ಕಳೆದ ವರ್ಷ ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿ ನಾನ್ ಬಾಹುಬಲಿ ಬಾಕ್ಸಾಫೀಸ್ ರೆಕಾರ್ಡ್ ಬರೆದ ಸಿನಿಮಾ ಅಲಾವೈಕುಂಠಪುರಂಲೊ. ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಅಭಿನಯದ ಈ ಚಿತ್ರವನ್ನ ಬಾಲಿವುಡ್ ಗೆ ರೀಮೇಕ್ ಮಾಡ್ತಿದ್ದಾರೆ. ಕಾರ್ತಿಕ್ ಆರ್ಯನ್, ಕೃತಿ ಸನೂನ್ ಲೀಡ್ ರೋಲ್ ಗಳಲ್ಲಿ ನಟಿಸೋದು ಪಕ್ಕಾ ಆಗಿದೆ. ಚಿತ್ರಕ್ಕೆ ಏಕ್ತಾ ಕಪೂರ್ ಬಂಡವಾಳ ಹೂಡುತ್ತಿದ್ದು, ಅಲ್ಲು ಅರವಿಂದ್ ಕೂಡ ಸಹ ನಿರ್ಮಾಪಕರಾಗಿ ಹಣ ಹಾಕ್ತಿದ್ದಾರೆ. ಇದೀಗ ಅಲಾವೈಕುಂಠಪುರಂಲೊ ಹಿಂದಿ ವರ್ಷನ್ ಗೆ ಬೊಂಬಾಟ್ ಟೈಟಲ್ ಫಿಕ್ಸ್ ಮಾಡಿದ್ದಾರೆ ಅನ್ನಲಾಗ್ತಿದೆ.
ಆಸ್ಪತ್ರೆಯಲ್ಲಿ ಹುಟ್ಟಿದ ಇಬ್ಬರು ಮಕ್ಕಳು ಅದಲು ಬದಲಾಗಿ ಬಡವನ ಮನೆಯಲ್ಲಿ ಬೆಳೆಯಬೇಕಾದವನು ಶ್ರೀಮಂತರ ಮನೆಯಲ್ಲೂ, ಶ್ರೀಮಂತರ ಮನೆಯಲ್ಲಿ ರಾಜಕುಮಾರನಂತೆ ಮರೆಯಬೇಕಾದವನು ಬಡವರ ಮನೆಯಲ್ಲಿ ಕಷ್ಟಪಡೋದು ಚಿತ್ರದ ಒನ್ ಲೈನ್ ಸ್ಟೋರಿ. ಕಥೆಗೆ ತಕ್ಕಂತೆ ಹಿಂದಿ ಚಿತ್ರಕ್ಕೆ ‘ಶಹಜಾದಾ’ ಅನ್ನೋ ಟೈಟಲ್ ಫಿಕ್ಸ್ ಮಾಡಿದ್ದಾರಂತೆ. ವೈಕುಂಠಪುರಂ ಅನ್ನೋ ಮನೆಯಲ್ಲಿ ನಡೆಯೋ ಕಥೆ ಆದ್ದರಿಂದ ತೆಲುಗಿನಲ್ಲಿ ಅಲಾವೈಕುಂಠಪುರಂಲೊ ಅನ್ನೋ ಹೆಸರಿಟ್ಟಿದ್ದರು. ತೆಲುಗಿನಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಕಟ್ಟಿಕೊಟ್ಟಿದ್ದ ಚಿತ್ರಕ್ಕೆ ಹಿಂದಿಯಲ್ಲಿ ರೋಹಿತ್ ಧವನ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಮನೀಷಾ ಕೋಹಿರಾಲ, ಪರೇಶ್ ರಾವಲ್ ಚಿತ್ರದ ಪಾತ್ರವರ್ಗಕ್ಕೆ ಆಯ್ಕೆ ಆಗಿದ್ದಾರಂತೆ. ಹಿಂದಿ ನೇಟಿವಿಟಿಕೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡು ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನ ನಡೀತಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದ್ದು, ‘ರಾಮುಲೋ ರಾಮುಲೋ’ ಹಾಡಿಗೆ ಕಾರ್ತಿಕ್ ಆರ್ಯನ್ ಡ್ಯಾನ್ಸ್ ಹೇಗಿರತ್ತೋ ಕಾದು ನೋಡಬೇಕು.