ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಮೊದಲು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಬಾಹುಬಲಿ ಬಿಡುಗಡೆ ಬಳಿಕ ಮದುವೆ ಆಗ್ತಾರೆ ಎನ್ನಲಾಗಿತ್ತು. ಆದ್ರೆ, ಅದ್ಯಾವಾಗ ಇಬ್ಬರೂ ನಾವಿಬ್ಬರು ಸ್ನೇಹಿತರು ಅಮತ ಹೇಳಿದ್ರೋ, ಅಲ್ಲಿಂದ ಸ್ವಲ್ಪ ದಿನ ಈ ಗಾಸಿಪ್ ಸೈಲೆಂಟ್ ಆಗಿತ್ತು. ಈಗ ಮತ್ತೆ ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಚರ್ಚೆಯಾಗುತ್ತಿದೆ. ದುಬೈ ಮೂಲದ ಉದ್ಯಮಿಯನ್ನ ವಿವಾಹವಾಗ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ.
ಅನುಷ್ಕಾ ಶೆಟ್ಟಿ ಮದುವೆ ದುಬೈನಲ್ಲೇ ನೆಲೆಸಿರೋ ಉದ್ಯಮಿಯೊಂದಿಗೆ ನಡೆಯಲಿದೆ. ಈಗಾಗ್ಲೇ ಎರಡೂ ಮನೆಯವರೂ ಒಪ್ಪಿಗೆ ಸೂಚಿಸಿದ್ದಾರೆ ಅನ್ನೋ ವಿಷಯ ಹರಿದಾಡ್ತಿದೆ. ಇದ್ರೊಂದಿಗೆ ಆ ಉದ್ಯಮಿ ಅನುಷ್ಕಾ ಶೆಟ್ಟಿಗಿಂತ ವಯಸ್ಸಿನಲ್ಲಿ ಚಿಕ್ಕವರು ಎನ್ನಲಾಗುತ್ತಿದೆ. ಪ್ರತಿ ಭಾರಿಯೂ ಇಂತಹ ಮದುವೆ ವಿಚಾರಗಳು ಎದ್ದಾಗ್ಲೂ ಅನುಷ್ಕಾ ಸೈಲೆಂಟ್ ಆಗಿದ್ದಾರೆ. ಈ ಬಾರಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಅನುಷ್ಕಾ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಪ್ರಭಾಸ್ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ ನಿರ್ಮಿಸ್ತಿರೋ ಚಿತ್ರ ಕೈಯಲ್ಲಿದೆ. ಜಾತಿರತ್ನಲು ಖ್ಯಾತಿಯ ನವೀನ್ ಪೊಲಿಶೆಟ್ಟಿ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದಾರೆ. ಇವ್ರೊಂದಿಗೆ ಅನುಷ್ಕಾ ಶೆಟ್ಟಿ ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಅನುಷ್ಕಾ ಮದುವೆ ಟಾಲಿವುಡ್ಗೆ ಹಾಗೂ ಸಿನಿಪ್ರೇಮಿಗಳಿಗೆ ಇನ್ನೂ ಗೊಂದಲದ ಪ್ರಶ್ನೆಯಾಗೇ ಉಳಿದೆ. ಯಾಕಂದ್ರೆ, 40ರ ಆಸುಪಾಸಿನಲ್ಲಿರೋ ಅನುಷ್ಕಾ ಶೆಟ್ಟಿ ಯಾವಾಗ ಮದುವೆ ಆಗ್ತಾರೆ? ಯಾರನ್ನ ಮದುವೆ ಆಗ್ತಾರೋ ಅನ್ನೋ ಕುತೂಹಲ ಅಭಿಮಾನಿಗಳಿಗಿದೆ.