ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು ಜೊತೆ ನಟಿಸೋಕೆ ಯಾರು ಹಿಂದೇಟು ಹಾಕ್ತಾರೆ ಹೇಳಿ. ದಕ್ಷಿಣ ಭಾರತದ ನಟಿಯರೇ ಇರಲಿ, ಬಾಲಿವುಡ್ ನಟಿಯರೇ ಇರಲಿ. ಪ್ರಿನ್ಸ್ ಸಿನಿಮಾಗೆ ನೋ ಅನ್ನೋದೇ ಇಲ್ಲ. ಈಗ ತ್ರಿವಿಕ್ರಮ್ 11 ವರ್ಷಗಳ ಬಳಿಕ ಮಹೇಶ್ ಬಾಬು ನಿರ್ದೇಶಿಸಲು ಹೊರಟಿರೋ SSMB28 ಚಿತ್ರಕ್ಕೆ ಬಾಲಿವುಡ್ ದಿಶಾ ಪಾಟ್ನಿ ಆಯ್ಕೆಯಾಗಿದ್ದಾಳೆ ಅನ್ನೋ ಮಾತು ಕೇಳಿ ಬರ್ತಿದೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಗರ್ಲ್ಫ್ರೆಂಡ್ ದಿಶಾ ಪಾಟ್ನಿ ಈಗಾಗ್ಲೇ ಲೋಫರ್ ಅನ್ನೋ ತೆಲುಗು ಸಿನಿಮಾದಲ್ಲಿ ನಟಿಸಿದ್ದಾಳೆ. ಹಾಗಾಗಿ, ಈಕೆಯ ತೆಲುಗು ಚಿತ್ರರಂಗ ಹೊಸದೇನಲ್ಲ. ಆದ್ರೂ, ದಕ್ಷಿಣದ ಸೂಪರ್ಸ್ಟಾರ್ ಜೊತೆ ಇದೇ ಮೊದಲ ಬಾರಿಗೆ ನಟಿಸೋ ಅವಕಾಶ ಸಿಕ್ಕಿದೆ. ಸಲ್ಮಾನ್ ಖಾನ್ ಸಿನಿಮಾ ರಾಧೆಯಲ್ಲಿ ಬೋಲ್ಡ್ ಅವತಾರವೆತ್ತಿರೋ ದಿಶಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Haarika & Hassine Creations ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ರಾ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಸದ್ಯ ದಿಶಾ ಜೊತೆ ಮಾತುಕತೆ ನಡೆಯುತ್ತಿದ್ದು, ಎಲ್ಲಾ ಹೊಂದಾಣಿಕೆಯಾದ್ರೆ, ಟೈಗರ್ ಶ್ರಾಫ್ ಗರ್ಲ್ಫ್ರೆಂಡ್ ಟಾಲಿವುಡ್ನಲ್ಲಿ ಮತ್ತೆ ಕಾಣಿಸಿಕೊಳ್ಳಿದ್ದಾಳೆ.
ಭರತ್ ಅನೇ ನೇನು ಬಳಿಕ ಮಹೇಶ್ ಬಾಬು ಸಿನಿಮಾ ವೈಖರಿನೇ ಬದಲಾಗಿದೆ. ಹೀಗಾಗಿ ಸರ್ಕಾರು ವಾರಿ ಪಾಟ ಚಿತ್ರದ ಮೇಲೆ ಮಹೇಶ್ ಬಾಬು ಫ್ಯಾನ್ಸ್ ಕಣ್ಣಿಟ್ಟಿದ್ದಾರೆ. ಅಷ್ಟ್ರಲ್ಲೇ ತ್ರಿವಿಕ್ರಮ್ ಸಿನಿಮಾ ಕೂಡ ಸದ್ದು ಮಾಡೋಕೆ ಶುರುಮಾಡಿದೆ.