ಕನ್ನಡ ಚಿತ್ರರಂಗ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕ ಚಂದ್ರಶೇಖರ್ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಚಂದ್ರಶೇಖರ್ ಅವ್ರಿಗೆ ಕೊರೊನಾ ಸೋಂಕು ತಗುಲಿತ್ತು. ಒಂದಿಷ್ಟು ದಿನಗಳ ಚಿಕಿತ್ಸೆಯ ಬಳಿಕ ಕೊರೊನಾ ನೆಗೆಟಿವ್ ಬಂದಿದ್ದು, ವಿಶ್ರಾಂತಿ ಪಡೆಯುತ್ತಿದ್ರು. ಆದ್ರೆ, ಇದ್ದಕ್ಕಿದ್ದಂತೆ ಶ್ವಾಸಕೋಸದ ಸಮಸ್ಯೆ ಕಾಣಿಸಿಕೊಂಡಿತ್ತು.
ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ನಿರ್ಮಾಪಕರನ್ನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಸರಿ ಸುಮಾರು 3 ಗಂಟೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಚಂದ್ರಶೇಖರ್ ಕೂಡ ರಾಮು ಅವ್ರಂತೆಯೇ ದುಬಾರಿ ಸಿನಿಮಾಗಳಿಗೆ ಹೆಸರಾಗಿದ್ದರು. ರವಿಚಂದ್ರನ್ ನಟಿಸಿದ್ದ ಅಣ್ಣಯ್ಯ, ಪುನೀತ್ ರಾಜ್ಕುಮಾರ್ ಅಭಿನಯದ ಬಿಂದಾಸ್, ಗಣೇಶ್ ನಟನೆಯ ಏನೋ ಒಂಥರಾ, ಸುದೀಪ್ ರನ್ನ, ಸೇರಿದಂತೆ ಹಲವು ಸಿನಿಮಾಗಳನ್ನ ನಿರ್ಮಾನಿಸಿದ್ದರು.
ಇತ್ತೀಚೆಗೆ ಹೊಚ್ಚ ಹೊಸ ಸಿನಿಮಾವನ್ನೂ ಘೋಷಣೆ ಮಾಡಿದ್ದರು. ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ನಟಿಸಬೇಕಿದ್ದ ಸಿನಿಮಾವೊಂದನ್ನ ಚಂದ್ರಶೇಖರ್ ಅನೌನ್ಸ್ ಮಾಡಿದ್ರು. ಆದ್ರೆ ವಿಧಿಯಾಟ ಬೇರೆನೇ ಆಗಿತ್ತು. ಕೋಟಿ ನಿರ್ಮಾಪಕ ರಾಮು ಅವ್ರ ಜೊತೆನೇ ಸ್ಯಾಂಡಲ್ವುಡ್ ಮತ್ತೊಬ್ಬ ನಿರ್ಮಾಪಕರನ್ನ ಕಳೆದುಕೊಂಡಿದೆ.