ರಾಜ್ಯ ಸರ್ಕಾರದ ಹೊಸ ರೂಲ್ಸ್ ವಿರುದ್ಧ ಕನ್ನಡ ಚಿತ್ರರಂಗ ತಿರುಗಿಬಿದ್ದಿದೆ. ಯುವರತ್ನ ಸಿನಿಮಾಗೆ ಅನ್ಯಾಯ ಆಗ್ತಿದೆ. ರಾಜ್ಯ ಸರ್ಕಾರದ ಈ ದಿಢೀರ್ ನಿರ್ಧಾರ ಸರಿಯಲ್ಲ ಅಂತ ಸ್ಯಾಂಡಲ್ವುಡ್ ಕಿಡಿಕಾರುತ್ತಿದೆ. ಇದೇ ವೇಳೆ ಕೆ ಮಂಜು ಆರೋಗ್ಯ ಸಚಿವರ ಖಾತೆಯನ್ನೇ ಬದಲಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆರೋಗ್ಯ ಸಚಿವರು ತೆಗೆದುಕೊಂಡಿರೋದು ಅವೈಜ್ಞಾನಿಕ ನಿರ್ಧಾರ. ದಿಢೀರನೇ ಈಗ 50 ಪರ್ಸೆಂಟ್ ಸೀಟು ಕಡಿತಗೊಳಿಸಿದ್ರೆ, ಚಿತ್ರರಂಗದ ಗತಿ ಏನಾಗ್ಬೇಕು? ಅದ್ರಲ್ಲೂ ರಿಲೀಸ್ ಆಗಿರೋ ದೊಡ್ಡ ಬಜೆಟ್ ಸಿನಿಮಾ ಎರಡೇ ದಿನದ ಬಳಿಕ ನಷ್ಟ ಅನುಭವಿಸಬೇಕಾಗುತ್ತೆ. ಥಿಯೇಟರ್ನಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿರೋದ್ರಿಂದ ಯುವರತ್ನಗೆ ಕಮ್ಮಿ ಅಂದ್ರೂ ₹30 ರಿಂದ ₹40 ಕೋಟಿ ನಷ್ಟ ಆಗುತ್ತೆ ಎಂದು ಕೆ. ಮಂಜು ಹೇಳಿದ್ದಾರೆ.
ಚಿತ್ರರಂಗವನ್ನ ಟಾರ್ಗೆಟ್ ಮಾಡಲಾಗ್ತಿದೆ. ಕೆಲ ಸಚಿವರು ಚಿತ್ರರಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಸುಧಾಕರ್ ಅವ್ರಿಗೆ ಕನ್ನಡ ಚಿತ್ರರಂಗಕ್ಕೆ ಆಗುವ ನಷ್ಟದ ಬಗ್ಗೆ ಅರಿವಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಅವರ ಖಾತೆಯನ್ನ ಬದಲಿಸಬೇಕು ಅಂತ ಕೆ.ಮಂಜು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ ಕಳೆದ ಎರಡು ದಿನಗಳಿಂದ ಉತ್ತಮ ಗಳಿಕೆ ಕಂಡಿದೆ. ಶನಿವಾರ ಕೂಡ ಯುವರತ್ನ ಬುಕ್ಕಿಂಗ್ 80 ಪರ್ಸೆಂಟ್ ಇದೆ. ಹೀಗಾಗಿ ಪುನೀತ್ ಅಭಿಮಾನಿಗಳಿಂದ ಹಿಡಿದು, ಇಡೀ ಚಿತ್ರರಂಗವವೇ ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ.