ಸ್ಯಾಂಡಲ್ವುಡ್ನ ಹಿರಿಯ ನಟ ಅನಂತ್ನಾಗ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ಅದ್ರಲ್ಲೊಂದು ರಕ್ಷಿತ್ ಶೆಟ್ಟಿ ನಿರ್ಮಾಣದ ಅಬ್ರಕಡಾಬ್ರ. ಇನ್ನೊಂದು ಮೇಡ್ ಇನ್ ಬೆಂಗಳೂರು ಸಿನಿಮಾಗಳು. ಈ ಸಿನಿಮಾಗಳು ಬಗ್ಗೆ ಈಗಾಗ್ಲೇ ಕತೂಹಲ ದುಪ್ಪಟ್ಟಾಗಿವೆ. ಕನ್ನಡದಲ್ಲಿ ಹಿಂದಿಂದೆನೇ ಸಿನಿಮಾಗಳಲ್ಲಿ ನಟಿಸುತ್ತಿರೋ ಅನಂತ್ನಾಗ್ಗೆ ಪರಭಾಷೆಗಳಿಂದ್ಲೂ ಆಫರ್ಗಳು ಬರ್ತಿವೆ. ಆದರೆ ಕನ್ನಡ ಸಿನಿಮಾಗಳಿಗಾಗಿ ಅವುಗಳನ್ನು ಕೈ ಬಿಟ್ಟಿದ್ದಾರೆ.
ಲಾಕ್ಡೌನ್ ಮುಗಿದ ಬಳಿಕ ಅನಂತ್ನಾಗ್ ಅವ್ರಿಗೆ ಬಾಲಿವುಡ್ನಿಂದ ನಾಲ್ಕೈದು ಸಿನಿಮಾಗಳಿಗೆ ಆಫರ್ ಬಂದಿತ್ತು. ಆದ್ರೆ, ಅನಂತ್ನಾಗ್ ಆ ಸಿನಿಮಾಗಳಲ್ಲಿ ನಟಿಸೋಕೆ ಹಿಂದೇಟು ಹಾಕಿದ್ದರು. ಇದಕ್ಕೆ ಕಾರಣವಿದೆ. ಆ ಹಿಂದಿ ಸಿನಿಮಾಗಳನ್ನು OTTಗಾಗಿ ನಿರ್ಮಿಸುತ್ತಿದ್ದರು. ಆದ್ರಿಂದ ಅವ್ರು ನಟಿಸೋ ಮನಸ್ಸು ಮಾಡಿಲ್ಲವೆಂದು ಸ್ವತ: ಅನಂತ್ನಾಗ್ ತಿಳಿಸಿದ್ದಾರೆ.
ಕನ್ನಡದ ಯುವ ನಿರ್ದೇಶಕರೊಂದಿಗೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಹೊಸ ನಿರ್ದೇಶಕರು ವಿಭಿನ್ನ ಕಥೆಗಳನ್ನು ತರುತ್ತಾರೆ. ಈ ಕಾರಣಕ್ಕೆ ಯುವ ನಿರ್ದೇಶಕರೊಂದಿಗೆ ಹೆಚ್ಚೆಚ್ಚು ಸಿನಿಮಾ ಮಾಡುತ್ತಾರೆ. ಅಲ್ಲದೆ ಸ್ಯಾಂಡಲ್ವುಡ್ನಲ್ಲೇ ಕಂಫರ್ಟೆಬಲ್ ಇರೋದ್ರಿಂದ ಹೆಚ್ಚೆಚ್ಚು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ರಕ್ಷಿತ್ ಶೆಟ್ಟಿ ನಿರ್ಮಿಸ್ತಿರೋ ಅಬ್ರಕಡಾಬ್ರ ಸಿನಿಮಾದಲ್ಲಿ ಅನಂತ್ನಾಗ್ ಪಾತ್ರವೇನು ಅನ್ನೋದನ್ನು ಇನ್ನೂ ರಿವೀಲ್ ಮಾಡಿಲ್ಲ. ಆದ್ರೆ, ಜೀವನದಲ್ಲಿ ಕೆಲವು ವಿಷಯಗಳನ್ನು ಸರಿಯಾಗಿ ಮಾಡಿಲ್ಲ ಎಂದೆನಿಸಿದಾಗ, ಮುಂದೇನು ಅನ್ನೋ ಪ್ರಶ್ನೆ ಹಾಕಿಕೊಳ್ಳೋ ಪಾತ್ರ ಇವ್ರದ್ದು. ಜಾದುಗಾರನ ಈ ವಿಶಿಷ್ಟ ಸಿನಿಮಾದಲ್ಲಿ ಅಬ್ರಕಡಬ್ರ ಎನ್ನುತ್ತಲೇ ಆನಂತ್ನಾಗ್ ಎಂಟ್ರಿ ಆಗಿದೆ. ಮುಂದೇನು ಅನ್ನೋದನ್ನು ಕಾದು ನೋಡ್ಬೇಕಿದೆ.