ನೇರ ನುಡಿಗಳಿಂದಲೇ ಫೇಮಸ್ ಆಗಿದ್ದ ಪ್ರಿಯಾಂಕಾ ತಿಮ್ಮೇಶ್, ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಎಲಿಮಿನೆಟ್ ಆಗಿ ಹೊರ ಬರುವ ವೇಳೆ ಬಿಗ್ಬಾಸ್ ಪ್ರಿಯಾಂಕಾಗೆ ವಿಶೇಷ ಅಧಿಕಾರವೊಂದನ್ನು ನೀಡಿತ್ತು. ಮುಂದಿನ ವಾರ ಯಾರನ್ನು ನೇರವಾಗಿ ನಾಮಿನೇಟ್ ಮಾಡಲು ಇಚ್ಛೆ ಪಡುತ್ತೀರಿ ಎಂದು ಕೇಳಿದ್ದರು. ಆ ವೇಳೆ ಹಿಂದೆ ಮುಂದೆ ಯೋಚಿಸದೆ ಚಕ್ರವರ್ತಿಯ ಹೆಸರನ್ನು ಸೂಚಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಪ್ರಿಯಾಂಕಾ ತಿಮ್ಮೇಶ್ ಹಾಗೂ ಚಕ್ರವರ್ತಿ ಮಧ್ಯೆ ಜಟಾಪಟಿ ನಡೆಯುತ್ತಲೇ ಇತ್ತು. ಈ ಮಧ್ಯೆ ಬಿಗ್ಬಾಸ್ ಮನೆಯೊಳಗೆ ಚಕ್ರವರ್ತಿ ಅಶ್ಲೀಲ ಪದಗಳನ್ನು ಬಳಸಿದ್ದರು. ಇದು ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಮತ್ತೆ ಚಕ್ರವರ್ತಿಯ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ಪ್ರಿಯಾಂಕಾ ಮನೆಯಿಂದ ನಿರ್ಗಮಿಸುವ ವೇಳೆ ಚಂದ್ರಚೂಡ್ ಮಿಡಲ್ ಫಿಂಗರ್ ತೋರಿಸಿದ್ದರು ಎನ್ನಲಾಗಿದೆ.
ಪ್ರಿಯಾಂಕಾ ತಿಮ್ಮೇಶ್ರನ್ನು ಬೀಳ್ಕೊಡಲು ಸ್ಪರ್ಧಿಗಳೆಲ್ಲರೂ ಗೇಟ್ ಬಳಿ ಬಂದ್ರೆ, ಚಕ್ರವರ್ತಿ ಮಾತ್ರ ಸೋಫಾದ ಮೇಲೆ ಕುಳಿತು ಮಿಡಲ್ ಫಿಂಗರ್ ತೋರಿಸಿದ್ದಾರೆ ಎನ್ನಲಾಗಿದೆ. ಕಲರ್ಸ್ ಕನ್ನಡ ಈ ದೃಶ್ಯವನ್ನು ಬ್ಲರ್ ಮಾಡಿದ್ದು, ಪ್ರಶಾಂತ್ ಸಂಬರಗಿ ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಸನ್ನೆಗಳು ಸರಿಯಲ್ಲವೆಂದು ತಿಳಿಸಿದ್ರು.
ಬಿಗ್ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಲ್ಲಿಂದ ಚಕ್ರವರ್ತಿ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇದ್ದಾರೆ. ಬಿಗ್ಬಾಸ್ ಮನೆಯೊಳಗೆ ಗಮನ ಸೆಳೆಯಲು ಹೀಗೆ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೋ..? ಇಲ್ಲಾ ಆಕ್ರೋಶದ ಪ್ರತಿಕ್ರಿಯೆನೋ ಅನ್ನೋದು ತಿಳಿಯದಾಗಿದೆ.