ಅಫ್ಘಾನಿಸ್ತಾನದಲ್ಲಿ ಜನರ ಬಾಳು ಬೀದಿಗೆ ಬಂದಿದೆ. ತಾಲಿಬಾನಿಗಳು ಅಫ್ಘಾನ್ ವಶಕ್ಕೆ ಪಡೆದ ಬೆನ್ನಲ್ಲೇ ಅಲ್ಲಿನ ಜನರು ಜೀವ ಉಳಿಸಿಕೊಳ್ಳೋಕೆ ಊರು ಬಿಟ್ಟು ಹೋಗಲು ಪರದಾಡ್ತಿದ್ದಾರೆ. ಕೆಲವೆಡೆ ತಾಲಿಬಾನಿಗಳ ವಿರುದ್ಧ ಜನರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಈ ವೇಳೆ ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಕಹಿ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಅಫ್ಘಾನಿಸ್ತಾನದಲ್ಲಿ ಕಾಬೂಲ್ ಎಕ್ಸ್ಪ್ರೆಸ್ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಜಾನ್ ಅಬ್ರಾಹಂ ಹಾಗೂ ಅರ್ಷದ್ ವಾರ್ಸಿ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಚಿತ್ರೀಕರಣ ಮಾಡುವಾಗ ನಿರ್ದೇಶಕ ಕಬೀರ್ ಖಾನ್ಗೆ ತಾಲಿಬಾನಿಗಳಿ ಜೀವ ಬೆದರಿಕೆ ಹಾಕಿದ್ದರು. ಈ ವಿಷಯವನ್ನು ಕಬೀರ್ ಖಾನ್ ಈಗ ನೆನಪಿಸಿಕೊಂಡಿದ್ದಾರೆ.
ಅಂದು ಅಫ್ಘಾನಿನ ಜನರು ಸಿನಿಮಾ ಚಿತ್ರೀಕರಣ ಮಾಡಲು ಸಹಕಾರ ನೀಡಿದ್ದರು. ಆದರೆ, ಕಷ್ಟದಲ್ಲಿರೋ ಅಲ್ಲಿನ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಕಬೀರ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಿನಿಮಾವನ್ನು ಬ್ಯಾನ್ ಮಾಡುತ್ತೆ. ಸಿನಿಮಾದಲ್ಲಿ ತೊಡಗಿಸಿಕೊಂಡವರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.