ಬಿಗ್ ಬಾಸ ಸೀಸನ್ 8 ಭರ್ಜರಿಯಾಗಿ ಆರಂಭಗೊಂಡಿದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗಿಂತ ಒಬ್ಬರು ಸ್ಪೆಷಲ್. ಮನೆಯೊಳಗೆ ಸ್ಪರ್ಧಿಗಳು ಆಡೋ ಆಟ ನೋಡೋಕೆ ಎಷ್ಟು ಕುತೂಹಲವೋ.. ಹಾಗೇ ಎಲಿಮಿನೆಟ್ ಯಾರಾಗ್ತಾರೆ ಅನ್ನೋದು ಕೂಡ ಅಷ್ಟೇ ಕುತೂಹಲ.
ಈ ಮನೆಯೊಳಗೆ ಕಾಲಿಟ್ಟ ಮೊದಲ ದಿನವೇ ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ, ಧನುಶ್ರೀ ಲ್ಯಾಗ್ ಮಂಜು ಅವ್ರನ್ನ ಇತರ ಸ್ಪರ್ಧಿಗಳು ನಾಮಿನೇಟ್ ಮಾಡಿದ್ರೆ, ನಿರ್ಮಲಾ ನೇರವಾಗಿ ನಾಮಿನೇಟ್ ಆಗಿದ್ರು. ಆದ್ರೆ, ನಾಮಿನೇಟ್ ಆದ ಸ್ಪರ್ಧಿಗಳಿಗೆ ಬಿಗ್ ಬಾಸ್ ವಿಶೇಷ ಅವಕಾಶವನ್ನ ಕೊಟ್ಟಿದ್ದರು. ಪ್ರಶಾಂತ್ ಸಂಬರ್ಗಿ ಹಾಗೂ ಲ್ಯಾಗ್ ಮಂಜು ಟಾಸ್ಕ್ ಗೆದ್ದು, ನಾಮಿನೇಷನ್ನಿಂದ ಬಚಾವ್ ಆದರು.
ಇನ್ನೊಂದ್ಕಡೆ ನಿಧಿ ಸುಬ್ಬಯ್ಯ ಹಾಗೂ ಟಿಕ್ ಟಾಕ್ ಸ್ಟಾರ್ ಧನುಶ್ರೀ ಅವ್ರಿಗೆ ನಾಮಿನೇಷನ್ನಿಂದ ಬಚಾವ್ ಆಗಲು ವಿಶೇಷ ಅವಕಾಶ ನೀಡಲಾಗಿತ್ತು. ತಮ್ಮನ್ನು ಉಳಿಸಲು ಅವರ ಬೇರೆ ಸ್ಪರ್ಧಿಗಳೊಂದಿಗೆ ಸೆಣೆಸಾಡಬೇಕಿತ್ತು. ಈ ವೇಳೆ ನಿಧಿ ಆಯ್ಕೆ ಮಾಡಿಕೊಂಡಿದ್ದು, ದಿವ್ಯಾ ಉರುಡುಗರನ್ನ. ಸ್ವಿಮ್ಮಿಂಗ್ ಪೂಲ್ನಲ್ಲಿ ನಿಧಿ ಆಟ ನಡೆಯದೆ ದಿವ್ಯಾ ಗೆದ್ದು ಬೀಗಿದ್ರು. ಇನ್ನೊಂದ್ಕಡೆ ಧನುಶ್ರೀ ತಮ್ಮ ಪ್ರತಿಸ್ಪರ್ಧಿಯಾಗಿ ಗೀತಾ ಭಟ್ರನ್ನ ಆಯ್ಕೆ ಮಾಡಿಕೊಂಡ್ರು.
ಇಬ್ಬರಿಗೂ ಕಟ್ಟಿಗೆ ಒಡೆಯುವ ಸ್ಪರ್ಧೆಯನ್ನ ನೀಡಲಾಗಿತ್ತು. ಈ ಸ್ಪರ್ಧೆಯಲ್ಲಿ ಗೀತಾ ಭಟ್ ಕಟ್ಟಿಗೆಯನ್ನ ಪೀಸ್ ಪೀಸ್ ಮಾಡಿ ಧನುಶ್ರೀಯನ್ನ ಸೋಲಿಸಿದ್ರು. ಹೀಗಾಗಿ ಗೀತಾ ಭಟ್ ಸೇಫ್ ಆದ್ರೆ, ಧನುಶ್ರೀ ನಾಮಿನೇಷನ್ನಿಂದ ತಪ್ಪಿಸಿಕೊಳ್ಳಲು ವಿಫಲರಾದ್ರು. ಈಗ ಕೊನೆಯದಾಗಿ ನಿಧಿ ಸುಬ್ಬಯ್ಯ, ಧನುಶ್ರಿ, ರಘು ಗೌಡ ಹಾಗೂ ವಿಶ್ವ ಬಿಗ್ಬಾಸ್ ಮನೆಯ ಹಾಟ್ ಸೀಟ್ನಲ್ಲಿ ಕೂತಿದ್ದಾರೆ.