ಡಾಲಿಯಾಗಿ ಅದೇ ಪ್ರಪಂಚದಲ್ಲಿ ಇದ್ದಿದ್ದೂ ಆಯ್ತು. ಆದ್ರೀಗ ಡಾಲಿ ಪ್ರಪಂಚದಿಂದ ಹೊರಬಂದು ರತ್ನನ್ ಪ್ರಪಂಚದ ಪರಿಚಯ ಮಾಡಿಸಿದ್ದಾರೆ. ಅದೂ ಒಂದು ಚಿಕ್ಕ ಟ್ರೈಲರ್ನಿಂದ.
ರತ್ನನ್ ಪ್ರಪಂಚ ಏನು ಅನ್ನೋದು ಟ್ರೈಲರ್ ತೋರಿಸ್ತಿದೆ. ಹಾಗೇ ಈ ಪ್ರಪಂಚದಲ್ಲಿ ಏನೇನೋ ನಡೀತಿದೆ ಅನ್ನೋದನ್ನು ಸಸ್ಪೆನ್ಸ್ ಆಗೇ ಇಟ್ಟಿದೆ. ರತ್ನಾಕರ ಅಂದ್ರೆ, ಧನಂಜಯ್.. ಈತನಿಗೊಬ್ಬ ತಾಯಿ ಅವರು ಉಮಾಶ್ರೀ. ಸ್ವಲ್ಪ ಬಾಯ್ ಬಡಕಿ.. ಆಗಾಗ ಸಂಸ್ಕೃತವನ್ನು ಅವರ ಬಾಯಿಂದ ಬರ್ತಾನೇ ಇರುತ್ತೆ. ಸಹಿಸಿಕೊಳ್ಬೇಕು. ಗ್ಯಾಪ್ನಲ್ಲೊಂದು ಹುಡುಗಿ (Reba Monic John) ಎಂಟ್ರಿ. ಆಕೆ ಲವ್ವರೋ.. ಇಲ್ಲಾ ಫ್ರೆಂಡೋ ಅನ್ನೋದು ಇನ್ನೂ ಕನ್ಫ್ಯೂಷನ್ನಲ್ಲೇ ಇದೆ. ಶೃತಿ, ಅಚ್ಯುತ್, ಪ್ರಮೋದ್, ರವಿಶಂಕರ್ ಯಾರು? ರತ್ನನ್ ಪ್ರಪಂಚದಲ್ಲಿ ಇವ್ರಿಗೇನು ಕೆಲಸ ಅನ್ನೋ ಗುಟ್ಟು ಇನ್ನು ರಟ್ಟಾಗಿಲ್ಲ.
‘ದಯವಿಟ್ಟು ಗಮನಿಸಿ’ ಇದು ರೋಹಿತ್ ಪದಕಿ ಸಿನಿಮಾ. 2017ರಲ್ಲಿ ದಯವಿಟ್ಟು ಗಮನಿಸಿ ಅಂತ ಸಿನಿಮಾ ಸಂಬಂಧಗಳ ಕಥೆ ಹೇಳಿದ್ರು. ಈಗ ರತ್ನನ್ ಪ್ರಪಂಚದಲ್ಲಿ ಕಾಮಿಡಿ, ಸಸ್ಪೆನ್ಸ್ ಇಟ್ಟು ಹೊಸ ಕಥೆ ಹೇಳೋಕೆ ಹೊರ್ಟಿದ್ದಾರೆ. ಹಾಡುಗಳು ಇದಾವಾ ಗೊತ್ತಿಲ್ಲ. ಆದರೆ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಇದ್ದಾರೆ.
ರತ್ನನ್ ಪ್ರಪಂಚಕ್ಕೆ ಹೊಂಬಾಳೆ ಫಿಲಂಸ್ ಬ್ಯಾಕ್ ಸಪೋರ್ಟ್ ಆಗಿ ನಿಂತಿದೆ. ಕೆಆರ್ಜಿ ಸ್ಟುಡಿಯೋದ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಈ ಸಿನಿಮಾದ ನಿರ್ಮಾಪಕರು. ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅನ್ನೋದು ರಿವೀಲ್ ಆಗಿಲ್ಲ. ಬಹುಶ: ಥಿಯೇಟರ್ ಓಪನ್ ಆಗೋವರೆಗೂ ರತ್ನನ್ ಪ್ರಪಂಚ ಬಿಡುಗಡೆ ಆಗೋದು ಡೌಟು. ಇಲ್ಲಾ ಅಂದ್ರೆ, ಒಟಿಟಿಯಲ್ಲಿ ರಿಲೀಸ್ ಆಗ್ಬಹುದು.