ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲೇ ಇಂದು (ಜುಲೈ 22) ಸಚಿವ ಸಂಪುಟ ಸಭೆ ನಡೆಯಲಿದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದಿದ್ದು, ನಾಯಕತ್ವ ಬದಲಾವಣೆಯ ಕುರಿತು ಸುಳಿವು ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಸರಿ ಪಾಳಯ ಕೂಡ ಈ ಸಂಪುಟ ಸಭೆಯನ್ನು ಕುತೂಹಲದಿಂದ ನೋಡುತ್ತಿದೆ.
ನಾಯಕತ್ವ ಬದಲಾವಣೆಯಾಗುತ್ತೆ ಎನ್ನುವ ಸುದ್ದಿ ಹಬ್ಬಿದ್ದಲಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಈ ಮಧ್ಯೆ ಹೈಕಮಾಂಡ್ ಕೆಲವ ಸಚಿವರನ್ನು ದೆಹಲಿಗೆ ಕರೆಸಿಕೊಂಡಿದೆ. ಇನ್ನೊಂದೆಡೆ ಕೆಲವರು ದೆಹಲಿಗೆ ಹೋಗಿಬಂದಿದ್ದಾರೆ. ಲಿಂಗಾಯದ ಸಮುದಾಯದ ಸ್ವಾಮೀಜಿಗಳು ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟೆಲ್ಲಾ ಅದ್ರೂ, ಬಿಎಸ್ವೈ ಮಾತ್ರ ದೆಹಲಿ ಭೇಟಿ ವೇಳೆ ಬಿಜೆಪಿ ವರಿಷ್ಠರೊಂದಿಗೆ ನಡೆದ ಚರ್ಚೆಯ ಬಗ್ಗೆ ರಿವೀಲ್ ಮಾಡಿಲ್ಲ.
ಇಂದು (ಜುಲೈ 22) ನಡೆಯಲಿರೋ ಸಚಿವ ಸಂಪುಟ ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಸುಳಿವು ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಬೆಳವಣಿಗೆಗಳ ಕುರಿತು ಮಾಹಿತಿ ನೀಡುವ ಸಾಧ್ಯತೆಯಿದೆ. ಇನ್ನೊಂದೆಡೆ ನಾಯಕತ್ವದ ಬಗ್ಗೆ ಗೊಂದಲ ಪರಿಹಾರ ಮಾಡುವ ನಿಟ್ಟಿನಲ್ಲಿ ಯಡಿಯೂರಪ್ಪ ಸಂದೇಶ ರವಾನಿಸುವ ಸಾಧ್ಯತೆನೂ ಇದೆ ಎನ್ನಲಾಗಿದೆ. ಅದೇ ಒಂದು ವೇಳೆ ಸಂಪುಟ ಸಭೆಯಲ್ಲಿ ಬಿಎಸ್ವೈ ಮೌನಕ್ಕೆ ಶರಣಾದರೆ ರಾಜ್ಯ ರಾಜಕಾರಣ ಇನ್ನಷ್ಟು ಕಗ್ಗಂಟಾಗುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.
ಆದರೆ, ಹಿರಿಯ ಸಚಿವರು ಇದೇ ಅವಕಾಶವನ್ನು ಬಳಕೆ ಮಾಡಿಕೊಂಡು ನಾಯಕತ್ವದ ಬಗ್ಗೆ ಸಿಎಂ ರನ್ನು ಪ್ರಶ್ನೆ ಮಾಡ್ಬಹುದು. ಮುಖ್ಯಮಂತ್ರಿಗಳಿಂದ ಸಮಜಾಯಿಸಿ ಪಡೆಯಲು ಕೆಲ ಸಚಿವರು ಮುಂದಾಗ್ಬಹುದು. ಇಂದಿನ ಸಂಪುಟ ಸಭೆಯಲ್ಲಿ ಬಹುತೇಕ ಎಲ್ಲಾ ಸಚಿವರು ಭಾಗವಹಿಸುವ ಸಾಧ್ಯತೆ ಇರೋದ್ರಿಂದ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಚರ್ಚೆಗಿಂತ ರಾಜಕೀಯ ಚರ್ಚೆ ಕುತೂಹಲ ಕೆರಳಿಸಿದೆ.