RRR ರಾಜಮೌಳಿ ಮತ್ತೊಂದು ದುಬಾರಿ ಸಿನಿಮಾ. ಈ ಸಿನಿಮಾದ ದೃಶ್ಯ ವೈಭವ. ಇಬ್ಬರು ಸೂಪರ್ ಸ್ಟಾರ್ಗಳ ಮಹಾ ಸಂಗಮವನ್ನ ನೋಡಲು ಸಿನಿಪ್ರೇಮಿಗಳು ಕಾತುರದಿಂದ ಕಾಯ್ತಿದ್ದಾರೆ. ಹೀಗಾಗಿ ರಾಜಮೌಳಿಯ ಸಿನಿಮಾ ಭಾರತದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಎನಿಸಿಕೊಂಡಿದೆ. RRR ಸಿನಿಮಾವನ್ನ ಕಣ್ತುಂಬಿಕೊಳ್ಳಲು ಕಾದುಜ ಕೂತಿರೋರಿಗೇನು ಕಮ್ಮಿಯಿಲ್ಲ. ವಿಷಯ ಹೀಗಿರುವಾಗ್ಲೇ ಭರ್ಜರಿ ಸುದ್ದಿಯೊಂದು ಸಿಕ್ಕಿದೆ.
RRR ಸಿನಿಮಾಗೆ ಆಲಿಯಾ ಭಟ್ ಎಂಟ್ರಿ ಕೊಡ್ತಿದ್ದ ಹಾಗೇ ಇಡೀ ತಂಡಕ್ಕೆ ಹೊಸ ಜೋಷ್ ಬಂದಿತ್ತು. ಅದ್ರಲ್ಲೂ ಆಲಿಯಾ ಸೀತೆ ಅಂದಾಗ್ಲಂತೂ ಉತ್ತರ ಭಾರತದಲ್ಲಿ ಮತ್ತಷ್ಟು ಪ್ಯಾನ್ಸ್ ಹುಟ್ಕೊಂಡಿದ್ರು. ರಾಮ್ ಚರಣ್ಗೆ ಆಲಿಯಾ ನಾಯಕಿ ಅಂದ್ಮೇಲೆ ತೆಲುಗು ಮಂದಿ ಫುಲ್ ಫಿದಾ ಆಗಿದ್ದರು. ಇವ್ರಿಬ್ಬರ ಕಾಂಬಿನೇಷನ್ ಹೇಗಿರುತ್ತೆ? ಎಷ್ಟು ಹಾಡುಗಳಿವೆ ಅನ್ನೋ ಕುತೂಹಲ ದುಪ್ಪಟ್ಟಾಗಿತ್ತು. ಆ ಕುತೂಹಲಕ್ಕೀಗ ತೆರೆಬಿದ್ದಿದೆ. ಆಲಿಯಾ ರಾಮ್ ಚರಣ್ ಜೊತೆ ಎರಡು ಡ್ಯುಯೆಟ್ ಸಾಂಗ್ ಹಾಡಲಿದ್ದಾರೆ.
ಇದೇ ಏಪ್ರಿಲ್ ತಿಂಗಳಿನಿಂದ ಆಲಿಯಾ RRR ತಂಡವನ್ನ ಹೈದ್ರಾಬಾದಿನಲ್ಲಿ ಸೇರಿಕೊಳ್ಳಲಿದ್ದಾರೆ. ಈ ವೇಳೆ ಎರಡು ಹಾಡುಗಳನ್ನ ರಾಜಮೌಳಿ ಅದ್ಧೂರಿಯಾಗಿ ಚಿತ್ರೀಕರಿಸಲು ಮುಂದಾಗಿದ್ದಾರೆ. ಹೀಗಾಗಿ ಆಲಿಯಾ ಹಾಗೂ ರಾಮ್ ಚರಣ್ ಜೋಡಿ ತೆರೆಮೇಲೆ ರಂಜಿಸುತ್ತೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ಆಲಿಯಾ ಗಂಗೂಬಾಯಿ ಕಾಥೇವಾಡಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಏಪ್ರಿಲ್ ನಲ್ಲಿ RRR ಮುಗಿಸಿ, ಮತ್ತೆ ಬ್ರಹ್ಮಾಸ್ತ್ರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಈ ವರ್ಷ ಆಲಿಯಾ ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್ ಆಗಲಿದೆ.