ಯುವರತ್ನ ಅಮೆಜಾನ್ ಪ್ರೈಮ್ಗೆ ಬಿಡುಗಡೆಯಾದ ಒಂದೇ ವಾರಕ್ಕೆ ಸೇಲ್ ಆಗಿದೆ. ಇದು ಕನ್ನಡದ ಮೇಲೆ ಯಾವ ರೀತಿ ಎಫೆಕ್ಟ್ ಆಗುತ್ತೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದ್ರೆ, ನಿರ್ಮಾಪಕರಿಗಂತೂ ಈ ಸಿನಿಮಾದಿಂದ ಲಾಭವೆಂದೇ ಹೇಳಲಾಗುತ್ತಿದೆ. ಯಾಕಂದ್ರೆ, ಯುವರತ್ನ ಕೆಜಿಎಫ್ ಚಾಪ್ಟರ್ 1 ಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಮಾರಾಟ ಆಗಿದೆ ಅನ್ನೋ ಚರ್ಚೆಯಾಗುತ್ತಿದೆ.
ಯುವರತ್ನ OTTಗೆ ಸೇಲ್ ಆದ ಮೊತ್ತವೆಷ್ಟು?
ಯುವರತ್ನ ಒಂದೇ ವಾರಕ್ಕೆ ಒಟಿಟಿಲ್ಲಿ ರಿಲೀಸ್ ಆಗ್ತಿರೋದ್ರಿಂದ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋ ಟಾಕ್ ಶುರುವಾಗಿದೆ. ಒಂದ್ಕಡೆ ಕೆಜಿಎಫ್ ಚಾಪ್ಟರ್ 1ಕ್ಕಿಂತಲೂ ಅಧಿಕ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋ ಮಾತು ಕೇಳಿಬರ್ತಿದೆ. ಯುವರತ್ನ ಅಮೆಜಾನ್ಗೆ ಸುಮಾರು ₹20 ಕೋಟಿಗೆ ಸೇಲ್ ಆಗಿದೆ ಅನ್ನೋದು ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಆದ್ರೆ, ಯುವರತ್ನ ತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಹಾಕಿಲ್ಲ.
₹18 ಕೋಟಿಗೆ ಸೇಲ್ ಆಗಿತ್ತು ಕೆಜಿಎಫ್ 1
ಹೊಂಬಾಳೆ ಸಂಸ್ಥೆನೇ ನಿರ್ಮಿಸಿರೋ ಕೆಜಿಎಫ್ ಚಾಪ್ಟರ್ 1 ಕೂಡ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿತ್ತು. ಆದ್ರೆ, ಕೆಜಿಎಫ್ ಬಿಡುಗಡೆಯಾಗಿ ಹಲವು ದಿನಗಳ ಬಳಿಕ ಸಿನಿಮಾ ಒಟಿಟಿಗೆಯಲ್ಲಿ ಕಂಡಿತ್ತು. ಹೀಗಿದ್ರೂ, ಸುಮಾರು ₹18 ಕೋಟಿಗೆ ಮಾರಾಟ ಆಗಿದೆ ಎಂದು ವರದಿಯಾಗಿತ್ತು.
ಪ್ರಾಫಿಟ್ನಲ್ಲಿ ಪವರ್ಸ್ಟಾರ್ ಯುವರತ್ನ
ಪವರ್ಸ್ಟಾರ್ ಯುವರತ್ನ ಸಿನಿಮಾ ಬಾಕ್ಸಾಫೀಸ್ನಲ್ಲೂ ಉತ್ತಮ ಗಳಿಕೆನೇ ಕಂಡಿದೆ. ಮೊದಲ 9 ದಿನದ ಗಳಿಕೆ ಒಟ್ಟು ₹51 ಕೋಟಿ ಎಂದು ಸಾಕ್ಷಿ ಪೋಸ್ಟ್ ವರದಿ ಮಾಡಿತ್ತು. ಇನ್ನು ಒಟಿಟಿಗೆಯಲ್ಲಿ ₹20 ಕೋಟಿಗೆ ಸೇಲ್ ಆಗಿದೆ. ಹೀಗಾಗಿ ₹70 ಕೋಟಿ ಲಾಭದಲ್ಲಿದೆ ಎನ್ನಲಾಗುತ್ತಿದೆ.
ಥಿಯೇಟರ್ನಲ್ಲೂ ಮುಂದುವರೆಯುತ್ತೆ ಅಪ್ಪು ಸಿನಿಮಾ
ಒಟಿಟಿಯಲ್ಲಿ ರಿಲೀಸ್ ಆಗ್ತಿದೆ ಅಂದ ಮಾತ್ರಕ್ಕೆ ಥಿಯೇಟರ್ನಿಂದ ಸಿನಿಮಾ ತೆಗೆಯೋದಿಲ್ಲ. ಚಿತ್ರಮಂದಿರದಲ್ಲೇ ಸಿನಿಮಾ ನೋಡ್ಬೇಕು ಅನ್ನೋರಿಗೆ ಅಲ್ಲೂ ಸಿನಿಮಾ ಇರುತ್ತೆ. ಕೊರೊನಾದಿಂದ ಮನೆ ಬಿಟ್ಟು ಹೊರ ಬರೋದಿಲ್ಲ ಅನ್ನೋರಿಗೆ ಒಟಿಟಿಯಲ್ಲಿ ಸಿನಿಮಾ ನೋಡ್ಬಹುದು.