ರಾಜ್ಯ ನಾಯಕತ್ವ ಬದಲಾವಣೆಯಾಗುತ್ತೆ ಅನ್ನೋ ಚರ್ಚೆ ಒಂದ್ಕಡೆ. ಅದೇ ಇನ್ನೊಂದು ಕಡೆ ಯಡಿಯೂರಪ್ಪ ಸಂಪುಟದಲ್ಲಿರುವ ಹಿರಿಯ ಸಚಿವರಿಗೆ ಫುಲ್ ಟೆನ್ಸನ್ ಶುರುವಾಗಿದೆ. ಸಿಎಂ ಬದಲಾವಣೆ ಹಿಂದೆನೇ ಹಿರಿಯ ಸಚಿವರ ಬದಲಾವಣೆ ಸುಳಿವು ಸಿಕ್ಕಿರೋದ್ರಿಂದ ಆತಂಕ ಹೆಚ್ಚಾಗಿದೆ. ಬಿಎಸ್ ವೈ ಸಂಪುಟದಲ್ಲಿರೋ ಹಿರಿಯ ಸಚಿವರ ಸ್ಥಾನ ಕೈತಪ್ಪುವ ಸಾಧ್ಯತೆಯಿದ್ದು, ಅವರೆಲ್ಲರೂ ಆತಂಕದಲ್ಲಿದ್ದಾರೆ.
ಬಿಜೆಪಿ ಆಂತರಿಕ ಮೂಲಗಳ ಪ್ರಕಾರ, ತಮ್ಮ ಸಚಿವ ಸ್ಥಾನಕ್ಕೆ ಕುತ್ತು ಬರುತ್ತೆ ಅಂತ ಗೊತ್ತಾಗುತ್ತಿದ್ದಂತೆ ಯುಡಿಯೂರಪ್ಪ ಧ್ಯಾನಕ್ಕೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪನವರೇ ಮುಂದುವರೆಯಲಿ ಎನ್ನುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
ಹೊಸ ಸಿಎಂ ನಿಯೋಜನೆ ಮಾಡಿದಂತೆ, ಹೊಸ ಸಂಪುಟ ರಚನೆ ಮಾಡೋ ಆಲೋಚನೆ ಹೈಕಮಾಂಡ್ಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಹಿರಿಯ ಸಚಿವರು ಆತಂಕಕ್ಕೆ ಒಳಗಾಗಿದ್ದಾರೆ. ಹಿರಿಯ ಸಚಿವರುಗಳನ್ನು ಪಕ್ಷದ ಸಂಘಟನೆಗೆ ನಿಯೋಜನೆ ಮಾಡುವ ಸಾಧ್ಯತೆ ಇರೋದ್ರಿಂದ ಸಂಪುಟದಿಂದ ಹೊರ ಹೋಗಬೇಕಾದ ಅನಿವಾರ್ಯತೆ ಎದುರಾಗ್ಬಹುದು. ಹೀಗಾಗಿ ಯಡಿಯೂರಪ್ಪ ಧ್ಯಾನ ಮಾಡುತ್ತಿದ್ದಾರೆ ಎನ್ನಲಾಗಿದೆ.