ಬಾಹುಬಲಿಯ ದೇವಸೇನಾ ಅನುಷ್ಕಾ ಶೆಟ್ಟಿ ತಮ್ಮ ಕರಿಯರ್ ಬಗ್ಗೆ ಸಿಕ್ಕಾಪಟ್ಟೆ ಚ್ಯೂಸಿಯಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಅನುಷ್ಕಾ ಮಹಿಳಾ ಪ್ರಧಾನ ಪಾತ್ರಗಳಲ್ಲೇ ಕಾಣಿಸಿಕೊಳ್ತಿದ್ದಾರೆ. ನಿಶಬ್ದಂ ಚಿತ್ರದ ನಂತರ ಅನುಷ್ಕಾ ಯುವಿ ಕ್ರಿಯೇಶನ್ಸ್ ನ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಅನುಷ್ಕಾಗೆ ನವೀನ್ ಪೋಲಿಸೆಟ್ಟಿ ನಾಯಕ.
ನವೀನ್ ನ ಇತ್ತೀಚಿನ ಚಿತ್ರ ಜಾತಿ ರತ್ನಾಲು ಸೂಪರ್ ಡೂಪರ್ ಹಿಟ್ ಆಗಿದೆ. ಹಾಗಾಗಿ ಈ ನಟನ ಸ್ಟಾರ್ ವ್ಯಾಲ್ಯೂ ಕೂಡಾ ಹೆಚ್ಚಿದೆ. ಹಾಗಾಗಿ ಯುವಿ ಕ್ರಿಯೇಶನ್ಸ್ ನ ಹೊಸಾ ಚಿತ್ರದಲ್ಲಿ ನವೀನ್ ಪಾತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಲು ನಿರ್ಧಾರ ಮಾಡಲಾಗಿದ್ಯಂತೆ. ನವೀನ್ ಪಾತ್ರಕ್ಕೆ ಮತ್ತಷ್ಟು ಸ್ಕ್ರೀನ್ ಸ್ಪೇಸ್ ಸೇರಿಸಲಾಗುತ್ತಿದೆ ಎನ್ನಲಾಗಿದೆ.
ಅಂದ್ಹಾಗೆ ಈ ಹೊಸಾ ಚಿತ್ರ ಕೂಡಾ ಮಹಿಳಾ ಪ್ರಧಾನ ಪಾತ್ರದ ಸುತ್ತಲೇ ಇರುವ ಕಥೆಯನ್ನು ಹೊಂದಿದೆ. ವರ್ಷಕ್ಕೆ ಒಂದೇ ಚಿತ್ರ ಮಾಡಿದರೂ ಪರವಾಗಿಲ್ಲ, ತನಗಿಷ್ಟವಾಗುವ ಚಿತ್ರವನ್ನು ಮಾತ್ರ ಮಾಡುವ ನಿರ್ಧಾರ ಮಾಡಿದ್ದಾರೆ ಭಾಗಾಮತಿ ನಟಿ ಅನುಷ್ಕಾ. ಹಾಗಾಗಿ ಒಂದು ಸಲ ಸ್ಕ್ರೀನ್ ಪ್ಲೇ ಲಾಕ್ ಆದ್ರೆ ನಂತರ ಚಿತ್ರದ ಕೆಲಸ ಆರಂಭವಾಗುತ್ತದೆ. ಆಗಲೇ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತೇವೆ ಎಂದಿದೆ ನಿರ್ಮಾಣ ಸಂಸ್ಥೆ. ಅಭಿಮಾನಿಗಳಂತೂ ಅನುಷ್ಕಾ ಮತ್ತು ನವೀನ್ ಜೋಡಿ ಹೇಗಿರಬಹುದು ಎನ್ನುವ ಬಗ್ಗೆ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.