ಕೋವಿಡ್ ಕಾಲದಲ್ಲಿ ಜನ ಮನೆಯಲ್ಲೇ ಕುಳಿತು ಆರಾಮಾಗಿ ಸಿನಿಮಾಗಳನ್ನು ನೋಡೋದು ಅಭ್ಯಾಸ ಮಾಡ್ಕೊಂಡಿದ್ದಾರೆ. ಒಟಿಟಿ ಪ್ಲಾಟ್ ಫಾರ್ಮ್ ಗಳು ಉತ್ತುಂಗಕ್ಕೇರಿದ್ದೇ ಆಗ. ನೆಟ್ ಫ್ಲಿಕ್ಸ್ ಸಿರಿವಂತರ ನೆಚ್ಚಿನ ಒಟಿಟಿ ಆದ್ರೆ ಅಮೇಜಾನ್ ಪ್ರೈಮ್ ಒಂದು ರೀತಿಯಲ್ಲಿ ಮಧ್ಯಮ ವರ್ಗದವ್ರ ಫೇವರಿಟ್ ಆಗಿದೆ. ಇದೀಗ ಅಮೇಜಾನ್ ಪ್ರೈಮ್ ವಿಡಿಯೋ ಭಾರತದಲ್ಲಿ ಸಿನಿಮಾ ನಿರ್ಮಾಣಕ್ಕೂ ಕೈಹಾಕಿದೆ.
ಇದುವರೆಗೆ ತಾಂಡವ್, ಪಾತಾಳ್ ಲೋಕ್ ಮುಂತಾದ ಹಿಂದಿ ಸೀರೀಸ್ ಗಳನ್ನು ನಿರ್ಮಿಸಿದೆ ಅಮೇಜಾನ್ ಪ್ರೈಂ ವಿಡಿಯೋ. ಆದ್ರೆ ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾವೊಂದರ ನಿರ್ಮಾಣಕ್ಕೆ ಕೈ ಜೋಡಿಸಿದೆ. ಚಿತ್ರ ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’.
ರಾಮ್ ಸೇತು ಅನ್ನೋದೇ ಒಂದು ವಿವಾದಾತ್ಮಕ ವಿಚಾರ. ಮೊದಲೇ ಅಮೇಜಾನ್ ಪ್ರೈಮ್ ನಿರ್ಮಿಸಿದ್ದ ಸೀರೀಸ್ ಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಇತಿಹಾಸವಿದೆ. ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂಥಾ ವಿಚಾರಗಳು ಇವೆ ಎನ್ನುವ ಕಾರಣಕ್ಕೆ ತಾಂಡವ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ರಾಮಸೇತು ದಶಕಗಳಿಂದ ಚರ್ಚೆಯಲ್ಲಿರೋ ಸೂಕ್ಷ್ಮ ವಿಚಾರ. ಹಾಗಾಗಿ ಬಹಳ ಎಚ್ಚರಿಕೆಯಿಂದ ಈ ಸಿನಿಮಾ ಮಾಡಬೇಕಿದೆ. ಸಿನಿಮಾ ತಯಾರಿಕೆ ಮಾತ್ರವಲ್ಲದೆ ನಾಯಕ ಅಕ್ಷಯ್ ಕುಮಾರ್ ಮೇಲೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಜಾಕೆಲಿನ್ ಫರ್ನಾಂಡೀಸ್ ಮತ್ತು ನುಶ್ರತ್ ಬರೂಚಾ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದು ಅಭಿಷೇಕ್ ಶರ್ಮಾ ‘ರಾಮ್ ಸೇತು’ ನಿರ್ದೇಶಿಸಲಿದ್ದಾರೆ.