ಕೊರೊನಾ ಸಂಕಷ್ಟದ ಸಮಯದಲ್ಲಿ ಮನಮುಟ್ಟುವ ಮಾಧುರ್ಯದ ಜೊತೆಗೆ ಸ್ಫೂರ್ತಿದಾಯಕ ಹಾಡುಗಳು ನೊಂದವರಿಗೆ ಆಶಾಕಿರಣ. ಈ ನಿಟ್ಟಿನಲ್ಲಿ, ಸೋನಿ ಮ್ಯೂಸಿಕ್ ಇಂಡಿಯಾ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಿತಿ ಗುಲ್ಝಾರ್ ಮತ್ತು ಗ್ರ್ಯಾಮಿ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಮ್ಯೂಸಿಕ್ ಡೈರೆಕ್ಟರ್ ಎ.ಆರ್.ರೆಹಮಾನ್ ‘ಮೇರಿ ಪುಕಾರ್ ಸುನೋ’ ಎಂಬ ಸಾಂಗ್ ಅನ್ನು ಹೊರತಂದಿದ್ದಾರೆ. ಇದು ಭರವಸೆ ಮತ್ತು ಶಮನದ ಆಂಥೆಮ್ ಆಗಿ ಹೊರಹೊಮ್ಮಿದೆ. ಸೋನಿ ಮ್ಯೂಸಿಕ್ ಇಂಡಿಯಾ ಅನಾವರಣಗೊಳಿಸಿದ ಈ ಹಾಡು, ದಿಲ್ ಸೇ, ಗುರು, ಸ್ಲಮ್ಡಾಗ್ ಮಿಲಿಯನೇರ್, ಸಾಥಿಯಾ ಮತ್ತು ಓಕೆ ಜಾನು ರೀತಿಯ ಸ್ಮರಿಸಿಕೊಳ್ಳಬಹುದಾದ ಸಂಯೋಜನೆಯನ್ನು ಮತ್ತೆ ನೆನಪಿಸುತ್ತಿದೆ.
ಭಾರತದ ಪ್ರಮುಖ ಸಂಗೀತಗಾರರನ್ನು ‘ಮೇರಿ ಪುಕಾರ್ ಸುನೋ’ ಹಾಡು ಒಟ್ಟಾಗಿಸಿದೆ. ಅಲ್ಲದೆ, ಜನಪ್ರಿಯ ಗಾಯಕಿಯರಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್, ಕೆ ಎಸ್ ಚಿತ್ರಾ, ಸಾಧನಾ ಸರ್ಗಮ್, ಶಶಾ ತಿರುಪತಿ, ಅರ್ಮಾನ್ ಮಲಿಕ್ ಮತ್ತು ಆಸೀಸ್ ಕೌರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಪ್ತ ಸ್ವರಗಳಂತೆ ಈ ವಿಶಿಷ್ಟ ಸಂಯೋಜನೆಯು ತಲೆಮಾರುಗಳು ಮತ್ತು ಸಂಸ್ಕೃತಿಗಳ ಏಕತೆಯ ಪ್ರತೀಕದಂತಿದೆ.
ಈ ಆಂಥೆಮ್ ಭೂತಾಯಿಯ ಎಲ್ಲಾ ಮಕ್ಕಳೂ ಒಟ್ಟಾಗಿ ಎಂಬ ಕರೆ ನೀಡುತ್ತದೆ. ಅಲ್ಲದೆ, ಈ ಸಂಕಷ್ಟದ ಸಮಯ ನಿವಾರಣೆಯಾಗುತ್ತದೆ ಎಂಬ ಭರವಸೆಯನ್ನೂ ನೀಡುತ್ತದೆ. ಇದು ಭರವಸೆ ಮತ್ತು ಒಮ್ಮತದ ಭಾವವನ್ನು ನಮ್ಮೊಳಗೆ ಮರುರೂಪಿಸುತ್ತದೆ. ನಮ್ಮೊಳಗೆ ಇರುವ ನಂಬಿಕೆಯ ಮೇಲೆ ವಿಶ್ವಾಸ ಇಡುವುದಕ್ಕಾಗಿ ಪ್ರೋತ್ಸಾಹ ನೀಡುವ ಈ ಹಾಡು, ಈ ಸಂಕಷ್ಟದ ಸಮಯವು ಎಷ್ಟು ಪ್ರಖರ ಮತ್ತು ಖುಷಿಯ ಭವಿಷ್ಯದ ಸೂಚಕ ಎಂಬುದನ್ನು ಒತ್ತಿ ಹೇಳುತ್ತಿದೆ. ‘ಮೇರಿ ಪುಕಾರ್ ಸುನೋ’ ಎಂಬುದು ಒಂದು ಸ್ಥಳ. ಒಂದು ಭರವಸೆ. ಒಂದು ವಿಶ್ವಾಸ ಎಂಬ ನಂಬಿಕೆಯನ್ನು ಸಾಭೀತು ಪಡಿಸುತ್ತಿದೆ.
ಈ ಹಾಡಿನ ನಿರ್ದೇಶನ ಮತ್ತು ಸಂಗೀತ ಸಂಯೋಜನೆಯ ಬಗ್ಗೆ ಎ.ಆರ್.ರೆಹಮಾನ್ ಹೀಗಂದಿದ್ದಾರೆ. ‘‘ಈ ಸಾಂಕ್ರಾಮಿಕ ರೋಗದ ಸಮಯ ಎಲ್ಲರ ಜೀವನದಲ್ಲಿ ಅತ್ಯಂತ ಸಂಕಷ್ಟ ತಂದೊಡ್ಡಿದೆ. ಎಲ್ಲೆಡೆ ಅನಿಶ್ಚಿತತೆ ಮತ್ತು ನೋವು ಇದೆ. ಆದರೂ, ತುಂಬಾ ಸಹಿಷ್ಣುತೆ ಮತ್ತು ಶಮನವೂ ಇದೆ. ಭರವಸೆಯ ಹಾಡೊಂದನ್ನು ರೂಪಿಸಲು ಗುಲ್ಝಾರ್ ಮತ್ತು ನಾನು ಬಯಸಿದ್ದೇವೆ. ಯಾಕೆಂದರೆ, ನಮಗೆಲ್ಲರಿಗೂ ಭರವಸೆ ಅಗತ್ಯವಿದೆ. ಮೇರಿ ಪುಕಾರ್ ಸುನೋ ಎಂಬುದು ತನ್ನ ಮಕ್ಕಳ ಮೂಲಕ ಮಕ್ಕಳಿಗೆ ಹಾಡುವಂಥ ಹಾಡಾಗಿದೆ. ಮನುಷ್ಯರು ಹಲವು ಕಾಲಗಳನ್ನು ದಾಟಿಯೂ ಬದುಕುಳಿದಿದ್ದಾರೆ. ಈ ಸಂಕಷ್ಟವನ್ನೂ ಅವರು ಎದುರಿಸಿ ನಿಲ್ಲಲಿದ್ದಾರೆ ಎಂಬುದನ್ನು ಇದು ಹೇಳುತ್ತದೆ.’’
‘‘ಇದು ಭೂತಾಯಿಯ ಕಥೆ. ತನ್ನ ಮಾತು ಕೇಳಿ ಎಂದು ಆಕೆ ನಮಗೆ ಮನವಿ ಮಾಡಿಕೊಳ್ಳುತ್ತಾಳೆ. ಅಪಾರ ಸಂಪತ್ತು, ತಂಗಾಳಿ, ಹರಿವ ನದಿಗಳು ಮತ್ತು ಅನವರತ ಬೆಳಕಿನಿಂದ ಆಕೆ ನಮಗೆ ಭರವಸೆಯನ್ನು ನೀಡುತ್ತಾಳೆ. ನಮಗೆ ಜೀವನ ಎಂಬ ಉಡುಗೊರೆಯನ್ನು ಕಾಯ್ದುಕೊಳ್ಳುವ ಭರವಸೆಯನ್ನೂ ಇದು ನೀಡುತ್ತದೆ. ರೆಹಮಾನ್ ನನ್ನ ಶಬ್ದಗಳಿಗೆ ನಿಜಕ್ಕೂ ಅದ್ಭುತ ಸಂಯೋಜನೆಯನ್ನು ಮಾಡಿದ್ದಾರೆ.’’ ಎಂದು ಆಂಥೆಮ್ ಮೂಲ ಧ್ಯೇಯದ ಬಗ್ಗೆ ಗುಲ್ಝಾರ್ ಹೇಳಿದ್ದಾರೆ.
ಈ ಹಾಡು ಹೊಸ ಬದುಕಿಗಾಗಿ ಪ್ರೇರಣೆ ಹುಡುಕುತ್ತಿರುವ ಒಬ್ಬ ಮಗುವಿನ ದೃಷ್ಟಿಕೋನವನ್ನು ಹೊಂದಿದೆ. ಅತ್ಯದ್ಭುತ ಧ್ವನಿಗಳು ಈ ಹಾಡಿಗೆ ಧ್ವನಿಯಾಗಿದ್ದು, ಭರವಸೆ ಮತ್ತು ಸಮಗ್ರತೆಗೆ ಸ್ಫೂರ್ತಿಯ ಕ್ಷಣವನ್ನಾಗಿ ಇದು ರೂಪಿಸಿದೆ. ಎಲ್ಲ ಸಂಕಷ್ಟದ ಸಮಯವನ್ನೂ ಸಹಿಸಿಕೊಳ್ಳುವುದಕ್ಕೆ ಸ್ಫೂರ್ತಿಯಾಗಿದೆ. ಈ ದೃಶ್ಯಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾಗಿ ಸೆರೆಹಿಡಿದಿದ್ದರೂ, ವೀಕ್ಷಕರಿಗೆ ಮನೋಹರವಾದ ಭಾವವನ್ನು ನೀಡುತ್ತದೆ.
ಅಂದ್ಹಾಗೆ ಈ ಹಾಡಿನ ಶೇಕಡಾ 50ರಷ್ಟು ಗಳಿಕೆಯನ್ನು, ದೇಶದ ಪ್ರಮುಖ ದತ್ತಿ ಸಂಸ್ಥೆಗಳ ನೆರವಿನಲ್ಲಿ ಕೊವಿಡ್ ಪರಿಹಾರಕ್ಕೆ ಮೀಸಲಿಡಲಾಗಿದೆ.