ಐಪಿಎಲ್ ಬಂತು ಅಂದ್ರೆ, ಸಿನಿಮಾ ಮಂದಿ ತಣ್ಣಗಾಗ್ಬಿಡ್ತಾರೆ. ಆದ್ರೆ ಈ ಬಾರಿ ಕೇವಲ ಐಪಿಎಲ್ ಅಷ್ಟೇ ಅಲ್ಲ, ನೈಟ್ ಕರ್ಫ್ಯೂ, 50 ಪರ್ಸೆಂಟ್ ಸೀಟು ಅಂತ ಇನ್ನುಷ್ಟು ಏಟು ಬಿದ್ದಿದೆ. ಈ ಮಧ್ಯೆನೇ ಐಪಿಎಲ್ನಲ್ಲಿ ಡಿ ಬಾಸ್ ಬಗ್ಗೆ ಚರ್ಚೆಯಾಗಿದೆ. ಅದನ್ನೇ ಈಗ ದರ್ಶನ್ ಅಭಿಮಾನಿಗಳು ಎಲ್ಲೆಡೆ ವೈರಲ್ ಮಾಡುತ್ತಿದ್ದಾರೆ.
ಆರ್ಸಿಬಿ ಮ್ಯಾಚ್ ನಡೆಯುವಾಗ ಇಬ್ಬರು ನಿರೂಪಕರ ನಡುವೆ ಸಂಭಾಷಣೆ ನಡೆಯುತ್ತಿರುತ್ತೆ. ಆ ವೇಳೆ ನಿರೂಪಕ ವಿಜಯ್ ಭಾರದ್ವಾಜ್ ಮತ್ತೊಮ್ಮೆ ನಿರೂಪಕ ಜಾನಿ ಜೊತೆ ಮಾತಾಡುವಾಗ ಡಿ ಬಾಸ್ ಹೆಸರನ್ನ ತೆಗೆದಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ವೈರಲ್ ಆಗುತ್ತಿದೆ.
ಹೈದ್ರಾಬಾದ್ ವಿರುದ್ಧ ಆರ್ಸಿಬಿ 6 ರನ್ಗಳಿಂದ ಗೆದ್ದು ಬೀಗಿತ್ತು. ಈ ವೇಳೆ ವಿಜಯ್ ಭಾರದ್ವಾಜ್ ಆರ್ಸಿಬಿ ಫ್ಯಾನ್ಸ್ ಬಗ್ಗೆ ಮಾತಾಡುತ್ತಿದ್ದರು. ಜೊತೆಗೆ ದೇವದತ್ ಪಡಿಕಲ್ ಅವ್ರನ್ನ ಯುವರಾಜ ಅಂತೀವಿ, ಡಿ ಬಾಸ್ ಅಂತಿ, ಆದ್ರೆ, ದರ್ಶನ್ ಅವರಷ್ಟು ಬೆಳೆದಿಲ್ಲ. ಅದಕ್ಕೆ ಇನ್ನೂ ಸಮಯವಿದೆ ಎನ್ನುತ್ತಾರೆ. ಈ ವಿಡಿಯೋವನ್ನ ಐರಾವತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಭ್ರಮಿಸ್ತಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಜೂಜಾಡಬೇಡಿ ಅನ್ನೋ ಹಳೇ ವಿಡಿಯೋವೊಂದು ವೈರಲ್ ಆಗಿತ್ತು. ಈಗ ಕ್ರಿಕೆಟ್ ಕಮೆಂಟೇಟರ್ ವೀಡಿಯೊ ಎಲ್ಲೆಡೆ ಸದ್ದು ಮಾಡುತ್ತಿದೆ. ಅಂದ್ಹಾಗೆ ದರ್ಶನ್ ಈಗ ರಿಲ್ಯಾಕ್ಸ್ ಮೂಡ್ನಲ್ಲಿದ್ದು, ಹೊಸ ಸಿನಿಮಾ ಆರಂಭಕ್ಕೂ ಮುನ್ನ ಕಾಡು ಮೇಡು ಸುತ್ತುತ್ತಿದ್ದಾರೆ.