ಈ ವೀಕೆಂಡ್ನಲ್ಲಿ 5 ಹೊಸ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಐದು ಹಾಲಿವುಡ್ ಸಿನಿಮಾಗಳಲ್ಲಿ ಕೆಲವು ಥಿಯೇಟರ್ಗಳಲ್ಲಿ ಬಿಡುಗಡೆಯಾದ್ರೆ, ಮತ್ತೆ ಕೆಲವು ಓಟಿಟಿಗಳಲ್ಲಿ ರಿಲೀಸ್ ಆಗಲಿವೆ. ಅಮೆಜಾನ್ ಪ್ರೈಮ್ ವೀಡಿಯೋಸ್ ಸಿಂಡ್ರೆಲ್ಲಾ, ಮಾರ್ವೆಲ್ಸ್ ಶಾಂಗ್-ಚಿ ಮತ್ತು ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್, ಬ್ಲ್ಯಾಕ್ ವಿಡೋ, ಫಾಸ್ಟ್ ಏಂಡ್ ಫ್ಯೂರಿಯಸ್ 9 ಮತ್ತು ನೆಟ್ಫ್ಲಿಕ್ಸ್ನ ಮನಿ ಹೆಯಿಸ್ಟ್ ಸೀಸನ್ 5 ಸೇರಿವೆ. ನೀವು ಯಾವ್ಯಾವ ಸಿನಿಮಾ ನೋಡ್ಬಹುದು ಅನ್ನೋ ವಿವರ ಇಲ್ಲಿದೆ.
ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ ಹಾಲಿವುಡ್ ಸಿನಿಮಾ
ಮಾರ್ವೆಲ್ನ ಮೊದಲ ಆಲ್-ಏಶಿಯನ್ ಸೂಪರ್ ಹೀರೋ ಸಿನಿಮಾ ಶಾಂಗ್-ಚಿ ಮತ್ತು ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ಥಿಯೇಟರ್ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಏಷ್ಯಾದ ಕಲಾವಿದರೇ ನಟಿಸಿರೋ ಮಾರ್ವೆಲ್ಸ್ ಸಿನಿಮಾಗಳು ನಿಮ್ಮನ್ನು ಮತ್ತೆ ಥಿಯೇಟರ್ಗಳಿಗೆ ಕರೆದೊಯ್ಯಲಿದೆ. ಸಿಮು ಲಿಯು, ಆಕ್ವಾಫಿನಾ, ಮೆಂಗಾರ್ ಜಾಂಗ್, ಫಲಾ ಚೆನ್, ಮಿಶೆಲ್ ಯೋಹ್ ಜೊತೆ ಬೆನೆಡಿಕ್ಟ್ ವಾಂಗ್, ಮತ್ತು ಟೋನಿ ಲೆಯುಂಗ್ ನಟಿಸಿದ್ದಾರೆ. ಈ ಸಿನಿಮಾ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. 3 ಸೆಪ್ಟೆಂಬರ್ 2021 ರಿಂದ ಶಾಂಗ್-ಚಿ ಅನ್ನು ಥಿಯೇಟರ್ಗಳಲ್ಲಿ ನೋಡ್ಬಹುದು.
ಫಾಸ್ಟ್ ಅಂಡ್ ಫ್ಯೂರಿಯಸ್ ಫ್ರಾಂಚೈಸಿಯ 9 ನೇ ಕಂತಿನ ಫಾಸ್ಟ್ 9 ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಭಾರತಕ್ಕೆ ಬರಲಿದೆ. ಜಾನ್ ಸೆನಾ, ಕಾರ್ಡಿ ಬಿ ಮತ್ತು ಚಾರ್ಲಿಜ್ ಥೆರಾನ್ ಜೊತೆಗೆ ವಿನ್ ಡೀಸೆಲ್ ಮತ್ತು ಮಿಶೆಲ್ ರೊಡ್ರಿಗಸ್ ನಟಿಸಿದ್ದಾರೆ. ಫಾಸ್ಟ್ & ಫ್ಯೂರಿಯಸ್-9, ಸೆಪ್ಟೆಂಬರ್ 03ರಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.
OTTಯಲ್ಲಿ ರಿಲೀಸ್ ಆಗ್ತಿರೋ ಸಿನಿಮಾಗಳ್ಯಾವುವು?
ಕ್ಯಾಮಿಲಾ ಕ್ಯಾಬೆಲ್ಲೊ ಅಮೆಜಾನ್ ಒರಿಜಿನಲ್ ಮೂವಿ ‘ಸಿಂಡ್ರೆಲ್ಲಾ’ದಲ್ಲಿ ನಟಿಸಿದ್ದಾರೆ. ಇದು ಮಹತ್ವಾಕಾಂಕ್ಷೆಯ, ಧೈರ್ಯಶಾಲಿ ಸಿಂಡ್ರೆಲ್ಲಾ ತನ್ನನ್ನು ತಾನು ಮೊದಲ ಸ್ಥಾನದಲ್ಲಿಟ್ಟುಕೊಳ್ಳಲು ಬಯಸುತ್ತಾಳೆ. ಸಿಂಡ್ರೆಲ್ಲಾ ಕಣ್ಣುಗಳು ಕತ್ತಲ ಕೋಣೆಯನ್ನು ಭೇದಿಸಿ ತನ್ನಿಷ್ಟದಂತೆ ಬದುಕಲು ಬಯಸುತ್ತಾಳೆ. ಈ ಸಿನಿಮಾ ಸೆಪ್ಟೆಂಬರ್3ರಂದು ಬಿಡುಗಡೆಯಾಗಿದೆ.
ಸ್ಕಾರ್ಲೆಟ್ ಜೋಹಾನ್ಸನ್ ನಟಿಸಿದ ಬ್ಲ್ಯಾಕ್ ವಿಡೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾದ ನಂತರ ಡಿಸ್ನಿ+ ಹಾಟ್ ಸ್ಟಾರ್ನಲ್ಲಿ ಸೆಪ್ಟೆಂಬರ್ 3 ರಂದು ಭಾರತೀಯ ಪ್ರೇಕ್ಷಕರಿಗೆ ಲಭ್ಯವಿದೆ. 5 ಎಪಿಸೋಡ್ ಗಳನ್ನು ಒಳಗೊಂಡ ಸೀಜನ್ 5 ರ ಮೊದಲ ಭಾಗ ಸೆಪ್ಟೆಂಬರ್ 3 ರಂದು ಬಿಡುಗಡೆಯಾಗಿದೆ.