ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ರೂ, ರಿಲೀಸ್ಗೆ ಹಿಂದೆ ಮುಂದೆ ನೋಡ್ತಿವೆ. ಅದ್ರಲ್ಲೂ ಬಾಲಿವುಡ್ ಅಂತ ಇನ್ನೂ ದೊಡ್ಡ ದೊಡ್ಡ ಸಿನಿಮಾಗಳನ್ನ ಬಿಡುಗಡೆ ಮಾಡುವ ಗೋಜಿಗೆ ಹೋಗಿಲ್ಲ. ಆದ್ರೆ, ದಕ್ಷಿಣ ಭಾರತದ ಸಿನಿಮಾಗಳು ಒಂದೊಂದಾಗೇ ರಿಲೀಸ್ ಡೇಟ್ ಅನೌನ್ಸ್ ಮಾಡಿವೆ. ಒಂದೇ ದಿನ ಎರಡೆರಡು ಬಿಗ್ ಸಿನಿಮಾಗಳ ಬಿಡುಗಡೆಗೆ ವೇದಿಕೆ ರೆಡಿಯಾಗಿದೆ.
ಬಾಲಿವುಡ್ನಲ್ಲಂತೂ ಬಾಕ್ಸಾಫೀಸ್ನಲ್ಲಿ ಪೈಪೋಟಿ ಮಾಡೋಕೆ ಸಿನಿಮಾಗಳು ತುದಿಗಾಲಲ್ಲಿ ನಿಂತಿವೆ. ಸಲ್ಮಾನ್ ಖಾನ್ ‘ರಾಧೆ’ ಗೆ ಜಾನ್ ಅಬ್ರಹಂನ ‘ಸತ್ಯಮೇವ ಜಯತೆ 2′, ಪ್ರಭಾಸ್ ‘ರಾಧೇ ಶ್ಯಾಂ’ ಎದುರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಥಿಯಾವಾಡಿ’ ಹಾಗೇ ಪೃಥ್ವಿರಾಜ್ ಎದುರು ‘ಜರ್ಸಿ’, ಆರ್ ಆರ್ ಆರ್ ಟಕ್ಕರ್ ಕೊಡೋಕೆ ಮೈದಾನ್, ಪೈಪೋಟಿ ಮಾಡೋಕೆ ಕ್ಯೂನಲ್ಲಿ ನಿಂತಿವೆ. ಆದ್ರೆ, ಕೆಜಿಎಫ್ 2ಗೆ ಟಕ್ಕರ್ ಕೊಡೋಕೆ ಮಾತ್ರ ಯಾವುದೇ ಸಿನಿಮಾ ಮುಂದೆ ಬರ್ತಿಲ್ಲ.
ಹೌದು.. ಇದೂವರೆಗೂ ಕೆಜಿಎಫ್ 2 ಗೆ ಟಕ್ಕರ್ ಕೊಡೊಕೆ ಅಂತ ಯಾವುದೇ ಸಿನಿಮಾ ಮುಂದೆ ಬಂದಿಲ್ಲ. ಕೆಲವು ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ‘ಕೆಜಿಎಫ್ 2′ ಎದುರಿಗೆ ಯಾವ ದೊಡ್ಡ ಸಿನಿಮಾ ರಿಲೀಸ್ ಆಗಲ್ಲ. ಇಂತಹದ್ದೊಂದು ಮಾತ್ರ ಬಾಲಿವುಡ್ನಲ್ಲೂ ಕೇಳಿಬರ್ತಿದೆ. ಅದಕ್ಕೆ ಕಾರಣ ಬಾಹುಬಲಿ 2 ಹುಟ್ಟಾಕಿದ ಅತೀ ದೊಡ್ಡ ಸೆನ್ಸೇಶನ್.
ಬಾಹುಬಲಿ 2 ಬಾಕ್ಸಾಫೀಸ್ ದಾಖಲೆಯನ್ನ ನೋಡಿ ಬೇರಗಾಗಿ ಹೋಗಿದ್ದ ಭಾರತೀಯ ಚಿತ್ರರಂಗ ಕೆಜಿಎಫ್ 2ಗಾಗಿ ಕಾದು ಕೂತಿದೆ. ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿದ್ದ ಬಾಹುಬಲಿ ಎದುರು ಯಾವ ಚಿತ್ರವೂ ನಿಂತಿರ್ಲಿಲ್ಲ. ಈಗ ಕೆಜಿಎಫ್ 2 ಇಂತಹದ್ದೇ ಹವಾ ಸೃಷ್ಟಿಸಿದೆ. ಈಗಾಗ್ಲೇ ಹೈಪ್ ಕ್ರಿಯೇಟ್ ಆಗಿರೋ ಸಿನಿಮಾ ಮುಂದೆ ತಮ್ಮ ಸಿನಿಮಾ ರಿಲೀಸ್ ಮಾಡಿ ರಿಸ್ಕ್ ತಗೊಳ್ಳೋಕೆ ಯಾರೂ ಮುಂದೆ ಬರ್ತಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ.