ಲವ್ ಮಾಕ್ಟೇಲ್ ಸಿನಿಮಾದ ಯಶಸ್ಸಿನ ಬಳಿಕ ಡಾರ್ಲಿಂಗ್ ಕೃಷ್ಣ ಫುಲ್ ಬ್ಯುಸಿಯಾಗ್ಬಿಟ್ಟಿದ್ದಾರೆ. ಒಂದರ ಹಿಂದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೀಗ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿರ್ದೇಶನದ ‘ಶುಗರ್ ಫ್ಯಾಕ್ಟರಿ’ ಚಿತ್ರೀಕರಣ ಮುಗಿದಿದ್ದು, ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಅದೇನು ಅನ್ನೋದನ್ನು ಮುಂದೆ ಓದಿ.
ಇದೇ ಸೆಪ್ಟೆಂಬರ್ 10ಕ್ಕೆ ಗಣೇಶ ಚತುರ್ಥಿ. ಈ ಸಂಭ್ರಮದ ದಿನದಂದೇ ‘ಶುಗರ್ ಫ್ಯಾಕ್ಟರಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಆಗುತ್ತಿದೆ. ಬಹದ್ದೂರ್ ಚೇತನ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ವಿಶೇಷ ಅಂದ್ರೆ, ಈ ಹಾಡನ್ನು ಹಾಡಿರೋದು ಖ್ಯಾತ ಗಾಯಕ ಬಾಬಾ ಸೆಹಗಲ್. ಕಫಿರ್ ರಫಿ ಟ್ಯೂನ್ ಹಾಕಿರೋ ಈ ಹಾಡು ಯುವಜನರ ಮನಗೆಲ್ಲಲಿದೆ. ಲಿರಿಕಲ್ ಹಾಡಿಗೂ ಮುನ್ನ ಚಿತ್ರದ ಸಾಂಗ್ ಟೀಸರ್ ರಿಲೀಸ್ ಆಗಲಿದೆ.
ಈ ಮಸ್ತಿ ಹಾಡಿನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮಾಂಟೆರೊ ಭರ್ಜರಿ ಸ್ಪೆಪ್ಸ್ ಹಾಕಿದ್ದಾರೆ. ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಸಂತೋಷ್ ರೈ ಪಾತಾಜೆ ಸುಂದರತಾಣಗಳಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಮಾಡಿದ್ದಾರೆ.