ಮಾರ್ಚ್ 12 ರಂದು ಆದಿಪುರುಷ್ ತಂಡ ಸೀತೆ ಯಾರು ಅನ್ನೋದನ್ನ ಘೋಷಣೆ ಮಾಡಿತ್ತು. ಓಂ ರಾವುತ್ ನಿರ್ದೇಶನದ ಸಿನಿಮಾದಲ್ಲಿ ರಾಮನಾಗಿ ನಟಿಸುತ್ತಿರೋ ಪ್ರಭಾಸ್ಗೆ ಸೀತೆ ಕೃತಿ ಸನನ್ ಎಂದು ಘೋಷಿಸಲಾಗಿತ್ತು. ಇದ್ರೊಂದಿಗೆ ಇನ್ನೂ ರಾಮಾಯಣವನ್ನ ತೆರೆಮೇಲೆ ತರೋಕೆ ಇನ್ನೂ ಎರಡು ಸಿನಿಮಾ ರೆಡಿಯಾಗುತ್ತಿದೆ. ರಾಮಾಯಣ 3Dಯಲ್ಲಿ ದೀಪಿಕಾ ಪಡುಕೋಣೆ, ಸೀತೆ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್ ಎನ್ನಲಾಗುತ್ತಿದೆ.
ಬಾಲಿವುಡ್ನಲ್ಲಿ ರಾಮಾಯಣ ಹಿನ್ನೆಲೆಯುಳ್ಳ ಮೂರು ಸಿನಿಮಾ ನಿರ್ಮಾಣ ಹಂತದಲ್ಲಿದೆ. ಓಂ ರಾವತ್ ನಿರ್ದೇಶನದ ಆದಿಪುರುಷ್ ಒಂದಾದ್ರೆ, ಮಧು ಮಾಂಟೇನಾ ನಿರ್ಮಾಣದ ರಾಮಾಯಣ 3Dಯಲ್ಲಿ ದೀಪಿಕಾ ಸೀತೆ, ಹೃತಿಕ್ ರೋಷನ್ ರಾವಣ. ಇದ್ರೊಂದಿಗೆ ರಾಜಮೌಳಿ ತಂದೆ ಕೆವಿ ವಿಜಯೇಂದ್ರ ಪ್ರಸಾದ್ ಹೆಣೆದಿರೋ ಸೀತಾ ಕಥೆಗೆ ಕರೀನಾ ಕಪೂರ್ ಖಾನ್ಗೆ ಅಪ್ರೋಚ್ ಮಾಡಲಿದ್ಯಂತೆ.
ಬಾಹುಬಲಿ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಕಥೆ ಅಂದ್ಮೇಲೆ ಸೀತಾ ಉಳಿದೆರಡು ಸಿನಿಮಾಗಳಿಗೆ ಪೈಪೋಟಿ ನೀಡೋದು ಗ್ಯಾರಂಟಿ. ಅಲ್ಲದೆ ಇದು ಸೀತೆಯ ದೃಷ್ಟಿಕೋನದಲ್ಲಿ ರಾಮಾಯಣ ಕಥೆ ಹೇಳಲಿದ್ದಾರೆ. ಹೀಗಾಗಿ ನಿರ್ದೇಶಕ ಲೌಕಿಕ್ ದೇಸಾಯಿ ಮೊದಲ ಆಯ್ಕೆ ಕರೀನಾ ಕಪೂರ್ ಖಾನ್ ಆಗಿದ್ದರು. ಈಗಾಗ್ಲೇ ಒಂದು ಸುತ್ತಿನ ಕಥೆ ಹೇಳಲಾಗಿದ್ದು, ಬೇಬೋಗೆ ಇಷ್ಟ ಪಟ್ಟಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ದೀಪಿಕಾ ಹಾಗೂ ಕೃತಿ ಸನನ್ ಸೀತೆಯಾಗಿ ನಟಿಸುತ್ತಿರೋ ಸಿನಿಮಾದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಇರೋದಿಲ್ಲ. ಇದು ಸೀತೆ ಆ್ಯಂಗಲ್ನಲ್ಲಿ ಕಥೆ ಹೇಳ್ತಿರೋದ್ರಿಂದ ಕರೀನಾಗೆ ಫುಲ್ ಖುಷಿಯಾಗಿದ್ದಾರೆಂದು ಬಾಲಿವುಡ್ ಹಂಗಾಮ ಪೋರ್ಟಲ್ ವರದಿ ಮಾಡಿದೆ. ಅದೇ ಕರೀನಾ ಒಪ್ಪದೆ ಇದ್ದರೆ ನಿರ್ದೇಶಕರ ಎರಡನೇ ಆಯ್ಕೆ ಆಲಿಯಾ ಭಟ್ ಎನ್ನಲಾಗಿದೆ.