ಬಿಗ್ ಬಾಸ್ ಮನೆ ವಿಶೇಷತೆನೇ ಅದು. ಇಲ್ಲಿ ಯಾರು ಯಾರಿಗೆ ದುಶ್ಮನ್ ಆಗ್ತಾರೆ. ಯಾರು ಬೆಸ್ಟ್ ಫ್ರೆಂಡ್ಸ್ ಆಗ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇಂತಹದ್ದೇ ಒಂದು ಘಟನೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಶುಭ ಪೂಜಾ ಬಳಿ ರಘು ಗೌಡ ಕ್ಷಮೆ ಕೇಳಿದ್ದಾರೆ. ಅದ್ಯಾಕೆ ಅಂತ ಹೇಳ್ತೀವಿ ನೋಡಿ.
ಬಿಗ್ ಬಾಸ್ ಶುರುವಾಗಿ ಒಂದು ವಾರ ಕಳೆಯೋದ್ರೊಳಗೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟ ಶುರುವಾಗಿದೆ. ಕೆಲವರು ಮೈಂಡ್ ಗೇಮ್ ಆರಂಭಿಸಿದ್ರೆ, ಮತ್ತೆ ಕೆಲವ್ರು ಜಾಗರೂಕರಾಗಿ ಆಟ ಆಡ್ತಿದ್ದಾರೆ. ಅಂದ್ಹಾಗೆ ಈ ವಾರ ಗಮನ ಸೆಳೆದಿರೋದು ನಟಿ ಶುಭಾ ಪೂಂಜಾ ಹಾಗೂ ಸಹ ಸ್ಪರ್ಧಿ ರಘು ಗೌಡ (Raghu Vine Store).
ಹೌದು.. ರಘು ಗೌಡ ಇದ್ದಕ್ಕಿದ್ದ ಹಾಗೇ ಶುಭಪೂಂಜಾ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಶುಭಾ ಪೂಂಜಾರನ್ನ ತೆರೆ ಮೇಲಷ್ಟೇ ನೋಡಿದ್ದರಿಂದ ಅವರ ಅಭಿಪ್ರಾಯ ಬೇರೆನೇ ಇತ್ತಂತೆ. ಆದ್ರೆ, ಬಿಗ್ ಬಾಸ್ ಮನೆಯಲ್ಲಿ ನೇರಾ ನೇರ ನೋಡಿದ್ದರಿಂದ ಅವರ ನಿಜ ವ್ಯಕ್ತಿತ್ವದ ದರ್ಶನ ಆಗಿದೆ. ಹೀಗಾಗಿ ರಘು ಗೌಡ, ಶುಭ ಪೂಂಜಾರನ್ನ ಹೊಗಳಿಕೊಂಡಾಡಿದ್ದಾರೆ.
ಕೆಲವು ಸಿನಿಮಾಗಳನ್ನ, ಸುದ್ದಿಗಳನ್ನ ನೋಡಿ ಅವುಗಳ ಪ್ರಭಾವ ಬೀರಿದ್ದರಿಂದ ಶುಭ ಮೇಲಿನ ಅಭಿಪ್ರಾಯ ಬೇರೆಯದ್ದೇ ಆಗಿತ್ತು. ಆದ್ರೆ ಹತ್ತಿರದಿಂದ ನೋಡಿದ ಬಳಿಕ ನಾನು ತಪ್ಪು ಎಂಬುದು ಗೊತ್ತಾಗಿದೆ ಎಂದು ರಘು ಕ್ಷಮೆ ಕೇಳಿದ್ದಾರೆ. ರಘು ಕ್ಷಮೆಯನ್ನ ಶುಭಾ ಪೂಂಜಾ ನಗುವಿನೊಂದಿಗೆ ಸ್ವೀಕರಿಸಿದ್ದಾರೆ.
ಶುಭಾ ಪೂಂಜಾ ಕೂಡ ಬಿಗ್ ಬಾಸ್ ಮನೆ ಸೇರಿಕೊಂಡಲ್ಲಿಂದ ಸೇಫ್ ಆಗಿ ಗೇಮ್ ಆಡ್ತಿದ್ದಾರೆ. ಮೊದಲ ವಾರದಲ್ಲಿ ಮೂರು ದಿನದೊಳಗೆ ಶುಭಾ ಯಾರೊಂದಿಗೂ ಕಿತ್ತಾಡಿಕೊಂಡಿಲ್ಲ. ಯಾರನ್ನೂ ದ್ವೇಷ ಮಾಡಿಲ್ಲ. ಯಾರನ್ನೂ ದೂರುತ್ತಲೂ ಇಲ್ಲ. ಎಲ್ಲರೂ ಶುಭಾ ಪೂಂಜಾರನ್ನ ಇಷ್ಟಪಡಲು ಆರಂಭಿಸಿದ್ದಾರೆ.