ಸ್ಯಾಂಡಲ್ವುಡ್ನ ಡಿ ಬಾಸ್ ಬರೀ ಸಿನಿಮಾದಲ್ಲಷ್ಟೇ ಅಲ್ಲ, ಕಾಡು, ಪ್ರಾಣಿ, ಪೋಟೋಗ್ರಫಿ ಮೇಲೆ ಎಲ್ಲಿಲ್ಲದ ಆಸಕ್ತಿ ಅನ್ನೋದು ಗೊತ್ತೇ ಇದೆ. ಅದ್ರಲ್ಲೂ ಒಂದು ಸಿನಿಮಾ ಮುಗಿದು ಮತ್ತೊಂದು ಸಿನಿಮಾ ಆರಂಭಕ್ಕೂ ಮುನ್ನ ದರ್ಶನ್ ಕಾಡು-ಮೇಡು ಅಂತ ಅಲೆಯುತ್ತಿರುತ್ತಾರೆ. ಈಗ ರಾಬರ್ಟ್ ಯಶಸ್ಸಿನ ಬಳಿಕ ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯದಲ್ಲಿ ಬೀಡು ಬಿಟ್ಟಿದ್ದಾರೆ.
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅಭಯಾರಣ್ಯಕ್ಕೆ ಭೇಟಿ ನೀಡಿದ್ರು. ಡಿ ಬಾಸ್ ಬಂದಿದ್ದನ್ನ ಅರಿತ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂತೋಷದಿಂದ ಅವರನ್ನ ಸ್ವಾಗತ ಮಾಡಿದ್ದಾರೆ. 25 ಸಾವಿರಕ್ಕೂ ಅಧಿಕ ಹೆಕ್ಟೇರ್ ವಿಸ್ತೀರ್ಣ ಹೊಂದಿರೋ ಮುತ್ತೋಡಿ ಅಭಯಾರಣ್ಯದಲ್ಲಿ ಡಿ ಬಾಸ್ ಸಫಾರಿ ಮಾಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿದ್ದು, ದರ್ಶನ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಐರಾವತನಿಗೆ ಪ್ರಾಣಿ-ಪಕ್ಷಿಗಳು ಆಂದ್ರೆ ಬಲು ಪ್ರೀತಿ. ಅದಕ್ಕೆ ಆಗಾಗಾ ವನ್ಯಜೀವಿ ಫೋಟೋಗ್ರಫಿ ಮಾಡೋಕೆ ಆಭಯಾರಣ್ಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಹಾಗಂತ ಕೇವಲ ಕರ್ನಾಟಕ ಅಷ್ಟೇ ಅಲ್ಲ, ಉತ್ತರಾಖಂಡ್ ಸೇರಿದಂತೆ ವಿದೇಶಗಳಿಗೂ ವನ್ಯ ಜೀವಿಗಳ ಫೋಟೋ ತೆಗೆಯಲು ತೆರಳಿದ್ದರು.
ಇನ್ನು ತಾನು ತೆಗೆದ ಫೋಟೋಗಳನ್ನು ಮಾರಿ ಬಂದ ಹಣವನ್ನು ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸುತ್ತಾರೆ. ಈಗ ರಾಬರ್ಟ್ ₹100 ಕೋಟಿ ಕ್ಲಬ್ ಸೇರಿದ ಖುಷಿಯಲ್ಲೇ ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದ್ದಾರೆ.