ಬಿಗ್ ಬಾಸ್ ಕಿರುತೆರೆ ಆಡಿಯನ್ಸ್ ಕಾತುರದಿಂದ ಕಾಯ್ತಿರೋ ರಿಯಾಲಿಟಿ ಶೋ. ಇಲ್ಲಿ ನಗುವಿರುತ್ತೆ. ಅಳು ಇರುತ್ತೆ. ಮಸ್ತ್ ಆಗಿರೋ ಆಟ ಇರುತ್ತೆ. ಹಾಡು, ಕುಣಿತ, ನಾಟಕ. ಏನೇನು ಇರಲ್ಲ ಇಲ್ಲಿ. ಇದೇ ಕಾರಣಕ್ಕೆ ಬಿಗ್ ಬಾಸ್ ಸೀಸನ್ 8ಅನ್ನ ನೋಡೋಕೆ ಕಾತುರದಿಂದ ಕಾಯ್ತಿದ್ದಾರೆ. ಆದ್ರೆ, ಬಿಗ್ ಬಾಸ್ ಮನೆಯೊಳಗೆ ರಂಜಿಸಲಿರೋ ಸ್ಪರ್ಧಿಗಳ್ಯಾರು ಅನ್ನೋದು ಮಾತ್ರ ಇನ್ನೂ ಸೀಕ್ರೆಟ್ ಆಗೇ ಉಳಿದಿದೆ.
ಬಿಗ್ ಬಾಸ್ ಮನೆಯೊಳಗೆ ಯಾಱರು ಹೋಗ್ತಾರೆ ಅನ್ನೋದನ್ನ ಒಂದಿಷ್ಟು ಹೆಸರುಗಳು ಓಡಾಡ್ತಾನೇ ಇವೆ. ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾಗಿರೋ ಹೆಸರು ಮೂರುಗಂಟು ಧಾರಾವಾಹಿ ಖ್ಯಾತಿಯ ಸಮಿಕ್ಷಾ. ಇನ್ನೇನು ಬಿಗ್ ಬಾಸ್ ಸೀಸನ್ 8 ಶುರುವಾಗೋಕೆ ಒಂದು ವಾರ ಬಾಕಿ ಇರುವಾಗ್ಲೇ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿವೆ. ಆದ್ರೆ ಇದೂವರೆಗೂ ಸಮೀಕ್ಷಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಿಗ್ ಬಾಸ್ ಮನೆಯೊಳಗೆ ಯಾಱರು ಹೋಗ್ತಾರೆ ಅನ್ನೋ ಒಂದಿಷ್ಟು ಹೆಸರುಗಳು ಓಡಾಡುತ್ತಿವೆ. ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ ಗೌಡ, Sa Re Ga Ma Pa ಖ್ಯಾತಿಯ ಹನುಮಂತ, ಧಾರಾವಾಹಿ ನಟಿ ಗೀತಾ ಭಾರತಿ ಭಟ್, ಕಿರಣ್ ಶ್ರೀನಿವಾಸ್, ಸುಕ್ರುತ ನಾಗ್, ಆರ್ ಜೆ ರಾಜೇಶ್, ಅನುಷಾ ರಂಗನಾಥ್, ನಟಿ ರಾಗಿಣಿ ದ್ವಿವೇದಿ ಹೆಸರುಗಳು ಕೇಳಿಬರ್ತಿವೆ. ಆದರೆ, ಇದೆಲ್ಲದಕ್ಕೂ ಫೆಬ್ರವರಿ 28ರಂದು ತೆರೆಬೀಳುತ್ತೆ.
ಬಿಗ್ ಬಾಸ್ ಸೀಸನ್ 8 ಕಳೆದ ವರ್ಷವೇ ನಡೆಯಬೇಕಿತ್ತು. ಆದ್ರೆ, ಕೊರೊನಾ ಹಿನ್ನೆಲೆಯಲ್ಲಿ ಈ ಶೋ ಅನ್ನ ಮುಂದೂಡಲಾಗಿತ್ತು. ಈಗ ಲಸಿಕೆ ಬಂದ ಹಿನ್ನೆಲೆಯಲ್ಲಿ ಶೋ ನಡೆಸಲು ಕಲರ್ಸ್ ಕನ್ನಡ ಮುಂದಾಗಿದೆ. ಪ್ರತಿ ಸ್ಪರ್ಧಿಯನ್ನೂ ಕೊರೊನಾ ತಪಾಸಣೆ ಮಾಡಿ ನಂತರ ಮನೆಯೊಳಗೆ ಬಿಡಲು ತೀರ್ಮಾನಿಸಿದ್ದು, ಬಿಗ್ ಬಾಸ್ ಮನೆಯನ್ನ ಸ್ಯಾನಟೈಸ್ ಮಾಡಲಾಗಿದೆ.