ಭರತ್ ಅನೇ ನೇನು, ಕಬೀರ್ ಸಿಂಗ್ ಸಿನಿಮಾ ನೋಡಿದವ್ರಿಗೆ ಕಿಯಾರಾ ಅಡ್ವಾಣಿ ಯಾರು ಅಂತ ಹೇಳ್ಬೇಕಿಲ್ಲ. ಅದ್ರಲ್ಲೂ ಪಡ್ಡೆ ಹುಡುಗರಿಗೆ ಕಿರಾಯಾ ಕನಸಿನ ರಾಣಿಯಾಗ್ಬಿಟ್ಟಿದ್ದಾಳೆ. ಹೀಗಾಗಿ ಯಾವಾಗಲೂ ತನ್ನ ಅಭಿಮಾನಿಗಳನ್ನು ಸೆಳೆಯೋಕೆ ಏನಾದ್ರೂ ಮಾಡ್ತಾನೇ ಇರ್ತಾಳೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರುತ್ತಾಳೆ. ಸದ್ಯ ತನ್ನ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟ ಬಿಕಿನಿ ಫೋಟೋವೊಂದು ಭಾರೀ ವೈರಲ್ ಆಗಿದೆ.
ಕಿಯಾರಾ ಅಡ್ವಾಣಿ ತನ್ನ ಸೌಂದರ್ಯದ ಬಗ್ಗೆ ಸದಾ ಗಮನ ಹರಿಸುತ್ತಾಳೆ. ಸಿನಿಮಾದ ಜೊತೆ ಜೊತೆಗೆ ವರ್ಕ್ಔಟ್ ಮಾಡೋದನ್ನು ನಿಲ್ಲಿಸೋದಿಲ್ಲ. ಹೀಗಾಗಿ ಅಂಜಿಕೆ ಇಲ್ಲದೆ ತನ್ನ ಟೋನ್ ಆಗಿರೋ ಸ್ಲಿಮ್ ದೇಹದ ಫೋಟೋಗಳನ್ನು ತನ್ನ ಅಭಿಮಾನಿಗಳಿಗಂತ್ಲೇ ಶೇರ್ ಮಾಡುತ್ತಲೇ ಇರ್ತಾಳೆ.
ಸದ್ಯ ಹಳದಿ ಬಣ್ಣದ ಬಿಕಿನಿ ತೊಟ್ಟಿರೋ ಫೋಟೊವೊಂದನ್ನ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾಳೆ.
ಇದೇ ಫೋಟೊ ಈಗ ಆಕೆಯ ಅಭಿಮಾನಿಗಳ ನಿದ್ದೆಗೆಡಿಸಿದೆ. ಅಂದ್ಹಾಗೆ ಈ ವರ್ಷದ ಆರಂಭದಲ್ಲಿ ಕಿಯಾರಾ ಅಡ್ವಾನಿ ತನ್ನ ಭಾಯ್ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಾಲ್ಡೀವ್ಸ್ಗೆ ಹಾರಿದ್ದಳು. ಆ ವೇಳೆ ತೆಗಿಸಿಕೊಂಡಿದ್ದ ಫೋಟೊ ಎನ್ನಲಾಗಿದೆ.
ಕಿಯಾರಾ ಅಡ್ವಾಣಿ ಹೀಗೆ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾಳೆ. ಪ್ರತಿಸಲ ಫೋಟೋ ಶೇರ್ ಮಾಡಿದಾಗ್ಲೂ ಇಂಟರ್ನೆಟ್ನಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗುತ್ತೆ. ಸದ್ಯ ಕಿಯಾರಾ ಅಡ್ವಾಣಿ ಗೆಳೆಯ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಶೇರ್ಷಾ ಚಿತ್ರದಲ್ಲಿ ನಟಿಸುತ್ತಿದ್ದಾಳೆ.