ಬಾಹುಬಲಿ ಪ್ರಭಾಸ್ ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ನಾಲ್ಕೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ. ಮಿಷನ್ ಇಂಪಾಸಿಬಲ್ ಅಪ್ಕಮ್ಮಿಂಗ್ ಸೀಕ್ವೆಲ್ ನಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸ್ತಾರೆ, ಅದ್ರಲ್ಲೂ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಜೊತೆ ಸ್ಕ್ರೀನ್ ಶೇರ್ ಮಾಡ್ಕೊತ್ತಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ವೈರಲ್ಲಾಗಿತ್ತು. ‘ರಾಧೆಶ್ಯಾಮ್’ ಸಿನಿಮಾ ಚಿತ್ರೀಕರಣಕ್ಕೆ ಪ್ರಭಾಸ್ ಇಟಲಿಗೆ ಹೋದಾಗ ಅಲ್ಲಿ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್ ಮೆಕ್ ಕ್ವಾರಿನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮಿಷನ್ ಇಂಪಾಸಿಬಲ್ 7 ಸಿನಿಮಾದಲ್ಲಿ ಪ್ರಭಾಸ್ ಕೂಡ ನಟಿಸ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಪ್ರಭಾಸ್ ಕ್ರೇಝ್ ನೋಡಿದವರು, ಇದ್ರೂ ಇರಬಹುದು, ಇಂಡಿಯನ್ ಬಾಕ್ಸಾಫೀಸ್ ಟಾರ್ಗೆಟ್ ಮಾಡಿ ಹಾಲಿವುಡ್ ಮಂದಿ ಹಿಂಗೆ ಪ್ಲಾನ್ ಮಾಡಿದ್ರು, ಮಾಡಿರಬಹುದು ಅಂತ ಊಹಿಸಿಕೊಂಡಿದ್ದರು.
ಅಭಿಮಾನಿಗಳಂತೂ ಮಿಷನ್ ಇಂಪಾಸಿಬಲ್ ಸಿನಿಮಾದಲ್ಲಿ ಪ್ರಭಾಸ್ ನ ಊಹೆ ಮಾಡ್ಕೊಂಡು ಥ್ರಿಲ್ಲಾಗಿದ್ದರು. ಯಾವಾಗ ಈ ಸಿನಿಮಾ ಬರತ್ತೋ ಅಂತೆಲ್ಲಾ ತಲೆಗೆ ಹುಳ ಬಿಟ್ಕೊಂಡಿದ್ರು. ಇದು ಹಿಂಗೆ ಇದ್ದಿದ್ರೆ, ಚೆನ್ನಾಗಿತ್ತು. ಇನ್ನೊಂದಷ್ಟು ದಿನ ಫ್ಯಾನ್ಸ್ ಖುಷಿ ಆಗಿ ಇರ್ತಿದ್ರು. ಆದರೆ ಯಾರೋ ಒಬ್ಬರು, ಕುತೂಹಲ ತಡೆಯೋಕೆ ಆಗದೇ, ಏಕ್ ಧಮ್ ಡೈರೆಕ್ಟರ್ ಕ್ರಿಸ್ಟೋಫರ್ ನ ಕೇಳ್ಬಿಟ್ಟಿದ್ದಾರೆ. ಏನ್ ಸಾರ್ ನಿಮ್ ಸಿನಿಮಾದಲ್ಲಿ ಪ್ರಭಾಸ್ ನಟಿಸ್ತಾರಂತೆ ನಿಜವೇ ಅಂದಿದ್ದಾರೆ. ಆ ಕಡೆ ಇಂದ ಉತ್ತರ ಬರದೇ ಇದ್ದಿದ್ರು, ಚೆನ್ನಾಗಿತ್ತು. ಆದರೆ ಏನ್ ಮಾಡೋದು ಉತ್ತರ ಕೂಡ ಬಂದಿದೆ. ಆದರೆ ಅದನ್ನ ಕೇಳಿ, ಪ್ರಭಾಸ್ ಅಭಿಮಾನಿಗಳು ಹ್ಯಾಪು ಮೋರೆ ಹಾಕ್ಕೊಂಡಿದ್ದಾರೆ.
ಕ್ರಿಸ್ಟೋಫರ್ ಸರ್ ಭಾರತದ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಪ್ರಭಾಸ್, ಮಿಷನ್ ಇಂಪಾಸಿಬಲ್ 7 ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ನಿಜಾನಾ ಅಂತ ಒಬ್ಬ ಕೇಳಿದ್ದಾನೆ. ಈ ಟ್ವೀಟ್ ಗೆ ಉತ್ತರಿಸಿರೋ ಕ್ರಿಸ್ಟೋಫರ್, ‘ಪ್ರಭಾಸ್ ಗೊತ್ತು. ಪ್ರತಿಭಾನ್ವಿತ ಕಲಾವಿದ. ಆದರೆ ಆತನನ್ನ ಯಾವತ್ತು ಭೇಟಿ ಆಗಿಲ್ಲ’ ಅಂತ ಟ್ವೀಟ್ ಮಾಡಿ ಉತ್ತರಿಸಿದ್ದಾರೆ. ಅಲ್ಲಿಗೆ ಪ್ರಭಾಸ್ ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಿಲ್ಲ ಅನ್ನೋದು 100% ಪಕ್ಕಾ ಆಗೋಗಿದೆ.