ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪಾಲಿಗೆ ಡಿ ಬಾಸ್.. ಸಿನಿಮಾ ಇರಲಿ ಸಾಮಾಜಿಕ ಕಾರ್ಯವೇ ಇರಲಿ ದರ್ಶನ್ ಹೇಳಿದ ಮಾತನ್ನು ಅಭಿಮಾನಿಗಳು ಮೀರೋದಿಲ್ಲ. ಅದಕ್ಕೆ ಆಗಸ್ಟ್ 11 ರಂದು ನೆಚ್ಚಿನ ನಟನಿಗೆ ವಿಶೇಷವಾದ ದಿನವನ್ನು ತಾವೇ ಆಚರಿಸಿ ಸಂಭ್ರಮಿಸೋಕೆ ರಾಬರ್ಟ್ ಫ್ಯಾನ್ಸ್ ಮುಂದಾಗಿದ್ದಾರೆ. ಹಾಗಿದ್ರೆ, ದರ್ಶನ್ ಅಭಿಮಾನಿಗಳು ಆಗಸ್ಟ್ 11 ರಂದು ಸಂಜೆ 6 ಗಂಟೆಗೆ ಟ್ರೆಂಡ್ ಮಾಡೋಕೆ ಕರೆ ಕೊಟ್ಟಿದ್ದೇಕೆ? ಅಂತಹದ್ದೇನು ವಿಶೇಷತೆಯಿದೆ? ಮುಂದೆ ಓದಿ.
ಸ್ಯಾಂಡಲ್ವುಡ್ನ ಐರಾವತ ದರ್ಶನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 24 ವರ್ಷ ಆಗುತ್ತೆ. ಅದಕ್ಕೆ ಆಗಸ್ಟ್ 11 ರಂದು ದಚ್ಚು ಫ್ಯಾನ್ಸ್ ಸಂಭ್ರಮಿಸಲು ಮುಂದಾಗಿದ್ದಾರೆ. ಸಂಜೆ ಆರು ಗಂಟೆಗೆ ವಿಶೇಷವಾದ ಡಿಪಿಯನ್ನು ಹೊರಬಿಡಲು ಸಜ್ಜಾಗಿದ್ದಾರೆ. ಆ ಡಿಪಿ ಸಂಜೆ ಆರು ಗಂಟೆಯ ಬಳಿಕ ಎಲ್ಲೆಡೆ ಟ್ರೆಂಡ್ ಆಗಲಿದೆ. ಅಭಿಮಾನಿಗಳು ತಮ್ಮದೆ ಹಬ್ಬವೆನ್ನುವಂತೆ ಸಂಭ್ರಮಿಸಿ ಕುಣಿದು ಕುಪ್ಪಳಿಸಲಿದ್ದಾರೆ.
ಮೆಜೆಸ್ಟಿಕ್ ಸಿನಿಮಾಗೂ ಮುನ್ನವೇ ದರ್ಶನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಲೈಟ್ ಮ್ಯಾನ್ ಆಗಿ, ಕ್ಯಾಮರಾ ಸಹಾಯಕನಾಗಿ ದರ್ಶನ್ ದುಡಿದಿದ್ದಾರೆ. ಮೆಜೆಸ್ಟಿಕ್ ಬಳಿಕ ದರ್ಶನ್ ಮತ್ತೆಂದು ಹಿಂತಿರುಗಿ ನೋಡಿಲ್ಲ. ರಾಬರ್ಟ್ ವರೆಗೂ ಆನೆ ನಡೆದಿದ್ದೇ ದಾರಿ ಅನ್ನೋ ಹಾಗೆ ದರ್ಶನ್ ನಡೆದಿದ್ದೇ ದಾರಿ ಅನ್ನೋ ಹಾಗಾಗಿದೆ.
50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ದರ್ಶನ್ 24ನೇ ವರ್ಷದ ಸಿನಿಯಾನವನ್ನು ಅಭಿಮಾನಿಗಳು ಹೇಗೆ ಸಂಭ್ರಮಿಸುತ್ತಾರೆ? ಏನೇನು ಟ್ರೆಂಡ್ ಹುಟ್ಟಾಕುತ್ತಾರೆ? ಯಾವ್ಯಾವ ದಾಖಲೆಗಳನ್ನು ಬರೆಯುತ್ತಾರೆ? ಇಂತಹದ್ದೇ ಒಂದಿಷ್ಟು ಕುತೂಹಲಗಳು ಮನೆ ಮಾಡಿವೆ.