ಕೊರೊನಾ ಇನ್ನೂ ಅದೆಷ್ಟು ಮಂದಿಯನ್ನ ಬಲಿಪಡೆಯುತ್ತೋ ಗೊತ್ತಿಲ್ಲ. ದಿನದಿಂದ ದಿನದಿನಕ್ಕೆ ಕೊರೊನಾ ರಣಕೇಕೆ ಹಾಕುತ್ತಲೇ ಇದೆ. ಸಾಮಾನ್ಯ ಜನರಿಂದ ಹಿಡಿದು ದಿಗ್ಗಜರನ್ನೂ ನುಂಗಿ ನೀರು ಕುಡಿಯುತ್ತಿದೆ. ಅದ್ರಲ್ಲೂ ಭಾರತೀಯ ಚಿತ್ರರಂಗದಲ್ಲಿ ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಈಗ ಬಾಲಿವುಡ್ನ ಅದ್ಭುತ ನಟ ಬಿಕ್ರಂಜಿತ್ ಕನ್ವರ್ಪಾಲ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
52 ವರ್ಷದ ನಟ ಬಿಕ್ರಂಜಿತ್ ಕನ್ವರ್ಪಾಲ್ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ರು. ಆದ್ರೆ, ಚಿಕಿತ್ಸೆ ಫಲಿಸದೆ ಮೇ 1ರಂದು ಕೊನೆಯುಸಿರೆಳೆದಿದ್ದಾರೆ. ಬಿಕ್ರಂಜಿತ್ ಬಾಲಿವುಡ್ನಲ್ಲಿ ಚಿರಪರಿಚಿತ ನಟ. ಫೋಷಕ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ನಟ ಸಾವಿಗೆ ಬಾಲಿವುಡ್ ಮರುಗಿದೆ.
ಬಾಲಿವುಡ್ ನೀಲ್ ನಿತಿನ್ ಮುಖೇಶ್ ತನ್ನ ಟ್ವಿಟರ್ ಖಾತೆಯಲ್ಲಿ ಇದೊಂದು ನೋವಿನ ಸುದ್ದಿ. ನಾನು ಹಾಗೂ ಬಿಕ್ರಂಜಿತ್ ಕನ್ವರ್ಪಾಲ್ ಬಹಳ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಬೈಪಾಸ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದೆವು ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ಬಾಲಿವುಡ್ ನಟ ಮನೋಜ್ ಬಾಜಪೇಯಿ ಕೂಡ ಇದೆಂಥಾ ನೋವಿನ ಸುದ್ದಿಯೆಂದು ಟ್ವೀಟ್ ಮಾಡಿದ್ದಾರೆ.